ಕಾಂಗ್ರೆಸ್ ಕಾರ್ಯಕರ್ತರ ಬೈಕ್ ಜಾಥಾ

ಮಾಗಡಿ: ಸಚಿವ ಡಿ.ಕೆ.ಶಿವಕುಮಾರ್ ಭಾವಚಿತ್ರವಿರುವ ಕೈ ಗಡಿಯಾರ ಮತ್ತು ಟೀ ಶರ್ಟ್ ಗಳನ್ನು ಕೆಪಿಸಿಸಿ ಸದಸ್ಯ ಎ.ಮಂಜುನಾಥ ವಿತರಿಸಿದರು. ಕುಣಿಗಲ್ ಮಾರ್ಗವಾಗಿ ಮೈಸೂರಿಗೆ ತೆರಳುತ್ತಿದ್ದ ರಾಹುಲ್ ಗಾಂಧಿ ರೋಡ್ ಷೋ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾವಿರಾರು ಯುವ ಕಾಂಗ್ರೆಸ್ ಕಾರ್ಯಕರ್ತರು ಬೈಕ್ ಜಾಥಾ ನಡೆಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬಿ.ವಿ.ಜಯರಾಮು, ಜುಟ್ಟನಹಳ್ಳಿ ಜಯರಾಮಯ್ಯ, ಪುರಸಭಾ ಮಾಜಿ ಅಧ್ಯಕ್ಷರಾದ ರಂಗಹನುಮಯ್ಯ, ಪಿ.ವಿ.ಸೀತಾರಾಂ, ಟಿ.ಭೋಗೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಶಶಾಂಕ್ ರೇವಣ್ಣ, ಉಪಾಧ್ಯಕ್ಷ ಕಾರ್ತಿಕ್, ಪುರಸಭಾ ಸದಸ್ಯರಾದ ಎಂ.ಎನ್.ಮಂಜುನಾಥ, ಎಂ.ಬಿ.ಮಹೇಶ್, ಶಿವಕುಮಾರ್, ನರಸಿಂಹಯ್ಯ, ನಯಾಜ್ ಅಹಮದ್, ಎಸ್.ಮಹದೇವ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಬೈಕ್ ಜಾಥಾದ ಅಂಗವಾಗಿ ಮಾಗಡಿ ಕುಣಿಗಲ್ ರಸ್ತೆಯಲ್ಲಿ ಅರ್ಧ ಗಂಟೆಯವರೆಗೆ ರಸ್ತೆ ತಡೆ ಉಂಟಾಗಿ ಸಂಚಾರಕ್ಕೆ ತೊಂದರೆಯಾಯಿತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.