ಚಿಕ್ಕೋಡಿ: ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿರುವ ಕಿಯಾಸ್ಕ್ ಕೇಂದ್ರದಲ್ಲಿ ತಾಂತ್ರಿಕ ದೋಷದಿಂದಾಗಿ ಕಳೆದ ಮೂರು ದಿನಗಳಿಂದ ಗೇಣಿ ಮತ್ತು ಪಹಣಿ ಪತ್ರಿಕೆಗಳ ವಿತರಣಾ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.

ರೈತಾಪಿ ಜನರಿಗೆ ಭೂಮಿಯ ಗಣಕೀಕೃತ ಗೇಣಿ ಮತ್ತು ಪಹಣಿ ಪತ್ರಿಕೆಗಳನ್ನು ವಿತರಿಸುವ ಉದ್ದೇಶದಿಂದ ಭೂಮಿ ಯೋಜನೆಯಡಿ ಆರಂಭಿಸಿರುವ ಕಿಯಾಸ್ಕ್ ಕೇಂದ್ರದಿಂದ ಜನರಿಗೆ ಅನುಕೂಲಕ್ಕಿಂತ ಅನಾನುಕೂಲತೆಗಳೇ ಹೆಚ್ಚಾಗುತ್ತಿದ್ದು, ಈ ಯೋಜನೆ ಜಾರಿಗೂ ಮುಂಚೆ ಗ್ರಾಮದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಕೈಬರಹದಲ್ಲಿ ಬರೆದುಕೊಡುತ್ತಿದ್ದ ಪಹಣಿ ಪತ್ರಿಕೆ ರೈತರಿಗೆ ತ್ವರಿತವಾಗಿ ಲಭಿಸುತ್ತಿತ್ತು. ಆದರೆ, ಕಿಯಾಸ್ಕ್ ಕೇಂದ್ರಗಳ ಮೂಲಕ ಗಣಕೀಕೃತ ಪಹಣಿ ಪತ್ರಿಕೆ ವಿತರಣೆ ಆರಂಭವಾದಾಗಿನಿಂದ ಪಹಣಿ ಪತ್ರಿಕೆ ಪಡೆಯಲು ತಾಲ್ಲೂಕು ಕೇಂದ್ರ ಚಿಕ್ಕೋಡಿ ಅಥವಾ ನೆರೆಯ ನೆಮ್ಮದಿ ಕೇಂದ್ರಗಳಿಗೆ ಹೋಗಬೇಕಾಗಿದೆ. ಇದರಿಂದ ಹೆಚ್ಚಿನ ಹಣದ ಜೊತೆಗೆ ಸಮಯವೂ ವ್ಯಯವಾಗುತ್ತಿದೆ ಎಂಬುದು ರೈತರ ಅಂಬೋಣ.

ಕಿಯಾಸ್ಕ್ ಅಥವಾ ನೆಮ್ಮದಿ ಕೇಂದ್ರಗಳೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಬಹುತೇಕ ಸಮಯದಲ್ಲಿ ‘ಸರ್ವರ್ ಡೌನ್’, ಪ್ರಿಂಟರ್ ಸಮಸ್ಯೆಯಿಂದ ಸಾರ್ವಜನಿಕರಿಗೆ ಸಕಾಲಿಕ ಸೇವೆ ಸಿಗುತ್ತಲೇ ಇಲ್ಲ. ಇದೀಗ ಕಳೆದ ಮೂರ್ನಾಲ್ಕು ದಿನಗಳಿಂದ ಪಟ್ಟಣದ ಕಿಯಾಸ್ಕ್ ಕೇಂದ್ರದಲ್ಲಿ ಗಣಕೀಕೃತ ಪಹಣಿ ಪತ್ರಿಕೆ ವಿತರಣೆ ನಿಂತು ಹೋಗಿದೆ. ಸಾರ್ವಜನಿಕರು ಕೇಂದ್ರಕ್ಕೆ ಎಡತಾಕಿ ಸುಸ್ತಾಗುತ್ತಿದ್ದಾರೆ. ಮೊದಲೇ ಇದು ಮಾರ್ಚ ತಿಂಗಳು ಇರುವುದರಿಂದ ರೈತರಿಗೆ ಸಾಲ ಮತ್ತಿತರ ಉದ್ದೇಶಗಳಿಗಾಗಿ ಪಹಣಿ ಪತ್ರಿಕೆ ಹೆಚ್ಚು ಅಗತ್ಯವಿರುವ ಸಂದರ್ಭದಲ್ಲೇ ಇಂತಹ ಸಮಸ್ಯೆಯಾಗಿದೆ ಎಂಬುದು ಆರೋಪ.

ನೆಮ್ಮದಿ ಕೇಂದ್ರದಿಂದಲೂ ಸಮರ್ಪಕವಾಗಿ ಪಹಣಿ ಪತ್ರಿಕೆ ಸಿಗುತ್ತಿಲ್ಲ. ಒಂದೇ ವ್ಯಕ್ತಿಗೆ ಹತ್ತಾರು ಪುಟ ಪಹಣಿ ಪತ್ರಿಕೆಯನ್ನು ನೆಮ್ಮದಿ ಕೇಂದ್ರದ ಸಿಬ್ಬಂದಿ ನೀಡುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಅಧಿಕಾರಿಗಳು ಈ ಸಮಸ್ಯೆಯತ್ತ ಗಮನ ಹರಿಸಿ ಸಾರ್ವಜನಿಕರಿಗೆ ಸಕಾಲಿಕವಾಗಿ ಗಣಕೀಕೃತ ಪಹಣಿ ಪತ್ರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ ಮುಖಂಡರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.