ಸೋಮವಾರ, ಏಪ್ರಿಲ್ 12, 2021
24 °C

ಕೆಂಪೇಗೌಡ ಪ್ರಶಸ್ತಿ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೀಣ್ಯ ದಾಸರಹಳ್ಳಿ: `ಕುಲಕಸುಬಿಗೆ ಅನುಗುಣವಾಗಿ ನಗರವನ್ನು ನಿರ್ಮಿಸಿ ಎಲ್ಲ ವರ್ಗದ ಜನರಿಗೂ ವ್ಯಾಪಾರ ಮಾಡಿ ಬದುಕಲು ಅನುಕೂಲ ಮಾಡಿಕೊಟ್ಟ ಬೆಂಗಳೂರು ನಿರ್ಮಾತೃ ಕೆಂಪೇಗೌಡ ಅವರು ಲಕ್ಷಾಂತರ ಜನರ ಜೀವನ ನಿರ್ವಹಣೆಗೆ ಆಸರೆಯಾದರು~ ಎಂದು ಶಾಸಕ ಎಸ್.ಮುನಿರಾಜು ಅಭಿಪ್ರಾಯಪಟ್ಟರು.ದಾಸರಹಳ್ಳಿ ಕ್ಷೇತ್ರದ ಹೆಗ್ಗನಹಳ್ಳಿ ಸರ್ಕಾರಿ ಶಾಲಾ ಮೈದಾನದಲ್ಲಿ ಸೋಮವಾರ ನಡೆದ ವಾರ್ಡ್ ಮಟ್ಟದ ಕೆಂಪೇಗೌಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.ಪಾಲಿಕೆ ಸದಸ್ಯ ಗೋವಿಂದೇಗೌಡ, ಪುಟ್ಟಣ್ಣ ತಮ್ಮಣ್ಣ, ಎಚ್.ಎನ್.ಗಂಗಾಧರ್, ಆರ್.ಪಿ. ಶಶಿ ಶಿವಕುಮಾರ್, ಮುಖಂಡರಾದ ಎಚ್.ಎನ್.ವರಮಹಾಲಕ್ಷ್ಮಿ, ನಿಂಗಪ್ಪ, ಚಿಕ್ಕತಿಮ್ಮೇಗೌಡ, ಜಂಟಿ ಆಯುಕ್ತ ಎಲ್.ರಾಧಾಕೃಷ್ಣ ಉಪಸ್ಥಿತರಿದ್ದರು. ಸುಂಕದಕಟ್ಟೆ ಪೈಪ್‌ಲೈನ್ ರಸ್ತೆ ಗಣೇಶ ದೇವಸ್ಥಾನದಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರದ ಮೆರವಣಿಗೆಯನ್ನು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಟಿ.ತಿಮೇಶ್ ಉದ್ಘಾಟಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.