ಸೋಮವಾರ, ಏಪ್ರಿಲ್ 19, 2021
32 °C

ಕಾಗ್ನಿಝೆಂಟ್ ಲಾಭ ರೂ.1606 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಹೆಚ್ಚು ವರಮಾನ ಗಳಿಸುವ ಮೂಲಕ `ಇನ್ಫೋಸಿಸ್~ ಕಂಪೆನಿಯನ್ನು ಹಿಂದಿಕ್ಕಿದ್ದ `ಕಾಗ್ನಿಝೆಂಟ್~ ನಂತರದ ತ್ರೈಮಾಸಿಕದಲ್ಲೂ ತನ್ನ ಹಿರಿಮೆ ಕಾಯ್ದುಕೊಂಡಿದೆ. ಜುಲೈ-ಸೆಪ್ಟೆಂಬರ್‌ನಲ್ಲಿ `ಕಾಗ್ನಿಝೆಂಟ್~ 189.20 ಕೋಟಿ ಡಾಲರ್ (ರೂ. 10292 ಕೋಟಿ) ವರಮಾನ ಸಂಪಾದಿಸಿ ಶೇ 18.20ರಷ್ಟು ಪ್ರಗತಿ ದಾಖಲಿಸಿದೆ.ಸಾಫ್ಟ್‌ವೇರ್ ರಫ್ತು ಕ್ಷೇತ್ರದಲ್ಲಿ ದೇಶದ 2ನೇ ಅತಿದೊಡ್ಡ ಕಂಪೆನಿಯಾಗಿರುವ ಇನ್ಫೋಸಿಸ್ ವರಮಾನ ಜುಲೈ-ಸೆಪ್ಟೆಂಬರ್‌ನಲ್ಲಿ 179 ಕೋಟಿ ಡಾಲರ್‌ನಷ್ಟಿದೆ. ಪ್ರಥಮ ಸ್ಥಾನದಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ವರಮಾನ 290 ಕೋಟಿ ಡಾಲರ್ ಇದೆ.ಅಮೆರಿಕದ `ನಾಸ್ಡಾಕ್~ ಷೇರು ವಿನಿಮಯ ಕೇಂದ್ರ ನೋಂದಾಯಿತ ಕಂಪೆನಿ`ಕಾಗ್ನಿಝೆಂಟ್~ನ ಪ್ರಸಕ್ತ ತ್ರೈಮಾಸಿಕದ ನಿವ್ವಳ ಲಾಭ 27.69 ಕೋಟಿ ಡಾಲರ್‌ಗೆ (ರೂ. 1506 ಕೋಟಿ) ಹೆಚ್ಚಿದೆ. ಹಿಂದಿನ ವರ್ಷದ ಇದೇ ಅವಧಿಯ ಲಾಭ 22.71 ಕೋಟಿ ಡಾಲರ್‌ಗೆ ಹೋಲಿಸಿದರೆ ಶೇ 22ರಷ್ಟು ವೃದ್ಧಿಯಾಗಿದೆ.`ನಮ್ಮ ಕಂಪೆನಿ ಎಲ್ಲ ಸೇವಾ ವಲಯ-ಪ್ರದೇಶಗಳಲ್ಲಿನ ವಹಿವಾಟಿನಲ್ಲಿಯೂ ಉತ್ತಮ ಪ್ರಗತಿ ದಾಖಲಿಸುತ್ತಿರುವುದೇ ಈಗಿನ ಸಾಧನೆಗೆ ಕಾರಣ~ ಎಂದು ಕಾಗ್ನಿಝೆಂಟ್ ಅಧ್ಯಕ್ಷ ಗಾರ್ಡನ್ ಕೊಬಮ್ ಹೇಳಿದ್ದಾರೆ.ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ 194 ಕೋಟಿ ಡಾಲರ್ ವರಮಾನ ಗಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಏಪ್ರಿಲ್-ಜೂನ್ ಅವಧಿಯಲ್ಲಿ 175 ಕೋಟಿ ಡಾಲರ್ ವರಮಾನ ಗಳಿಸಿದ್ದ ಇನ್ಫೋಸಿಸ್ ಕಂಪೆನಿಯನ್ನು, 179 ಕೋಟಿ ಡಾಲರ್ ವರಮಾನದ ಮೂಲಕ ಕಾಗ್ನಿಝೆಂಟ್ ಹಿಂದೆ ಹಾಕಿದ್ದಿತು.ಕಾಗ್ನಿಝೆಂಟ್ ಭಾರತದ ಷೇರುಪೇಟೆಯಲ್ಲಿ ನೋಂದಾಯಿಸಿಕೊಂಡಿಲ್ಲದೇ ಇದ್ದರೂ ಇಲ್ಲಿ ಅದರ ಚಟುವಟಿಕೆ ದೊಡ್ಡ ಪ್ರಮಾಣದ್ದೇ ಆಗಿದೆ. ಅದರ ಒಟ್ಟಾರೆ ಸಿಬ್ಬಂದಿಯಲ್ಲಿ ಶೇ 75ರಷ್ಟು ಮಂದಿ ಭಾರತದಲ್ಲಿಯೇ ಇದ್ದಾರೆ. ಹಾಗಾಗಿ ಅದು ಭಾರತದಲ್ಲಿನ ಕಂಪೆನಿ ಎಂದೇ ಗುರುತಿಸಿಕೊಳ್ಳುತ್ತಿದೆ.ಜುಲೈ-ಸೆಪ್ಟೆಂಬರ್‌ನಲ್ಲಿ 5100 ಮಂದಿ ಸೇರ್ಪಡೆ ಮೂಲಕ ಕಾಗ್ನಿಝೆಂಟ್‌ನ ಒಟ್ಟಾರೆ ಸಿಬ್ಬಂದಿ ಸಾಮರ್ಥ್ಯ 1,50,400ಕ್ಕೇರಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.