ಮಂಗಳವಾರ, ಮೇ 17, 2022
23 °C

ಕೃಷ್ಣೆಗೆ ಹರಿದು ಬಂದ ನೀರು: ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಡಲಸಂಗಮ: ಕಳೆದ ಐದು ತಿಂಗಳಿಂದ ಬರಿದಾದ ಕೃಷ್ಣೆಗೆ ಸೋಮವಾರ ಸಂಜೆ ಆಲಮಟ್ಟಿ ಜಲಾಶಯದಿಂದ 15 ಸಾವಿರ ಕ್ಯುಸೆಕ್ ಹರಿದು ಬಂತು.ನೀರು ಬಿಟ್ಟ ಪರಿಣಾಮ ಮಂಗಳವಾರ ಬೆಳಗ್ಗೆ ಕೂಡಲಸಂಗಮದ ಸಂಗಮೇಶ್ವರ ದೇವಾಲಯದ ಬದಿಯಲ್ಲಿ ಕೃಷ್ಣಾ ನದಿಯಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿರುವುದು ಕಂಡು ಬಂತು. ಕೂಡಲಸಂಗಮಕ್ಕೆ ಬಂದ ಭಕ್ತರು ಕೃಷ್ಣೆಯಲ್ಲಿ ಸ್ನಾನ ಮಾಡಿ ಸಂಭ್ರಮ ಪಟ್ಟರು.ಸೋಮವಾರ ಸಂಜೆ ಆಲಮಟ್ಟಿ ಜಲಾಶಯದಿಂದ 15 ಸಾವಿರ  ಕ್ಯುಸೆಕ್ ನೀರನ್ನು ಬಿಟ್ಟ ಪರಿಣಾಮ, ನಾರಾಯಣಪುರ ಜಲಾಶಯದ ಹಿನ್ನಿರಿನಲ್ಲಿ ನೀರು ಸಂಗ್ರಹವಾಗಿರುವುದು. ಕಳೆದ 5 ತಿಂಗಳಿಂದ ಕೃಷ್ಣೆಯಲ್ಲಿ ನೀರು ಇರದೇ ಇರುವುದನ್ನು ನೋಡಿ ಪ್ರವಾಸಿಗರು, ಭಕ್ತರು ನೀರಾಸೆಯಿಂದ ಹೋಗುತ್ತಿದ್ದರು. ಮಂಗಳವಾರ ಬೆಳಿಗ್ಗೆ ಕೃಷ್ಣೆಗೆ ನೀರು ಬರುತ್ತಿರುವುದನ್ನು ನೋಡಿದ ಪ್ರವಾಸಿಗರು ತಂಡ ತಂಡವಾಗಿ ಕೂಡಲಸಂಗಮಕ್ಕೆ ಭೇಟಿ ಕೊಟ್ಟು ಕೃಷ್ಣ ಮಲಪ್ರಭೆಯಲ್ಲಿ ಸಂಭ್ರಮದಿಂದ ಸ್ನಾನ ಮಾಡಿ ಸಂಗಮನಾಥ, ವಿಶ್ವಗುರು ಬಸವಣ್ಣನವರ ಐಕ್ಯ ಮಂಟಪ ದರ್ಶನ ಪಡೆದರು.ನದಿಯ ದಡದ ತುರಡಗಿ, ಕಟಗೂರ, ವಳಕಲದಿನ್ನಿ, ಬಿಸಲದಿನ್ನಿ, ಕೂಡಲಸಂಗಮ, ಕೆಂಗಲ್, ಕಜಗಲ್ಲ ಮುಂತಾದ ಗ್ರಾಮದ ಜನರು ನದಿಯಲ್ಲಿ ನೀರು ಬಂದಿರುವುದರಿಂದ ಸಂಭ್ರಮದಿಂದ ಸಂಗಮೇಶ್ವರ ದೇವಾಲಯದ ಬಳಿಯ ಕೃಷ್ಣೆಗೆ ಹಾಗೂ ಸಂಗಮನಾಥನಿಗೆ ಪೂಜೆ ಸಲ್ಲಿಸಿ ಬಿತ್ತನೆಯ ಕಾರ್ಯಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಿರುವ ದೃಶ್ಯ ಮಂಗಳವಾರ ಕಂಡು ಬಂತು.ಕಳೆದ ಐದು ತಿಂಗಳಿಂದ ಕೃಷ್ಣ ಮಲಪ್ರಭೆಯಲ್ಲಿ ನೀರು ಇರದ ಪರಿಣಾಮ ಬಂದರು ಇಲಾಖೆಯ ದೋಣಿಗಳು ಸಂಚಾರ ಸ್ಥಗಿತಗೊಳಿಸಿದವು. ಮಂಗಳವಾರ ನೀರು ಬಂದಿರುವುದರಿಂದ ಬುಧವಾರದಿಂದ ದೋಣಿ ಸಂಚಾರ ಆರಂಭ ಮಾಡಲು ಸಕಲ ಸಿದ್ಧತೆ  ಮಾಡಿಕೊಳ್ಳುತ್ತಿರುವ ದೃಶ್ಯ ಕಂಡು ಬಂತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.