ನವದೆಹಲಿ: ಉತ್ತರ ಕರ್ನಾಟಕದ ಕನಸಿನ ಯೋಜನೆಯಾದ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಮಾರ್ಗದಿಂದ ಪರಿಸರದ ಮೇಲಾಗುವ ಪರಿಣಾಮ ಕುರಿತು ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಪರಿಶೀಲಿಸುತ್ತಿದೆ.

ಈ ಯೋಜನೆ ಕುರಿತು ಕೇಂದ್ರ ಅರಣ್ಯ ಸಚಿವಾಲಯದ ಮಹಾನಿರ್ದೇಶಕ ಪಿ.ಬಿ. ಗಂಗೋಪಾಧ್ಯಾಯ ಸಮಿತಿ ವರದಿಯನ್ನು ಪರಿಶೀಲನೆಗೆ ಸಿಇಸಿಗೆ ಸಲ್ಲಿಸಲಾಗಿದೆ. ಈ ಯೋಜನೆ ಕುರಿತು ಸಿಇಸಿ ಸುಪ್ರೀಂ ಕೋರ್ಟ್ಗೆ ವರದಿ ಸಲ್ಲಿಸಲಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಮಂಗಳವಾರ ಪತ್ರಕರ್ತರಿಗೆ ತಿಳಿಸಿದರು.

`ಅಭಿವೃದ್ಧಿ ದೃಷ್ಟಿಯಿಂದ ಅತೀ ಮಹತ್ವದ್ದು ಎನ್ನಲಾದ ಈ ಯೋಜನೆಗೆ 720 ಹೆಕ್ಟೇರ್ ಅರಣ್ಯ, 2.80 ಲಕ್ಷ ಮರಗಳು ಬಲಿಯಾಗಲಿವೆ~ ಎಂದು ಗಂಗೋಪಾಧ್ಯಾಯ ಸಮಿತಿ ತನ್ನ ವರದಿಯಲ್ಲಿ ಹೇಳಿದೆ. 163ಕಿ.ಮೀ. ಉದ್ದದ ರೈಲು ಮಾರ್ಗ ಹುಲಿ ಸಂರಕ್ಷಣೆ ಯೋಜನೆ, ಕಾಳಿ ಹಾಗೂ ಬೇಡ್ತಿ ನದಿ ಹರಿಯುವ ಸೂಕ್ಷ್ಮ ಪರಿಸರದಲ್ಲಿ ಹಾದು ಹೋಗಲಿದೆ. ಉತ್ತರ ಕರ್ನಾಟಕದ ಅದೃಷ್ಟದ ಬಾಗಿಲು ಎಂದೇ ಬಿಂಬಿಸಲಾಗುತ್ತಿರುವ ಈ ಯೋಜನೆ ಪರಿಸರ ವಾದಿಗಳ ವಿರೋಧದಿಂದ ಬಹಳ ಕಾಲದಿಂದ ನೆನೆಗುದಿಗೆ ಬಿದ್ದಿದೆ.

ಕಳೆದ ವರ್ಷದಂತೆ ಈ ಸಲದ ರೈಲ್ವೆ ಬಜೆಟ್ನಲ್ಲಿ ರಾಜ್ಯದ ಹಲವು ಯೋಜನೆಗಳು ಪ್ರಕಟವಾಗಲಿವೆ. ವೆಚ್ಚ ಹಂಚಿಕೆ ಆಧಾರದಲ್ಲಿ ಗದಗ- ವಾಡಿ, ಶ್ರೀನಿವಾಸಪುರ- ಮದನಪಲ್ಲಿ, ಮುಳಬಾಗಿಲು- ಚಿತ್ತೂರು ಹಾಗೂ ಆಲಮಟ್ಟಿ- ಕೊಪ್ಪಳ ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ. ಈ ಯೋಜನೆಗೆ ತಗಲುವ ವೆಚ್ಚದಲ್ಲಿ ಶೇ. 50ರಷ್ಟನ್ನು ರಾಜ್ಯ ಸರ್ಕಾರ ಭರಿಸಲಿದೆ. ಉಚಿತವಾಗಿ ಭೂಮಿ ನೀಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.