ನವದೆಹಲಿ (ಪಿಟಿಐ): ರಾಜಧಾನಿಯ ಬಾರ್ ಹಾಗೂ ರೆಸ್ಟೋರೆಂಟ್ಗಳಿಗೆ ಬನ್ನಿ. ನಿಮಗೀಗ ನ್ಯೂ ಬಾಲ್, ಗ್ರೀನ್ ಪಿಚ್, ಸ್ಟ್ರೇಟ್ ಡ್ರೈವ್ ಹಾಗೂ ಗೂಗ್ಲಿಯಂತಹ ವಿಶಿಷ್ಟ ಪೇಯ ಹಾಗೂ ತಿನಿಸುಗಳು ಮೆನುನಲ್ಲಿ ಕಾಣಸಿಗುತ್ತವೆ.

‘ಏನಿವೆಲ್ಲಾ?’ ಎಂದು ಕೇಳುತ್ತೀರಾ? ಕಾಕ್ಟೇಲ್ಗಳು ನ್ಯೂ ಬಾಲ್ ಮತ್ತು ಗ್ರೀನ್ ಪಿಚ್ ಹೆಸರಲ್ಲಿ ಬಟವಡೆಯಾದರೆ, ಸ್ಟ್ರೇಟ್ ಡ್ರೈವ್, ಗೂಗ್ಲಿ ಸ್ನ್ಯಾಕ್ಗಳು, ತ್ರಿವರ್ಣದ ಪಾಸ್ತಾ ಇನ್ನೂ ಏನೆಲ್ಲ ಲಭ್ಯವಿವೆ. ಎಲ್ಲ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಮಾಯೆ.

ಕ್ರಿಕೆಟ್ ಅಭಿಮಾನಿಗಳು ತಮ್ಮ ತಾಣಗಳಿಗೇ ಬರುವಂತೆ ಮಾಡಲು ಬಾರ್-ರೆಸ್ಟೋರೆಂಟ್ಗಳಲ್ಲಿ ಬೃಹತ್ ಪರದೆಯಲ್ಲಿ ಪಂದ್ಯದ ನೇರ ಪ್ರಸಾರವನ್ನು ತೋರಿಸಲಾಗುತ್ತಿದೆ. ಕೆಲವು ದೊಡ್ಡ ಬಾರ್ಗಳಂತೂ ಕ್ರಿಕೆಟ್ ಹೆಸರಲ್ಲಿ ಸ್ಪರ್ಧೆಗಳನ್ನೂ ಸಂಘಟಿಸುತ್ತಿವೆ. ಮೋತಿ ಮಹಲ್ ಡಿಲಕ್ಸ್ ರೆಸ್ಟೋರೆಂಟ್ನಲ್ಲಿ ತ್ರಿವರ್ಣದ ಪಾಸ್ತಾ ಸವಿಯಲು ಸಿದ್ಧವಿದ್ದರೆ, ಜೇಪಿ ಸಿದ್ಧಾರ್ಥ ಹೋಟೆಲ್ನಲ್ಲಿ ಭಜ್ಜಿ ನಾನ್-ವೆಜ್ ತಂದೂರಿ, ಲೆಹ್ಮನ್ ಫಿಶ್ ಸ್ಕೀವರ್ ಮತ್ತು ಜಹೀರ್ ಖಾನ್ ಶೇಕ್ಗಳು ಲಭ್ಯವಿವೆ.

ನ್ಯೂ ಬಾಲ್, ಗ್ರೀನ್ ಪಿಚ್, ಗೂಗ್ಲಿ ಮತ್ತು ಬೌನ್ಸರ್ ಹೆಸರಿನ ಕಾಕ್ಟೇಲ್ಗಳು ಇಲ್ಲಿ ಸರ್ವ್ಗೆ ಸಿದ್ಧವಾಗಿವೆ. ಗೋಡೆಗಳೆಲ್ಲ ಕ್ರಿಕೆಟ್ ಕ್ಷಣಗಳಿಂದ ಆವೃತವಾಗಿವೆ. ಹೋಟೆಲ್ ಸಿಬ್ಬಂದಿ ಆಟಗಾರರ ಧಿರಿಸಿನಲ್ಲಿ ಕಂಡರೆ, ಸೂಪರ್ವೈಸರ್ಗಳು ಅಂಪೈರ್ ಯುನಿಫಾರ್ಮ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕನಾಟ್ ಪ್ಲೇಸ್ನಲ್ಲಿರುವ ಸೈಡ್ ವೊಕ್ ಜನಪಥ್ ಬಳಿಯಿರುವ ಶಾಂಗ್ರಿಲಾ ಯುರೋ ಹೋಟೆಲ್ಗಳಲ್ಲಿ ಸ್ಟ್ರೇಟ್ ಡ್ರೈವ್ (ಕ್ಯಾಲಿಫೋರ್ನಿಯಾ ರೋಲ್ ಮತ್ತು ಸುಶಿ ಪ್ಲೇಟರ್) ಹಾಗೂ ಫುಲ್ ಟಾಸ್ (ಥೈ ಕಾರ್ನ್ ಕೇಕ್) ಸ್ನ್ಯಾಕ್ಗಳು ಸಿಕ್ಕುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.