ಗುರುವಾರ , ಏಪ್ರಿಲ್ 22, 2021
29 °C

ಕಾವೇರಿಯನು ಹರಿಯಲು ಬಿಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಘೋತ್ತಮ ಚಾಮರಾಜನಗರ (ಪ್ರ. ವಾ. ಆ. 16) ಸರ್ ಎಂ. ವಿ.ಯವರ ಬಗ್ಗೆ ಬರೆದ ಪತ್ರದ ಧಾಟಿ ನೋಡಿ ನೋವಾಯಿತು. ಇಂದಿನ ವಿಧಾನಸೌಧದ ನಕ್ಷೆಯ ಸಿದ್ಧತೆ ಅಂದಿನ ಮುಖ್ಯಮಂತ್ರಿ ಕೆ.ಸಿ.ರೆಡ್ಡಿಯವರ ಕಾಲದಲ್ಲೇ ಪ್ರಾರಂಭವಾಗಿತ್ತು.ಅದಕ್ಕೆ ದಿ.ಕೆ.ಹನುಮಂತಯ್ಯನವರ ಕಾಲದಲ್ಲಿ ಇಂದಿನ ಭವ್ಯ ಹಾಗೂ ಬೃಹತ್ ರೂಪಕೊಟ್ಟು, ವೈಯಕ್ತಿಕ ಮುತುವರ್ಜಿಯಿಂದ ನಿರ್ಮಿಸಿದರು. ಅದರ ಬಗ್ಗೆ ಆಪಾದನೆಗಳಿಗೆ ಗುರಿಯಾಗಬೇಕಾಯಿತು.ಇದೇ ರೀತಿ ಅಂದಿನ ಮೈಸೂರು ಸಂಸ್ಥಾನದ ಅಧಿಪತಿಗಳಾಗಿದ್ದ ಹೈದರ್, ಟಿಪ್ಪುಸುಲ್ತಾನರ ಕಾಲದಲ್ಲೇ ಕನ್ನಂಬಾಡಿ ಎಂಬಲ್ಲಿ ಸಣ್ಣ ಪ್ರಮಾಣದ ಅಣೆಕಟ್ಟೆಯನ್ನು ನಿರ್ಮಿಸುವ ಯೋಜನೆಯಿತ್ತು. ಆದರೆ ಸರ್ ಎಂ.ವಿ.ಯವರು ಅದಕ್ಕೆ ಭವಿಷ್ಯದ ನೀರಾವರಿ ಯೋಜನೆಗಳನ್ನು ಸಂಸ್ಥಾನದ ಹಿತದೃಷ್ಟಿಯಿಂದ ಇಂದಿನ ಭವ್ಯ ಕೆ.ಆರ್.ಎಸ್.ಗೆ ರೂಪುರೇಷೆಗಳನ್ನು ಕೊಟ್ಟು ಹಲವಾರು ಅಡಚಣೆಗಳನ್ನು, ತಮಿಳುನಾಡು ಒಡ್ಡಿದ ತಕರಾರುಗಳನ್ನು ಎದುರಿಸಿ ಹಗಲಿರುಳು ಶ್ರಮಪಟ್ಟು ಅಣೆಕಟ್ಟನ್ನು ಪ್ರಾರಂಭಿಸಿದರು. ಆ ಕಾಲದಲ್ಲಿ ಅದಕ್ಕೆ ತಗುಲಿದ ಅಂದಾಜು ವೆಚ್ಚ 3 ಕೋಟಿ ರೂ. ಎಂದು ಕೇಳಿದ್ದೇನೆ. ಇದಕ್ಕಾಗಿ ಸರ್ ಎಂ.ವಿ.ಯವರು `ಸಂಸ್ಥಾನದ ಬಿಳಿಯಾನೆ~ ಎಂಬ ಅಪವಾದವನ್ನೂ ಎದುರಿಸಬೇಕಾಯಿತು. ಅಣೆಕಟ್ಟು ಪೂರ್ಣವಾಗುವ ವೇಳೆಗೆ ಅವರು ಅಧಿಕಾರದಲ್ಲಿರಲಿಲ್ಲವಾದರೂ ಅದರ ಬಗ್ಗೆ ಕಾಳಜಿ ಕಡಿಮೆಯಾಗಲಿಲ್ಲ. ನಂತರ ದಿನಾನರಾದ ಸರ್ ಮಿರ್ಜಾ ಇಸ್ಮಾಯಿಲ್‌ರವರು ಇಂದಿನ ವಿಶ್ವವಿಖ್ಯಾತ `ಬೃಂದಾವನ ಗಾರ್ಡನ್~ಗೆ ಕಾರಣರಾದರು. ಇಷ್ಟಾದರೂ ಅಣೆಕಟ್ಟಿಗೆ `ಕೃಷ್ಣರಾಜ ಸಾಗರ~ ಎಂದು ಅದಕ್ಕೆ ಮಹಾರಾಜರ ಹೆಸರನ್ನೇ ಇಟ್ಟಿರುತ್ತಾರೆ. ಇದೇ ರೀತಿ ಬೆಂಗಳೂರು ನಗರದಲ್ಲಿರುವ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಕಾಲೇಜಿಗೆ ಸರ್ ಎಂ.ವಿ.ಯವರೇ ಪರೋಕ್ಷವಾಗಿ ಕಾರಣರಾದರೂ ತಮ್ಮ ಹೆಸರನ್ನು ಅದಕ್ಕೆ ಇಡಲು ಒಪ್ಪಲಿಲ್ಲ ಎಂಬುದು ಈಗ ಇತಿಹಾಸ. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.