ಕಾಕಶ್ರೀ ಕ್ಲಾಸು
ಒಂದು ಊರಿನಲ್ಲಿ ಒಂದು ದೊಡ್ಡ ಮರ. ಆ ಮರದ ಒಳಗೆ ಹೊರಗೆ ಮಾತನಾಡುವ ಕಾಗೆಗಳು. ಆ ಎಲ್ಲಾ ಕಾಗೆಗಳಿಗೂ ಮರದ ಮೇಲೆಯೇ ಪಾಠಶಾಲೆ. ಪಾಠದ ಮಾಸ್ಟ್ರು ಕೂಡ ಕಾಗೆಯೇ! ಕಾಗೆಗಳಿಗೆ ಒಟ್ಟು ಎರಡು ವಿಷಯಗಳು. ಒಂದು ಪರಿಸರ ಮತ್ತೊಂದು ಹರಟೆ, ಕಲೆ, ಬಣ್ಣ.

ಇವುಗಳಿಗೆ ಲೀಡರ್ ಒಂದು ದೊಡ್ಡ ಕಾಗೆ. ಆ ಕಾಗೆಗೆ ತುಂಬಾ ಕೋಪ. ಇತ್ತ ಸ್ಟೂಡೆಂಟು ಕಾಗೆಗಳಲ್ಲಿ ಒಂದು ಗುಂಪು ತುಂಬಾ ತಲೆಹರಟೆ. ಲೀಡರ್ ಕಾಗೆಗೆ ಆ ಗುಂಪನ್ನು ಕಂಡರೆ ಆಗುವುದಿಲ್ಲ. ಆ ಗುಂಪಿಗೆ ಯಾವಾಗಲೂ ಕೋಲಿನಿಂದ ಸೇವೆಯಾಗುತ್ತಿತ್ತು.

ಒಂದು ದಿವಸ ಸಂಜೆಯಾಯಿತು. ಸಂಜೆ ಎಂದರೆ ಲೀಡರ್ ಕಾಗೆಗೆ ತುಂಬಾ ಭಯ. ಇದು ತಲೆಹರಟೆ ಗುಂಪಿಗೆ ತಿಳಿಯಿತು. ಹೇಗಾದರೂ ಮಾಡಿ ಅವನನ್ನು ಹೆದರಿಸಬೇಕು ಎಂದುಕೊಂಡಿದ್ದ ತಲೆಹರಟೆ ಗುಂಪಿಗೆ ಒಂದು ಉಪಾಯ ಹೊಳೆಯಿತು. ಗುಂಪಲ್ಲಿ ಒಬ್ಬ ಹೋಗಿ ಲೀಡರ್ ಕಾಗೆಗೆ, `ಸಂಜೆ ಬಾ ನಿನಗೆ ಉಡುಗೊರೆ ಕೊಡುತ್ತೇವೆ' ಎಂದ. ಸಂಜೆ ಅಂದರೆ ಭಯ, ಉಡುಗೊರೆ ಅಂದರೆ ಇಷ್ಟ. ಹೇಗೂ ಧೈರ್ಯ ಮಾಡಿ ಲೀಡರ್ ಕಾಗೆ ಹೋಯಿತು.

ಆ ಸಮಯದಲ್ಲಿ ಅದಕ್ಕೆ ಹೊಡೆಯೋಣ ಎಂದುಕೊಂಡಿದ್ದ ಕಾಗೆಗಳಲ್ಲಿ ಪುಟ್ಟ ಕಾಗೆ ಮಾತ್ರ `ನಾವು ಏಕೆ ಹೊಡೆಯಬೇಕು?' ಎಂದು ಪ್ರಶ್ನಿಸಿತು. ಉಳಿದವರಿಗೆ ಆ ಪ್ರಶ್ನೆಗೆ ಉತ್ತರಿಸಲು ಕಷ್ಟವಾಯಿತು. `ಅವನ ಕೋಪ ಅವನಿಗೆ, ಕ್ಷಮಿಸಿಬಿಡಿ' ಎಂದಿತು. `ಅವನನ್ನು ಹೊಡೆಯುವ ಬದಲಾಗಿ ಗೌರವಿಸೋಣ' ಎಂಬ ತೀರ್ಮಾನಕ್ಕೆ ಬರಲಾಯಿತು. ಮುಂದೆ ಲೀಡರ್ ಕಾಗೆಯ ಕೋಪವೂ ಕಡಿಮೆಯಾಯಿತು. ಎಲ್ಲರೂ ಸಂತೋಷವಾಗಿ ಇದ್ದರು.
-ಎಚ್.ಎಸ್. ಶೇಖರ, 10ನೇ ತರಗತಿ

ಕಾಗೆ, ಗುಬ್ಬಚ್ಚಿ ಹಾಗೂ ರಣಹದ್ದು
ಒಂದು ಕಾಗೆಯಿತ್ತು. ಆ ಕಾಗೆಗೆ ಗುಬ್ಬಚ್ಚಿ ಎಂಬ ಸ್ನೇಹಿತೆ ಇದ್ದಳು. ಅವರಿಬ್ಬರು ತುಂಬಾ ಸಂತೋಷದಿಂದ ಆಡುತ್ತ, ಕುಣಿಯುತ್ತಿದ್ದರು. ಒಂದು ದಿನ ಅವರಿಬ್ಬರು ಸ್ನಾನ ಮಾಡಲು ನದಿಯ ಹತ್ತಿರ ಹೋಗುತ್ತಿರುವಾಗ ಮಧ್ಯದಲ್ಲಿ ಒಂದು ರಣಹದ್ದು ಆಹಾರ ಇಲ್ಲದೆ ಕುಳಿತಿತ್ತು. ಆ ಸಮಯದಲ್ಲಿ ಇವರಿಬ್ಬರು ಆಡುತ್ತಾ ಕುಣಿಯುತ್ತ ಬರುತ್ತಿದ್ದರು. ರಣಹದ್ದು ಅವರಿಬ್ಬರನ್ನು ತಿನ್ನಲು ಬರುತ್ತಿತ್ತು. ಆಗ ಕಾಗೆ, `ಗುಬ್ಬಚ್ಚಿ ಗುಬ್ಬಚ್ಚಿ ಅಲ್ಲಿ ನೋಡು ರಣಹದ್ದು. ಅದು ನಮ್ಮನ್ನೇ ತಿನ್ನಲು ಬರುತ್ತಿದೆ. ಬಾ ಓಡಿ ಹೋಗೋಣ, ಓಡು ಓಡು' ಎಂದು ಕೂಗಿಕೊಳ್ಳುತ್ತಿತ್ತು. ಅವರಿಬ್ಬರು ಓಡಲು ಆರಂಭಿಸಿದರು. ರಣಹದ್ದು ಹತ್ತಿರಕ್ಕೆ ಬಂದುಬಿಟ್ಟಿತು. ಆಗ ಕಾಗೆಯು ಹಾರಿ ಹೋಗಿ ತಪ್ಪಿಸಿಕೊಂಡಿತು. ಗುಬ್ಬಚ್ಚಿ ಸಿಕ್ಕಿಹಾಕಿಕೊಂಡಳು.

ಗೆಳತಿ ಗುಬ್ಬಚ್ಚಿಯನ್ನು ಬಿಡಿಸಿಕೊಳ್ಳಲು ಕಾಗೆಯು `ರಣಹದ್ದೇ ರಣಹದ್ದೇ ನನ್ನ ಪ್ರೀತಿಯ ಗೆಳತಿಯಾದ ಗುಬ್ಬಚ್ಚಿಯನ್ನು ಬಿಟ್ಟುಬಿಡು' ಎಂದು ಕೇಳಿಕೊಂಡಿತು. ಆಗ ರಣಹದ್ದು, `ಆಹಾರವಿಲ್ಲದೆ ಸಾಯುತ್ತಿದ್ದೇನೆ, ಅಂತಹದ್ದರಲ್ಲಿ ಕೈಗೆ ಬಂದದ್ದನ್ನು ಬಿಟ್ಟುಕೊಡುವುದೇ? ಸಾಧ್ಯವಿಲ್ಲ' ಎಂದಿತು. ಕಾಗೆಯು `ನಿನಗೆ ಆಹಾರ ಬೇಕಾದರೆ ನನ್ನನ್ನು ತಿನ್ನು' ಎನ್ನುತ್ತೆ. ರಣಹದ್ದು ತುಂಬ ನೊಂದುಕೊಂಡು, `ನೀವಿಬ್ಬರು ಒಳ್ಳೆಯ ಸ್ನೇಹಿತರು, ನಿಮ್ಮನ್ನು ಬಿಟ್ಟಬಿಡುತ್ತೇನೆ' ಎಂದಾಗ, ಕಾಗೆಯು ನಿನಗೆ ಆಹಾರವನ್ನು ನಾವು ಹುಡುಕಿಕೊಡುತ್ತೇವೆ ಎಂದು ಹೇಳುತ್ತೆ. ಮೂವರು ಆಹಾರ ಹುಡುಕಿ ತಿಂದು ಸಂತೋಷದಿಂದ ಇರುತ್ತಾರೆ.
-ಅಮೃತ ಎಚ್.ಎಸ್. 10ನೇ ತರಗತಿ

ಕಾಗೆಯ ಕರ್ತವ್ಯ
ಒಂದು ಊರಿನಲ್ಲಿ ಒಂದು ಕಾಡಿತ್ತು. ಆ ಕಾಡಿನಲ್ಲಿ ಋಷಿಯ ಆಶ್ರಮ. ಅಲ್ಲಿ ಋಷಿ ಮತ್ತು ಕಾಗೆ ವಾಸವಾಗಿದ್ದವು. ಆ ಕಾಗೆಯ ನಡವಳಿಕೆ ಋಷಿಗೆ ಇಷ್ಟವಾಗಿ ಮಾತನಾಡುವ ಶಕ್ತಿ ನೀಡಿದ್ದರು. ಕಾಗೆಗೆ ತುಂಬಾ ಸಂತೋಷವಾಗಿತ್ತು. ಕಾಗೆ ಮತ್ತು ಋಷಿ ತುಂಬಾ ಪ್ರೀತಿಯಿಂದ ಸ್ನೇಹಿತರಂತೆ ಇದ್ದರು.

ಒಂದು ದಿನ ಋಷಿಯು ತಪಸ್ಸಿಗೆ ಕುಳಿತು ಬ್ರಹ್ಮದೇವರ ಸ್ಮರಣೆ ಮಾಡುತ್ತಿದ್ದರು. ಆಗ ಒಂದು ದುಂಬಿಯು ಋಷಿಯ ಕಾಲನ್ನು ಕೊರೆಯಿತು. ಕಾಲಿನ ತುಂಬ ರಕ್ತ. ಇದನ್ನು ನೋಡಿದ ಕಾಗೆಗೆ ಏನು ಮಾಡಬೇಕೆಂಬುದು ತಿಳಿಯಲಿಲ್ಲ. ಅದು ದೊಡ್ಡ ದೊಣ್ಣೆ ತಂದು ದುಂಬಿಗೆ ಹೊಡೆಯಲು ಮುಂದಾದಾಗ ಏಟು ಋಷಿಯ ಕಾಲಿಗೆ ಬಿತ್ತು. ಋಷಿಗೆ ಎಚ್ಚರವಾಯಿತು. `ಕಾಗೆ, ನೀನು ನನ್ನ ತಪಸ್ಸನ್ನು ಭಂಗ ಮಾಡಿದೆ ನನಗೆ ಮುಖ ತೋರಿಸಬೇಡ ಹೊರಟು ಹೋಗು' ಎಂದರು. ಕಾಗೆ ಬೇಸರಗೊಂಡು ಹೊರಟು ಹೋಯಿತು.
-ಎಚ್.ಎಂ. ರೋಹಿತ್ ಕುಮಾರ್, 10ನೇ ತರಗತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.