ಶುಕ್ರವಾರ, ಏಪ್ರಿಲ್ 16, 2021
31 °C

ಕಾಫಿ ಶಾಪ್‌ನಲ್ಲಿ ತಮಾಷೆ ಪ್ರಸಂಗ: ಪ್ರಧಾನಿಗೆ ಗದರಿದ ಪರಿಚಾರಿಕೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್  (ಐಎಎನ್‌ಎಸ್): `ನಾನು ಸ್ವಲ್ಪ ಬ್ಯುಸಿಯಾಗಿದ್ದೇನೆ. 10 ನಿಮಿಷ ಸರತಿ ಸಾಲಿನಲ್ಲಿ ನೀವು ಕಾಯಬೇಕಾಗುತ್ತದೆ...~  ಕಾಫಿ ಶಾಪ್‌ನ ಪರಿಚಾರಿಕೆ ಈ ರೀತಿ ಗದರಿದಾಗ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮೆರಾನ್ ಅವರಿಗೆ ಹೇಗಾಗಿರಬೇಡ!ಪ್ಲೈಮೌತ್‌ನಲ್ಲಿ ಸಶಸ್ತ್ರ ಪಡೆ ದಿನಾಚರಣೆಯಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಕ್ಯಾಮೆರಾನ್ ಅವರಿಗೆ ಕಾಫಿ ಕುಡಿಯಬೇಕೆನ್ನಿಸಿತು. ತಕ್ಷಣವೇ ಅವರು ಕಾಫಿ ಶಾಪ್ ಒಳಹೊಕ್ಕರು. ಪಾಪ ಪರಿಚಾರಿಕೆ ಶೈಲಾ ಥಾಮಸ್ ಅವರಿಗೆ  ಕ್ಯಾಮೆರಾನ್ ಗುರುತು ಸಿಗಲಿಲ್ಲ. ತುಸು ಹೊತ್ತು ಕಾಯುವಂತೆ ತಾಕೀತು ಮಾಡಿಬಿಟ್ಟರು.

ನಂತರ ಕ್ಯಾಮೆರಾನ್ ಅವರು ತಮ್ಮ ಸಹಾಯಕರೊಂದಿಗೆ ಕಾಫಿ ಶಾಪ್ ಹೊರಗಿರುವ ಇನ್ನೊಂದು ಬೇಕರಿಗೆ ತೆರಳಿ ಜ್ಯಾಂ ಸವರಿದ ಸಿಹಿ ವಡೆ ತಿಂದು ಚಹಾ ಕುಡಿದರು.ತಾನು ಗದರಿದ್ದು ಬ್ರಿಟನ್ ಪ್ರಧಾನಿಗೆ ಎಂದು ಗೊತ್ತಾದಾಗ ಶೈಲಾ ಥಾಮಸ್ ಪೇಚಾಡಿಕೊಂಡರು.

`ನಾನು ಇನ್ನೊಬ್ಬರಿಗೆ ಸರ್ವ್ ಮಾಡುತ್ತಿದ್ದೆ. ಹಾಗಾಗಿ ಪ್ರಧಾನಿಯನ್ನು ಗುರುತಿಸದೇ ಹೋದೆ. ಬೇರೆ ಯಾರೋ ಹೇಳಿದ ಮೇಲೆ ನನಗೆ ವಿಷಯ ಗೊತ್ತಾಯಿತು. ಇದಕ್ಕಾಗಿ ವಿಷಾದಿಸುತ್ತೇನೆ~ ಎಂದು ಥಾಮಸ್ ಹೇಳಿದ್ದಾರೆ.`ಕಳೆದ ವರ್ಷ ಕೂಡ ಕ್ಯಾಮೆರಾನ್‌ಇಂಥದ್ದೇ ಸನ್ನಿವೇಶ ಎದುರಿಸಿದ್ದರು. ಪರಿಚಾರಿಕೆಯೊಬ್ಬರು ತನಗೆ ಸಮಯವಿಲ್ಲ ಎಂದು ಹೇಳಿದ್ದಕ್ಕೆ ಖುದ್ದಾಗಿ  ಅವರೇ ತಮ್ಮ ಟೇಬಲ್‌ಗೆ ಸರ್ವಿಂಗ್ ಟ್ರೇ ತಂದುಕೊಳ್ಳುವಂತಾಗಿತ್ತು~ ಎಂದು ` ದಿ ಡೈಲಿ ಮೇಲ್~ ವರದಿ ಮಾಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.