ದಾಸ್ಯದ ಸಂಕೇತಗಳಾದ `ಹೈದರಾಬಾದ್ ಕರ್ನಾಟಕ~, `ಮುಂಬಯಿ ಕರ್ನಾಟಕ~ ಎಂಬ ಹೆಸರುಗಳನ್ನು ತೆಗೆದು ಹಾಕಿ ಅವುಗಳ ಬದಲು `ಕಲ್ಯಾಣ ಕರ್ನಾಟಕ~, `ಕಿತ್ತೂರು ಕರ್ನಾಟಕ~ ಎಂದು ಆ ಪ್ರದೇಶಗಳನ್ನು ನಾಮಕರಣ ಮಾಡಲು ಹಲವು ವರ್ಷಗಳಿಂದ ನಾವು ಮಾಡಿಕೊಳ್ಳುತ್ತಿರುವ ಕೋರಿಕೆಯನ್ನು ಮನ್ನಿಸಿ ಈಚೆಗೆ ಮುಖ್ಯಮಂತ್ರಿ ಸದಾನಂದಗೌಡರು `ಹೈ. ಕ.~ ವನ್ನು `ಕಲ್ಯಾಣ ಕರ್ನಾಟಕ~ ಎಂದು ನಾಮಕರಣ ಮಾಡುವುದಾಗಿ ಘೋಷಿಸಿರುವುದು ಅತ್ಯಂತ ಸ್ವಾಗತಾರ್ಹವಾಗಿದೆ.

ಅದು ನಮ್ಮ ಕೋರಿಕೆಯ ಅರ್ಧ ಭಾಗ. ಅದರ ಜೊತೆ ಜೊತೆಯಲ್ಲೇ `ಮುಂ. ಕ.~ ವನ್ನು `ಕಿತ್ತೂರು ಕರ್ನಾಟಕ~ ಎಂದು ನಾಮಕರಣ ಮಾಡಿ ಆ ಬಗ್ಗೆ ಅಧಿಕೃತ ನಿರ್ಣಯವನ್ನು ತೆಗೆದುಕೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ.

ಕಲ್ಯಾಣದ ಬಸವಣ್ಣನವರು ಸಮಾಜೋ ಧಾರ್ಮಿಕ ಮುಖಂಡರಾದಂತೆ, ಕಿತ್ತೂರಿನ ರಾಣಿ ಚನ್ನಮ್ಮ ಶೌರ್ಯ ಸ್ವಾಭಿಮಾನದ ಸಂಕೇತವಾಗಿದ್ದಾಳೆ - ಎಂಬುದನ್ನು ಒತ್ತಿ ಹೇಳುವ ಅಗತ್ಯವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.