ಭಾನುವಾರ, ಜನವರಿ 19, 2020
26 °C

ಕಾರ್ಪ್ ಬ್ಯಾಂಕ್: ಬಡ್ಡಿ ದರ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ರೂಪಾಯಿ ಅಪಮೌಲ್ಯ ಹಿನ್ನೆಲೆಯಲ್ಲಿ ವಿದೇಶಿ ಕರೆನ್ಸಿ ಆಕರ್ಷಿಸುವ ಸಲುವಾಗಿ ಕಾರ್ಪೊರೇಷನ್ ಬ್ಯಾಂಕ್ ಅನಿವಾಸಿ ಭಾರತೀಯರ ಬಾಹ್ಯ (ಎನ್‌ಆರ್‌ಇ) ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ  9.50ಕ್ಕೆ ಹೆಚ್ಚಿಸಿದೆ.ಈ ಮೊದಲು 1ರಿಂದ 2 ವರ್ಷದೊಳಗಿನ ಎನ್‌ಆರ್‌ಇ ಅವಧಿ ಠೇವಣಿಗೆ ಶೇ 3.82ರಷ್ಟು ಬಡ್ಡಿದರ ಇತ್ತು. ಅದು ಈಗ ಶೇ 9.50ರಷ್ಟಾಗಿದೆ. 2ರಿಂದ 5 ವರ್ಷದೊಳಗಿನ ಠೇವಣಿಗೆ ಇದ್ದ ಶೇ 3.51ರ ಬಡ್ಡಿದರ ಶೇ 9.25ಕ್ಕೆ ಹೆಚ್ಚಳವಾಗಿದೆ. ಈ ಮೊದಲಿದ್ದ 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿ ಪೂರ್ಣಗೊಳ್ಳುವ ಠೇವಣಿ ಕ್ರಮವನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)