ಕೆಎಸ್‌ಪಿಗೆ ಗೆಲುವು

7

ಕೆಎಸ್‌ಪಿಗೆ ಗೆಲುವು

Published:
Updated:
ಕೆಎಸ್‌ಪಿಗೆ ಗೆಲುವು

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ತಂಡದವರು ಇಲ್ಲಿ ನಡೆಯುತ್ತಿರುವ ಕೊಡವ ಸಮಾಜ ಆಶ್ರಯದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸ್ಮಾರಕ ರಾಜ್ಯ ಮಟ್ಟದ ಹಾಕಿ ಟೂರ್ನಿಯಲ್ಲಿ ಗೆಲುವು ಪಡೆದರು. ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಕೆಎಸ್‌ಪಿ ತಂಡ 3-2 ಗೋಲುಗಳಿಂದ ಆರ್‌ಡಬ್ಲ್ಯು ಎಫ್ ತಂಡವನ್ನು ಮಣಿಸಿ ರೋಚಕ ಗೆಲುವು ಪಡೆಯಿತು.ಪ್ರಬಲ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ ವಿರಾಮದ ವೇಳೆಗೆ ಕೆಎಸ್‌ಪಿ 2-0 ಮುನ್ನಡೆ ಸಾಧಿಸಿತ್ತು. ವಿಜಯಿ ತಂಡದ ಉಮೇಶ್ ಹಾಗೂ ಮಹೇಶ್ ಗೋಲು ಗಳಿಸಿ ತಂಡವನ್ನು ಮುನ್ನಡೆಯತ್ತ ಕೊಂಡೊಯ್ದರು. ಆರ್‌ಡಬ್ಲ್ಯುಎಫ್ ತಂಡದ ಪರ ಗಿರೀಶ್ ಗಣಪತಿ 48ನೇ ನಿಮಿಷದಲ್ಲಿ ಎರಡು ಗೋಲು ಕಲೆ ಹಾಕಿದರು. ಉಭಯ ತಂಡಗಳು ಸಮಬಲ ಸಾಧಿಸಿದ್ದವು. ಉಮೇಶ್ 54ನೇ ನಿಮಿಷದಲ್ಲಿ ಗಳಿಸಿದ ಒಂದು ಗೋಲು ಕೆಎಸ್‌ಪಿ ತಂಡಕ್ಕೆ ಗೆಲುವು ತಂದು ಕೊಟ್ಟಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry