ಶನಿವಾರ, ಜನವರಿ 25, 2020
28 °C

ಕಳ್ಳರ ಕಾಟ ತಪ್ಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಪೂಜಿನಗರ 2ನೇ ಹಂತದಲ್ಲಿ ರಾತ್ರಿ ವೇಳೆ ವಾಹನಗಳು ಹಾಗೂ ವಿಶೇಷವಾಗಿ ಸೈಕಲ್‌ಗಳು ಕಳ್ಳತನ ಜಾಸ್ತಿಯಾಗಿದೆ.ಇತ್ತೀಚಿಗೆ 3 `ಎ~ ಮುಖ್ಯ ರಸ್ತೆಯಲ್ಲಿ ಬಾಗಿಲನ್ನು ಕೊರೆದು ಕಳ್ಳತನಕ್ಕೆ ಪ್ರಯತ್ನಿಸುತ್ತಿದ್ದರು. ಎದುರು ಮನೆಯವರು ನೋಡಿ ಕಿರುಚಿದಾಗ ಕಳ್ಳರು ಪರಾರಿಯಾದರು. ಇಂಥ ಘಟನೆಗಳಿಂದ ನಾಗರಿಕರು ತಲ್ಲಣಗೊಂಡಿದ್ದಾರೆ. ಪೊಲೀಸರು ಇತ್ತ ಕಡೆ ಹೆಚ್ಚು ಗಸ್ತು ಹಾಕಲಿ ಎಂದು ಕೋರಲಾಗುತ್ತದೆ. 

ಪ್ರತಿಕ್ರಿಯಿಸಿ (+)