ಸೋಮವಾರ, ಜನವರಿ 20, 2020
25 °C

ಕಪ್ಪತಗುಡ್ಡ ಪರಿಸರ ಬಚಾವೋ

`ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡರಗಿ:   ಚಿತ್ರದುರ್ಗದ ಜನಪರ ಸಂಘಟನೆಗಳ ಒಕ್ಕೂಟ, ಧಾರವಾಡದ ಸಮಾಜ ಪರಿವರ್ತನ ಸಮುದಾಯ, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣಾ ರಾಷ್ಟ್ರೀಯ ಸಮಿತಿ ಮೊದಲಾದ ಸಂಘಟನೆಗಳು `ಕಪ್ಪತಗುಡ್ಡ ಚಲೋ, ಪರಿಸರ ಬಚಾವೋ~ ಆಂದೋಲನದ ಅಂಗವಾಗಿ ಮಂಗಳವಾರ ಮುಂಜಾನೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕಪ್ಪತಗುಡ್ಡ ಜಾಗೃತಿ ಜಾಥಾ ಏರ್ಪಡಿಸಿದ್ದವು.ಚಿತ್ರದುರ್ಗ, ಹರಪನಹಳ್ಳಿ, ಹೂವಿನಹಡಗಲಿ ಮಾರ್ಗವಾಗಿ ಪಟ್ಟಣಕ್ಕೆ ಆಗಮಿಸಿದ ಜಾಥಾದಲ್ಲಿ ಪಟ್ಟಣದ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಗದ್ಗುರು ಅನ್ನದಾನೀಶ್ವರ ಕಾಲೇಜಿನಿಂದ ಹೊರಟ ಜಾಥಾ ಪರಿಸರ ಹಾಗೂ ಕಪ್ಪತಗುಡ್ಡಗಳ ಪರವಾಗಿ ಹಾಗೂ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರ ವಿರುದ್ಧ ಘೋಷಣೆ ಕೂಗುತ್ತಾ ಪಟ್ಟಣದ ಕಾಲೇಜು ರಸ್ತೆ, ಕೊಪ್ಪಳ ಕ್ರಾಸ್, ಜಾಗೃತ ಸರ್ಕಲ್, ಮಾರುಕಟ್ಟೆ ರಸ್ತೆ ಮಾರ್ಗವಾಗಿ ನಂತರ ಜಗದ್ಗುರು ಅನ್ನದಾನೀಶ್ವರ ಮಠಕ್ಕೆ ಆಗಮಿಸಿತು. ನಂತರ ಜಗದ್ಗುರು ಅನ್ನದಾನೀಶ್ವರ ಮಠದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಡಾ.ಅನ್ನದಾನೀಶ್ವರ ಸ್ವಾಮೀಜಿ `ಜೀವ ವೈವಿಧ್ಯ, ಪ್ರಾಣಿ ಸಂಕುಲ, ಔಷಧೀಯ ಸಸ್ಯ ಮೊದಲಾದವುಗಳಿಗೆ ಆಶ್ರಯ ತಾಣವಾಗಿರುವ ಕಪ್ಪತಗುಡ್ಡ ಈ ಭಾಗದ ಜೀವನಾಡಿಯಾಗಿದೆ. ಅದರ ಉಳಿವು ನಮ್ಮೆಲ್ಲರ ಉಳಿವಾಗಿದ್ದು, ಯಾವ ಕಾರಣಕ್ಕೂ ಕಪ್ಪತಗುಡ್ಡವನ್ನು ಹಾಳು ಮಾಡಲು ಬಿಡಬಾರದು~ ಎಂದು ತಿಳಿಸಿದರು.  `ದೇಶದಲ್ಲಿರುವ ಎಲ್ಲ ರೀತಿಯ ನೈಸರ್ಗಿಕ ಸಂಪನ್ಮೂಲಗಳು ಸಮುದಾಯದ ಸ್ವತ್ತಾಗಬೇಕು. ಅವುಗಳನ್ನು ಬಳಸುವ ಕುರಿತಂತೆ ಆಯಾ ಗ್ರಾಮಗಳಲ್ಲಿ ಜರುಗುವ ಗ್ರಾಮ ಸಭೆಗಳಲ್ಲಿ ಅಂತಿಮ ನಿರ್ಣಯ ಕೈಗೊಳ್ಳುವಂತಾಗಬೇಕು. ಅಂದಾಗ ಮಾತ್ರ ಈ ದೇಶದ ನೆಲ, ಜಲಗಳು ಸುಕ್ಷಿತವಾಗಿರಬಲ್ಲವು~ ಎಂದು ಸಮಾರಂಭದಲ್ಲಿ ಭಾಗವಹಿಸಿದ್ದ ಮಲ್ಲಿಕಾರ್ಜುನರಡ್ಡಿ ತಿಳಿಸಿದರು.`ದುರಾಸೆಗೆ ಬಿದ್ದಿರುವ ರಾಜ್ಯಸರಕಾರದ ಕೆಲವು ಜನಪ್ರತಿನಿಧಿಗಳು ಭೂಸ್ವಾಧೀನವನ್ನು ಒಳಗೊಂಡಂತೆ ರಾಜ್ಯದ ವಿವಿಧ ಬಗೆಯ ನೈಸರ್ಗಿಕ ಸಂಪತ್ತನ್ನು ಕೊಳ್ಳೆ ಹೊಡೆಯುವುದು ತಮ್ಮ ಜನ್ಮಸಿದ್ಧ ಹಕ್ಕೆಂದು ಭಾವಿಸಿದ್ದು, ಸರಕಾರ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಭೂಮಿ ಹಾಗೂ ನಿಸರ್ಗವನ್ನೇ ನಂಬಿಕೊಂಡು ಬದುಕುತ್ತಿರುವ ಮಣ್ಣಿನ ಮಕ್ಕಳಿಗೆ ಸರಕಾರ ಈ ಕುರಿತು ಭರವಸೆ ನೀಡಬೇಕು~ ಎಂದು ವೈ.ಎನ್.ಗೌಡರ ಒತ್ತಾಸಿದರು. ಮಂಜುನಾಥ ಇಟಗಿ ಸ್ವಾಗತಿಸಿ ಕಾರ್ಯಕ್ರಮ ನಿರೂಸಿದರು. 

ಸಿ.ಎಸ್.ಅರಸನಾಳ ವಂದಿಸಿದರು. ಡಾ.ಅನ್ನದಾನೀಶ್ವರ ಸ್ವಾಮೀಜಿ ಅವರು ಜಾಥಾಕ್ಕೆ ಚಾಲನೆ ನೀಡಿದರು. ಮುಖಂಡರಾದ ಜಅವಿ ಸಮೀತಿ ಗೌರವ ಕಾರ್ಯದರ್ಶಿ ಎ.ಕೆ.ಬೆಲ್ಲದ, ಜಸ್ಬಾಲಸಿಂಗ್, ಡಾ.ಬಸವರಾಜ ಮೇಟಿ, ಬಿಜೆಪಿ ಮುಖಂಡ ಮಂಜುನಾಥ ಇಟಗಿ, ತಾಲ್ಲೂಕು ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್.ಗೌಡರ, ರೈತ ಮುಖಂಡ ಈಶ್ವರಪ್ಪ ಹಂಚಿನಾಳ, ಪುರಸಭೆ ಸದಸ್ಯ ರಾಮಕೃಷ್ಣ ದೊಡ್ಡಮನಿ, ನಾಗರಾಜ ಗಚ್ಚಿನಮನಿ, ಪ್ರಾಚಾರ್ಯ ಎಸ್.ಬಿ.ಕರಿಭರಮಗೌಡರ, ಪಾಲಾಕ್ಷಿ ಗಡದಿನ್ನಿ, ಶರಣಪ್ಪ ಕಡ್ಡಿ, ಸಿ.ಎಸ್.ಅರಸನಾಳ, ಲಲಿತಾ, ಪುಲ್ಲೆ ಜಾಥಾದಲ್ಲಿ ಪಾಲ್ಗೊಂಡಿದ್ದರು.

 

ಪ್ರತಿಕ್ರಿಯಿಸಿ (+)