ಮಂಗಳೂರು: ಕರಾವಳಿಯಲ್ಲಿ ಮುಂಗಾರು ತೀವ್ರಗೊಳ್ಳುತ್ತಿರುವಂತೆ ಹಾನಿಯೂ ಹೆಚ್ಚಾಗತೊಡಗಿದ್ದು, ಸೋಮವಾರ ಬೆಳಿಗ್ಗೆ ಬಜ್ಪೆ ವಿಮಾನ ನಿಲ್ದಾಣ ಸಮೀಪದ ಮರವೂರು ಎಂಬಲ್ಲಿ ಗುರುಪುರ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಕಿಂಡಿ ಅಣೆಕಟ್ಟೆ ದಂಡೆ ಒಡೆದು ಭಾರಿ ಹಾನಿ ಸಂಭವಿಸಿದೆ.

ಭಾನುವಾರ ದಿನವಿಡೀ ಮಳೆ ಸುರಿದಿದ್ದರಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿತ್ತು. ಮರವೂರಿನಲ್ಲಿ ಹೊಸದಾಗಿ ಕಿಂಡಿ ಅಣೆಕಟ್ಟೆ ನಿರ್ಮಿಸಲಾಗುತ್ತಿದ್ದು, ಕಾಂಕ್ರೀಟ್ ಕಿಂಡಿಯಲ್ಲಿ ಮೊದಲ ಮಳೆಗೆ ಬಂದು ಸೇರಿದ್ದ ಕಸ, ಕಡ್ಡಿಗಳಿಂದ ನೀರು ಸರಾಗವಾಗಿ ಹರಿದು ಹೋಗಲು ಆಗದೆ ಪಕ್ಕದ ಪಡುಶೆಡ್ಡೆ ಕುದ್ರುವಿನ ಮಣ್ಣಿನ ದಂಡೆಯನ್ನೇ ಕೊಚ್ಚಿಕೊಂಡು ಹೋಯಿತು. ಇದರಿಂದ ಒಂದು ಮನೆ ಕುಸಿದಿದ್ದು, ಇನ್ನೆರಡು ಮನೆಗಳು ಅಪಾಯದ ಅಂಚಿಗೆ ಸಿಲುಕಿವೆ.

ಒಂದು ಎಕರೆಗೂ ಅಧಿಕ ಕೃಷಿ ಭೂಮಿ ಕೊಚ್ಚಿಕೊಂಡು ಹೋಗಿದ್ದು, 25ಕ್ಕೂ ಅಧಿಕ ತೆಂಗಿನ ಮರಗಳು ಉರುಳಿವೆ. ಓಸ್ವಾಲ್ಡ್ ಡಿಸೋಜ ಅವರ ಮನೆಯು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರೆ, ಪಕ್ಕದಲ್ಲೇ ಇರುವ ಜೋಸೆಫ್ ಡಿಸೋಜ ಮತ್ತು ಥಾಮಸ್ ಡಿಸೋಜ ಎಂಬವರ ಮನೆಗಳೂ ಯಾವುದೇ ಕ್ಷಣದಲ್ಲಿ ಕೊಚ್ಚಿ ಹೋಗುವ ಅಪಾಯದಲ್ಲಿವೆ.

ಜತೆಗೆ ಈ ಭಾಗದಲ್ಲಿ 35ಕ್ಕೂ ಹೆಚ್ಚಿನ ಮನೆಗಳಿದ್ದು, ಅವುಗಳೆಲ್ಲವೂ ಅಪಾಯಕ್ಕೆ ಸಿಲುಕಿವೆ.
ಉಳಿದಂತೆ ಮಳೆಗೆ, ನಗರದ ಪದವು ಎಂಬಲ್ಲಿ ಜನಾರ್ದನ ಎಂಬವರ ಮನೆ ಗೋಡೆ ಕುಸಿದಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 102 ಮಿ.ಮೀ. ಮಳೆ ಬಿದ್ದಿದೆ.

ಉಡುಪಿ ಜಿಲ್ಲೆಯಲ್ಲಿ ಸಹ ಮಳೆಯ ಅಬ್ಬರ ಮುಂದುವರಿದಿದೆ. ಚತುಷ್ಪಥವಾಗಿ ಅಭಿವೃದ್ಧಿಗೊಳ್ಳುತ್ತಿರುವ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಪ್ರದೇಶಗಳಲ್ಲಿ ಅಲ್ಲಲ್ಲಿ ಕೃತಕ ನೆರೆ ತಲೆದೋರಿದೆ.

ಕಾಸರಗೋಡು ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ನದಿಗಳಲ್ಲಿ ನೀರು ತುಂಬಿ ಹರಿಯತೊಡಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಹ ಮುಂಗಾರು ಮಳೆ ಚುರುಕುಗೊಂಡಿದ್ದು, ಸೋಮವಾರ ಸರಾಸರಿ 126.33 ಮಿಲಿ ಮೀಟರ್ ಮಳೆ ಬಿದ್ದಿದೆ. ಶೃಂಗೇರಿ ತಾಲ್ಲೂಕಿನ ಕೆರೆಕಟ್ಟೆಯಲ್ಲಿ ಗರಿಷ್ಠ 228 ಮಿ.ಮೀ. ಮಳೆ ಸುರಿದಿದೆ. ಯಾವುದೇ ಹಾನಿಯ ವರದಿಯಾಗಿಲ್ಲ.

ಹುಬ್ಬಳ್ಳಿ ವರದಿ: ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮುಂಗಾರು ವ್ಯಾಪಿಸಿದ್ದು ಮಳೆ-ಗಾಳಿಯಿಂದ ಬೆಳಗಾವಿ ಜಿಲ್ಲೆಯಲ್ಲಿ ವಿದ್ಯುತ್ ಕಂಬ ಮುರಿದುಬಿದ್ದು ಒಬ್ಬ ಸಾವಿಗೀಡಾದ ಘಟನೆ ಸೋಮವಾರ ನಡೆದಿದೆ.
ಬೆಳಗಾವಿ ತಾಲ್ಲೂಕಿನ ಬಾಳೇಕುಂದ್ರಿ ಖುರ್ದ್ ಗ್ರಾಮದಲ್ಲಿ ಮಳೆ-ಗಾಳಿಯಿಂದ ಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ ಅದು ಮುರಿದು ಶ್ರೀಕಾಂತ ಜಾಧವ (50) ಮೇಲೆ ಬಿದ್ದ ಕಾರಣ ಮೃತಪಟ್ಟರು.

ಮಳೆಯನ್ನೇ ಕಾಣದಿದ್ದ ಬಾಗಲಕೋಟೆ, ವಿಜಾಪುರ ಜಿಲ್ಲೆಯಾದ್ಯಂತ ಮಳೆಯಾಗಿದೆ. ಬೆಳಗಾವಿ, ಹಾವೇರಿ, ಗದಗ ಮತ್ತು ಧಾರವಾಡ ಜಿಲ್ಲೆಗಳಲ್ಲಿಯೂ ಮಳೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಸೇರಿದಂತೆ ಜಿಲ್ಲೆಯಾದ್ಯಂತ ಮಳೆ ಸುರಿದಿದೆ. ಸೋಮವಾರ ಮುಂಜಾನೆ 8.30ಕ್ಕೆ ಕೊನೆಗೊಂಡ ಕಳೆದ 24 ಗಂಟೆಗಳ ಅವಧಿಯಲ್ಲಿ ಉ.ಕ. ಜಿಲ್ಲೆಯಲ್ಲಿ ಒಟ್ಟು 835 ಮಿ.ಮೀ ಮಳೆಯಾಗಿದೆ. ಅಂಕೋಲಾ ತಾಲ್ಲೂಕಿನಲ್ಲಿ 136.4 ಮಿ.ಮೀ, ಭಟ್ಕಳ ತಾಲ್ಲೂಕಿನಲ್ಲಿ 125.8 ಮಿ.ಮೀ, ಹೊನ್ನಾವರ ತಾಲ್ಲೂಕಿನಲ್ಲಿ 126.6 ಮಿ.ಮೀ, ಕಾರವಾರ ತಾಲ್ಲೂಕಿನಲ್ಲಿ 130.7 ಮಿ.ಮೀ, ಮತ್ತು ಕುಮಟಾ ತಾಲ್ಲೂಕಿನಲ್ಲಿ 96.6 ಮಿ.ಮೀ ಮಳೆಯಾಗಿದೆ.

ಉ.ಕ. ಜಿಲ್ಲೆಯ ಕುಮಟಾ ತಾಲ್ಲೂಕಿನ ಧಾರೇಶ್ವರ ಬಳಿ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಹಾಗೂ ಹುಬ್ಬಳ್ಳಿ - ಕಾರವಾರ ಹೆದ್ದಾರಿಯಲ್ಲಿ ಯಲ್ಲಾಪುರ ಬಳಿಯ ಅರಬೈಲ್ ಘಟ್ಟದಲ್ಲಿ ಸೋಮವಾರ ಮರ ಉರುಳಿ ಬಿದ್ದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಬಳ್ಳಾರಿ ಜಿಲ್ಲೆಯ ಶಿರಗುಪ್ಪ, ಕಂಪ್ಲಿಯಲ್ಲಿಯೂ ಮಳೆಯಾಗಿದೆ. ಕಂಪ್ಲಿಯಲ್ಲಿ ಮಳೆ-ಗಾಳಿಗೆ ವಿದ್ಯುತ್ ಕಂಬ ಮತ್ತು ಮರಗಳು ಉರುಳಿ ಬಿದ್ದಿವೆ.

ಶಿವಮೊಗ್ಗ ವರದಿ: ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಸೋಮವಾರ ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ಶಿರಾಳಕೊಪ್ಪ, ಸೊರಬ ತಾಲ್ಲೂಕಿನಲ್ಲಿ ನಿರಂತರವಾಗಿ ಜಿಟಿಜಿಟಿ ಮಳೆ ಸುರಿದಿದೆ. ತೀರ್ಥಹಳ್ಳಿ, ಹೊಸನಗರ, ಸಾಗರದಲ್ಲಿ ರಾತ್ರಿ-ಹಗಲು ಸತತವಾಗಿ ಉತ್ತಮ ಮಳೆ ಸುರಿಯುತ್ತಿದ್ದು, ತೀರ್ಥಹಳ್ಳಿಯಲ್ಲಿ 62.8 ಮಿ.ಮೀ., ಆಗುಂಬೆಯಲ್ಲಿ 211.3 ಮಿ.ಮೀ. ಮಳೆ ಪ್ರಮಾಣ ದಾಖಲಾಗಿದೆ.

ಸೋಮವಾರ ಬೆಳಿಗ್ಗೆ 8ಕ್ಕೆ ಭದ್ರಾ ಜಲಾಶಯದ ನೀರಿನಮಟ್ಟ 132.7 ಅಡಿಯಷ್ಟಿತ್ತು. ಒಳಹರಿವು 111 ಕ್ಯೂಸೆಕ್. ಹೊರಹರಿವು 111 ಕ್ಯೂಸೆಕ್. ಕಳೆದ ವರ್ಷ ಇದೇ ವೇಳೆಗೆ ನೀರಿನಮಟ್ಟ 149.9 ಅಡಿಯಷ್ಟಿತ್ತು.
ದಾವಣಗೆರೆ ವರದಿ: ಜಿಲ್ಲೆಯಲ್ಲಿ ತಡವಾಗಿ ಮುಂಗಾರು ಆರಂಭವಾಗಿದ್ದು, ಸೋಮವಾರ ನಗರವೂ ಸೇರಿದಂತೆ ವಿವಿಧ ಭಾಗಗಳಲ್ಲಿ ನಿರಂತರವಾಗಿ ಜಿಟಿಜಿಟಿ ಮಳೆ ಸುರಿದಿದೆ. ಕೆಲ ಭಾಗದಲ್ಲಿ ಹದ ಮಳೆಯಾಗಿದೆ. ತಾಲ್ಲೂಕಿನಲ್ಲಿ ಸುಮಾರು 7 ಮಿ.ಮೀ. ಮಳೆ ಸುರಿದಿದೆ. ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಹಶೀಲ್ದಾರ್ ಡಾ.ಬಿ.ಆರ್. ಹರೀಶ್ ತಿಳಿಸಿದ್ದಾರೆ.

ಕಾರ್ಗಲ್ ವರದಿ: ಸಮೀಪದ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಚುರುಕುಗೊಂಡ ಮುಂಗಾರು ಮಳೆಯ ಪ್ರಭಾವದಿಂದ ಅಣೆಕಟ್ಟೆಗೆ 1.5 ಅಡಿ ನೀರು ಸಂಗ್ರಹವಾಗಿದೆ ಎಂದು ಕೆಪಿಸಿ ಮುಖ್ಯ ಎಂಜಿನಿಯರ್ ರಾಜಮುಡಿ ತಿಳಿಸಿದ್ದಾರೆ.

ಜಲಾಶಯದಲ್ಲಿ ಸಂಗ್ರಹವಾಗಿದ್ದ ನೀರು ತಳಮಟ್ಟಕ್ಕೆ ತಲುಪಿ ಲಿಂಗನಮಕ್ಕಿ ವಿದ್ಯುದಾಗರದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳ್ಳುವ ಲಕ್ಷಣಗಳು ಕಂಡುಬಂದಿದ್ದು ಅಧಿಕಾರಿಗಳಲ್ಲಿ ಆತಂಕ ಮೂಡಿತ್ತು. ಆದರೆ, ಭಾನುವಾರದಿಂದ ಆತಂಕ ನಿವಾರಣೆಯಾಗಿದೆ ಎಂದು ಅವರು ತಿಳಿಸಿದರು.

ಸೋಮವಾರ ಸಂಜೆ ಲಿಂಗನಮಕ್ಕಿ ಜಲಾಶಯಕ್ಕೆ ನೀರಿನ ಒಳಹರಿವು 9,670 ಕ್ಯೂಸೆಕ್ ಇದ್ದು, ಹೊರಹರಿವು 943 ಕ್ಯೂಸೆಕ್ ಇದೆ ಎಂದು ಮಾಹಿತಿ ನೀಡಿದರು. ಜಲಾನಯನ ಪ್ರದೇಶದಲ್ಲಿ 95.6 ಮಿಮೀ ಮಳೆಯಾಗಿದ್ದು, ಜಲಾಶಯದ ನೀರಿನಮಟ್ಟ ಸೋಮವಾರ ಸಂಜೆ 1,746.35ಅಡಿ ಇದೆ ಎಂದು ಮುಖ್ಯ ಎಂಜಿನಿಯರ್ ತಿಳಿಸಿದ್ದಾರೆ.

ಶರಾವತಿ ಕಣಿವೆಯಾದ್ಯಂತ ಸತತವಾಗಿ ಸುರಿಯುತ್ತಿರುವ ಮುಂಗಾರು ಮಳೆಯ ಕಾರಣ ಮಹಾತ್ಮ ಗಾಂಧಿ ವಿದ್ಯುದಾಗರ ಮತ್ತು ಶರಾವತಿ ಜಲವಿದ್ಯುದಾಗರಕ್ಕೆ ಬಳಕೆಯಾಗುತ್ತಿದ್ದ ಅಣೆಕಟ್ಟೆಯ ನೀರಿನ ಪ್ರಮಾಣದಲ್ಲಿ ಗಣನೀಯವಾಗಿ ಇಳಿಮುಖ ಕಂಡು ಬಂದಿದೆ ಎಂದು ಕೆಪಿಸಿ ಮೂಲಗಳು ತಿಳಿಸಿದೆ.

ಮಡಿಕೇರಿ ವರದಿ: ಕೊಡಗು ಜಿಲ್ಲೆಯಾದ್ಯಂತ ಮುಂಗಾರು ಮಳೆ ಸೋಮವಾರ ಬಿರುಸುಗೊಂಡಿದೆ. ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ, ಭಾಗಮಂಡಲದಲ್ಲಿ ಉತ್ತಮ ಮಳೆ ಸುರಿದಿದೆ.

ಭಾಗಮಂಡಲದಲ್ಲಿ 115 ಮಿ.ಮೀ. ಮಳೆಯಾಗಿದೆ. ಇನ್ನುಳಿದಂತೆ ಸಂಪಾಜೆಯಲ್ಲಿ 88 ಮಿ.ಮೀ., ಮಡಿಕೇರಿಯಲ್ಲಿ 65 ಮಿ.ಮೀ., ಪೊನ್ನಂಪೇಟೆಯಲ್ಲಿ 61 ಮಿ.ಮೀ. ಮಳೆಯಾಗಿದೆ. ಸರಾಸರಿ 49.76 ಮಿ.ಮೀ. ಮಳೆಯಾಗಿದೆ.
ಮಡಿಕೇರಿಯಲ್ಲಿ ಮಂಜಿನ ಮಧ್ಯೆಯೇ ಮಳೆ ಸುರಿದಿದೆ. ದಿನವಿಡೀ ಮಂಜು ಆವರಿಸಿಕೊಂಡಿದ್ದು, 1 ಘಳಿಗೆಯೂ ಸೂರ್ಯನ ದರುಶನವಾಗಿಲ್ಲ.

ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ 2,802.96 ಅಡಿಗೆ ತಲುಪಿದೆ (ಗರಿಷ್ಠ ಮಟ್ಟ 2,859 ಅಡಿಗಳು). ಜಲಾಶಯದ ಸುತ್ತಮುತ್ತಲಿನ ಪ್ರದೇಶದಲ್ಲಿ 15.20ಮಿ.ಮೀ ಮಳೆಯಾಗಿದ್ದು, ಇಂದಿನ ನೀರಿನ ಒಳ ಹರಿವು 283 ಕ್ಯೂಸೆಕ್ ಆಗಿದೆ. ಮೈಸೂರು, ಹಾಸನ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಸೋಮವಾರ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.