ವಾಷಿಂಗ್ಟನ್ (ಐಎಎನ್ಎಸ್): ಸಜೀವ ಕೋಶದಂತೆಯೇ ಸುಸ್ಥಿರ ಬೆಳವಣಿಗೆ ಹೊಂದುವ ಸಾಮರ್ಥ್ಯವುಳ್ಳ ಕೃತಕ ಜೀವಕೋಶ ಪೊರೆಯನ್ನು ಮೈಸೂರು ಮೂಲದ ಅಮೆರಿಕದ ವಿಜ್ಞಾನಿ ನೇತೃತ್ವದ ತಂಡ ವಿನ್ಯಾಸಗೊಳಿಸಿ ಸಂಶ್ಲೇಷಿಸಿದೆ.

ಇದು ಸಜೀವ ಜೀವಕೋಶದ ವರ್ತನೆಯನ್ನು ನಿಖರವಾಗಿ ನಕಲು ಮಾಡವ ಮೂಲಕ ಜೀವಿಗಳ ಉಗಮದ ಅಧ್ಯಯನಕ್ಕೆ ವಿಜ್ಞಾನಿಗಳಿಗೆ ಮಹತ್ವದ ನೆರವು ನೀಡಲಿದೆ.

‘ನಾವು ಸೃಷ್ಟಿಸಿರುವ ಕೃತಕ ಜೀವಕೋಶ ಪೊರೆ ಸಂಪೂರ್ಣ ಸಂಶ್ಲೇಷಿತವಾಗಿದ್ದರೂ, ನೈಸರ್ಗಿಕ ಬದಲಾವಣೆಗೆ ಪ್ರತಿಕ್ರಿಯೆಯಾಗಿ ಸಂಯೋಜನೆಯನ್ನು ಅಳವಡಿಸಿಕೊಳ್ಳುವ ಸಾಮರ್ಥ್ಯದಂತಹ ಸಜೀವ ಅಂಗಾಂಗಳ ಅನೇಕ ಗುಣಲಕ್ಷಣಗಳನ್ನೇ ಹೊಂದಿವೆ’ ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ಮತ್ತು ಜೀವರಸಾಯನ ವಿಭಾಗದ ಸಹಾಯಕ ಪ್ರೊಫೆಸರ್ ಆಗಿರುವ ಮೈಸೂರು ಮೂಲದ ನೀಲ್ ದೇವರಾಜ್ ತಿಳಿಸಿದ್ದಾರೆ.

ಕೋಶಗಳಿಗೆ ರಚನೆ ಮತ್ತು ಸಂರಕ್ಷಣೆಯ ಗುಣ ಒದಗಿಸುವ ಮುಖ್ಯ ಅಣುಗಳನ್ನು ಸೃಷ್ಟಿಸುವ ಸಾಮರ್ಥ್ಯವಿರದ ಸಂಶ್ಲೇಷಿತ ಕೋಶಗಳನ್ನು ಮಾತ್ರ ಇದುವರೆಗೆ ಅಭಿವೃದ್ಧಿಪಡಿಸಲು ವಿಜ್ಞಾನಿಗಳು ಸಫಲರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.