ಭಾನುವಾರ, ಆಗಸ್ಟ್ 9, 2020
21 °C

ಕೇಂದ್ರ ಸಂಪುಟದಲ್ಲಿ ನಂಬರ್-2 ಯಾರು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ಸಂಪುಟದಲ್ಲಿ ನಂಬರ್-2 ಯಾರು?

ನವದೆಹಲಿ (ಪಿಟಿಐ): ಪ್ರಣವ್ ಮುಖರ್ಜಿ ಅವರಿಂದ ತೆರವಾದ ಕೇಂದ್ರ ಸಚಿವ ಸಂಪುಟದಲ್ಲಿ ಪ್ರಧಾನಿ ಮನಮೋಹನ್‌ಸಿಂಗ್ ನಂತರ ಎರಡನೇ ಸ್ಥಾನ ಶರದ್ ಪವಾರ್ ಅವರಿಗೆ ಒಲಿದಿದೆ. ಪ್ರಧಾನಮಂತ್ರಿಗಳ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಗುರುವಾರ ಅಧಿಕೃತವಾಗಿ ಪ್ರಕಟಿಸಲಾಗಿದೆ.ಈ ಮುಂಚೆ ಪಟ್ಟಿಯಲ್ಲಿ ಪ್ರಧಾನಿ ಬಳಿಕ ಪ್ರಣವ್ ಮುಖರ್ಜಿ ಅವರ  ಹೆಸರು ಎರಡನೇ ಸ್ಥಾನದಲ್ಲಿತ್ತು.

ಕಾಂಗ್ರೆಸ್ಸಿಗರಿಗೆ ಮಾತ್ರ ಮೀಸಲಿದ್ದ ಭದ್ರತೆ ಮೇಲಿನ ಸಂಪುಟ ಸಮಿತಿಯ ಪಟ್ಟಿಯಲ್ಲಿ ಎನ್‌ಸಿಪಿ ನಾಯಕರಾಗಿರುವ ಪವಾರ್ ಹೆಸರು ಮೊದಲ ಸ್ಥಾನದಲ್ಲಿದ್ದು, ಕಾಂಗ್ರೆಸ್ ಹಿರಿಯ ನಾಯಕರಾದ ಎ.ಕೆ. ಆಂಟನಿ, ಪಿ. ಚಿದಂಬರಂ ಮತ್ತು ಎಸ್. ಎಂ. ಕೃಷ್ಣ ನಂತರದ ಸ್ಥಾನದಲ್ಲಿದ್ದಾರೆ.ಪ್ರಧಾನಿ ಮನಮೋಹನ್‌ಸಿಂಗ್ ಅವರು ಅಧಿಕೃತ ಪ್ರವಾಸದ ಮೇಲೆ ದೇಶದ ಹೊರಗೆ ಹೋದಾಗ ಸಚಿವರ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದ ಪ್ರಣವ್ ಅವರು ದೆಹಲಿಯಲ್ಲಿದ್ದು ಸರ್ಕಾರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.