ಶನಿವಾರ, ಜನವರಿ 18, 2020
19 °C

ಕಬಡ್ಡಿ: ಬಂಡಿಹಟ್ಟಿ ಬ್ಲೂಸ್‌ ಕ್ಲಬ್‌ಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಬಳ್ಳಾರಿಯ ಬಂಡಿಹಟ್ಟಿ ಪ್ರದೇಶದ ಬ್ಲೂಸ್‌ ಕ್ಲಬ್‌ ತಂಡವು ತಾಲ್ಲೂಕಿನ ಜಾನೆಕುಂಟೆ ಗ್ರಾಮದಲ್ಲಿ ಭಾನುವಾರ, ಸೇವಾಲಾಲ್‌ ಟ್ರಸ್ಟ್‌ ಏರ್ಪಡಿಸಿದ್ದ ಮುಕ್ತ ಕಬಡ್ಡಿ ಪಂದ್ಯಾವಳಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತು.ಒಟ್ಟು 12 ತಂಡಗಳು ಭಾಗವಹಿಸಿದ್ದ ಪಂದ್ಯಾವಳಿಯ ಫೈನಲ್‌ ಪಂದ್ಯದಲ್ಲಿ ಬ್ಲೂಸ್‌ ಕ್ಲಬ್‌ ತಂಡ ಯರ್ರಂಗಳಿ ತಂಡವನ್ನು 23–18 ಪಾಯಿಂಟ್‌ಗಳಿಂದ ಸೋಲಿಸಿ ಪ್ರಶಸ್ತಿಯೊಂದಿಗೆ ಟ್ರೋಫಿ ಹಾಗೂ ₨ 3000 ನಗದು ಬಹುಮಾನ ಗಳಿಸಿತು.ಬಂಡಿಹಟ್ಟಿ ತಂಡದ ಷಣ್ಮುಖ, ಮೌನೇಶ, ಪ್ರಕಾಶ ಯಾದವ್‌, ಯರ್ರಂಗಳಿ ತಂಡದ ಪುರುಷೋತ್ತಮ ಹಾಗೂ ಗೋವಿಂದ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದರು.ಸೆಮಿಫೈನಲ್‌ನಲ್ಲಿ ಬ್ಲೂಸ್‌ ತಂಡವು ಕುಡತಿನಿ ತಂಡವನ್ನು, ಯರ್ರಂಗಳಿ ತಂಡವು ಕಂಪ್ಲಿ ತಂಡವನ್ನು ಸೋಲಿಸಿದ್ದವು. ಗ್ರಾಮದ ಸೇವಾಲಾಲ್‌ ದೇವಸ್ಥಾನದ ಆವರಣದಲ್ಲಿ ನಡೆದ ಪಂದ್ಯಾವಳಿಯನ್ನು ಗ್ರಾಮಸ್ಥರು, ಯುವಕರು, ಗ್ರಾಮ ಪಂಚಾಯಿತಿ ಸದಸ್ಯರು ವೀಕ್ಷಿಸಿ ಪ್ರೋತ್ಸಾಹ ನೀಡಿದರು. ಇಬ್ರಾಹಿಂಪುರ, ಬಳ್ಳಾರಿಯ ಇತರ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

ಪ್ರತಿಕ್ರಿಯಿಸಿ (+)