ಸುಮಾರು ಹದಿನೈದು ವರ್ಷಗಳ ಹಿಂದೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಪರಶುರಾಮಪುರ ಹೋಬಳಿಗೆ ಸೇರಿದ ಜಗಜೀವನರಾಂ ಕಾಲೋನಿ ಎಂಬ ಪುಟ್ಟ ಹಳ್ಳಿಯಲ್ಲಿ ಜಲಾನಯನ ಸಂರಕ್ಷಣೆ ಕೆಲಸ ಮಾಡುತ್ತಿದ್ದೆವು. ಅಲ್ಲಿನ ಸುಮಾರು ಒಂದು ಸಾವಿರ ಎಕರೆ ಜಮೀನು ಅಮೃತಮಹಲ್ ಕಾವಲ್ಗೆ ಸೇರಿತ್ತು. ಸರ್ಕಾರವು ಭೂಹೀನರನ್ನು ಕೂಡುವಕ್ಕಲು ಸಹಕಾರ ಸಂಘವಾಗಿ ಮಾಡಿ ಈ ಭೂಮಿಯನ್ನು ಕೃಷಿ ಮಾಡಲು ಬಿಟ್ಟುಕೊಟ್ಟಿತ್ತು. ತಾಲ್ಲೂಕು ಆಡಳಿತವು ನಮಗೆ ಕೊಟ್ಟಿದ್ದ ಸುಮಾರು 10 ಗುಂಟೆ ಭೂಮಿಯಲ್ಲಿ ತರಕಾರಿ ಬೀಜಗಳನ್ನು ಬೆಳೆಸಿ ಹಳ್ಳಿಗಳಿಗೆ ವಿತರಿಸುತ್ತಿದ್ದೆವು.

ಈ ಸಂದರ್ಭದಲ್ಲಿ ನಮ್ಮ ಜೊತೆ ಕೆಲಸ ಮಾಡುತ್ತಿದ್ದವರೊಬ್ಬರು ಒಂದು ಬಿಳಿಯ ಬೀಜವನ್ನು ಕೊಟ್ಟು `ಸಂಬೆ ಬೀಜ~ ಎಂದು ಹೇಳಿದರು. ಒಂದೇ ಬೀಜವನ್ನು ಬಿತ್ತಿ ಒಂದು ಬೊಗಸೆಯಷ್ಟು ಬೀಜಗಳನ್ನು ಬೆಳೆಸಿಕೊಂಡೆವು.

ಮುಂದೆ ಈ ಪ್ರದೇಶಕ್ಕೆ ವಿದಾಯ ಹೇಳಿ ತಮಿಳುನಾಡಿನ ಡೆಂಕಣಕೋಟೆ ಕಡೆ ರೈತರೊಟ್ಟಿಗೆ ಕೆಲಸ ಮಾಡಲು ಪ್ರಾರಂಭಿಸಿದಾಗ ನಾನು ತಂದಿದ್ದ ಸಂಬೆ ಬೀಜಗಳನ್ನು ರೈತರ ಕೈತೋಟದಲ್ಲಿ ಬಿತ್ತಿಸಿದೆ. ಈ ಪ್ರದೇಶ ಬಿಟ್ಟು ನಂತರ ನಂಜನಗೂಡು, ಮಾಗಡಿಯ ರೈತರೊಟ್ಟಿಗೆ ಕೆಲಸ ಮಾಡಲು ಪ್ರಾರಂಭಿಸಿದಾಗ ಕೈತೋಟದಲ್ಲಿ ಬಿತ್ತಲು ನೂರಾರು ರೈತರಿಗೆ ಸಂಬೆ ಬೀಜ ಕೊಟ್ಟೆ. ಮಾಗಡಿಯ ರೈತರೊಬ್ಬರು ಕೊಟ್ಟ ಮುಷ್ಟಿಯಷ್ಟು ಬೀಜಗಳನ್ನು ನಮಗೆ ಸೇರಿದ ಭೂಮಿಯಲ್ಲಿ ಬಿತ್ತಿ ಬೀಜಗಳನ್ನು ಹೆಚ್ಚು ಮಾಡಲಾಯಿತು.

ಇದನ್ನು ಆಡು ಭಾಷೆಯಲ್ಲಿ ಸಂಬೆ ಬೀಜ ಎಂದರೂ ಇದಕ್ಕೆ ಕನ್ನಡದಲ್ಲಿ ಕಂಬೆ, ಸೆಂಬೆ, ತುಂಬೆಕಾಯಿ ಇತ್ಯಾದಿ ಹೆಸರುಗಳಿವೆ. ಇಂಗ್ಲಿಷ್ನಲ್ಲಿ ಜಾಕ್ಬೀನ್, ಸ್ವೋರ್ಡ್ಬೀನ್ ಎಂದೂ ಕರೆಯುತ್ತಾರೆ. ಇದು ಲೆಗ್ಯೂಮಿನೋಸಿ ಕುಟುಂಬಕ್ಕೆ ಸೇರಿದ ಬಳ್ಳಿಯಾಗಿದ್ದು, ವೈಜ್ಞಾನಿಕ ಹೆಸರು ಕ್ಯನವಾಲಿಯ ವಿನ್ಸಿಪಾರ್ಮಿಸ್. ಬಳ್ಳಿಯು ನಾರಿನಿಂದ ಕೂಡಿದ್ದು ಗಟ್ಟಿ ಕಾಂಡ ಹೊಂದಿದೆ, ಎಲೆಗಳು ಹಚ್ಚ-ಹಸಿರಿನಿಂದ ಕೂಡಿರುತ್ತವೆ.

ಮುತುವರ್ಜಿಯಿಂದ ಬೆಳೆಸಿದರೆ ಇದು ಎರಡು ವರ್ಷದವರೆಗೆ ಫಸಲನ್ನು ಕೊಡುತ್ತದೆ. ತೇವಾಂಶದ ಕೊರತೆಯನ್ನು ಎದುರಿಸಬಲ್ಲ ಬರನಿರೋಧಕ ಗುಣಗಳಿವೆ. ಕೀಟ-ರೋಗಗಳ ಬಾಧೆಯಿಲ್ಲದೆ ಮಣ್ಣಿನ ಸಾರವನ್ನು ಹೆಚ್ಚಿಸಬಲ್ಲ ದ್ವಿದಳ ಧಾನ್ಯ ಇದು.

ಬೆಳೆಸುವುದು: ನೀರು ನಿಲ್ಲದ ಮತ್ತು ನೀರು ಬಸಿದುಹೋಗುವ ಭೂಮಿಯಲ್ಲಿ 20 ರಿಂದ 30 ಸೆಂಟಿ ಮೀಟರ್ ಉದ್ದ, ಅಗಲ ಮತ್ತು ಆಳದ ಗುಳಿ (ಗುಂಡಿ) ತೆಗೆಯಬೇಕು.

ಚೆನ್ನಾಗಿ ಕಳಿತ ಒಂದು ಕಿಲೊ ಕೊಟ್ಟಿಗೆ ಗೊಬ್ಬರಕ್ಕೆ ಮಣ್ಣು ಮಿಶ್ರಣ ಮಾಡಿ ಇದಕ್ಕೆ ತುಂಬಬೇಕು. ಗುಳಿಯಿಂದ ಗುಳಿಗೆ ಎರಡು ಅಡಿ ಅಂತರ ಕೊಡಬೇಕು. ನೀರಿನ ಆಶ್ರಯವಿದ್ದರೆ ಬೇಸಿಗೆಯ ಮಾರ್ಚ್, ಏಪ್ರಿಲ್ ತಿಂಗಳುಗಳಲ್ಲಿ, ಮಳೆ ಆಶ್ರಯವಾದರೆ ಜೂನ್ ತಿಂಗಳಿಂದ ಅಕ್ಟೋಬರ್ ಮೊದಲ ವಾರದವರೆಗೆ ಬಿತ್ತಲು ಸೂಕ್ತ ಕಾಲ.

ಬೀಜಗಳು ತುಂಬ ಗಟ್ಟಿ. ಆದ್ದರಿಂದ ಒಂದು ರಾತ್ರಿ ನೀರಿನಲ್ಲಿ ನೆನೆಸಿ, ಗುಳಿಯೊಂದಕ್ಕೆ ಒಂದೇ ಬೀಜವನ್ನು ಬಿತ್ತಬೇಕು. ಮುಂದೆ 6 ರಿಂದ 8 ದಿನಗಳ ಒಳಗೆ ಬೀಜಗಳು ಮೊಳೆತು ಎರಡು ಎಲೆಗಳಾಗಿ ಬೆಳೆಯಲು ಪ್ರಾರಂಭಿಸುತ್ತವೆ. ಸುಮಾರು ಎರಡು ಮೀಟರ್ ಎತ್ತರದವರೆಗೆ ಬಳ್ಳಿಯಂತೆ ಬೆಳೆಯುವ ಕಂಬೆ ಗಿಡಗಳ ಪಕ್ಕ ಕೋಲುಗಳನ್ನು ಕಟ್ಟಿ ಆಧಾರ ಕೊಡಬೇಕು. ಬುಡದಲ್ಲಿ ಪೊದೆಯಾಕಾರ ತಾಳಿ ಬೆಳೆಯುತ್ತಾ ಬೆಳೆಯುತ್ತಾ ಬಳ್ಳಿ ರೂಪ ಪಡೆದು ಎಲೆ, ಹೂ, ಕಾಯಿಗಳಿಂದ ಮೈದುಂಬುತ್ತದೆ. ಮಣ್ಣಿನಲ್ಲಿ ತೀವ್ರತರದ ತೇವಾಂಶದ ಕೊರತೆಯಾಗಿ ಎಲೆಗಳು ಬಾಡಿದಾಗ ಮಾತ್ರ ನೀರನ್ನು ಕೊಡಬೇಕು.

ಮನೆಬಳಕೆ: ಬೀಜ ಬಿತ್ತಿದ 20 ರಿಂದ 25 ದಿವಸಗಳೊಳಗೆ ಬುಡದಿಂದಲೆ ಬಿಡಿ-ಬಿಡಿ ಹೂಗಳು ಪ್ರಾರಂಭವಾಗಿ ಪೀಚಾಗಿ ಕಾಯಿಗಳಾಗಿ ರೂಪುಗೊಳ್ಳುತ್ತವೆ. ಕಾಯಿಗಳನ್ನು ಹಿಡಿದು ಮುರಿದಾಗ ನಾರಿಲ್ಲದೆ ತುಂಡಾಗಬೇಕು. ಅಂಥವನ್ನು ಹುಳಿಸಾರಿಗೆ ಮತ್ತು ಪಲ್ಯಕ್ಕೆ ಬಳಸಲು ಸೂಕ್ತ. ಅರೆಬಲಿತ ಕಾಯಿಗಳನ್ನು ಸುಲಿದು ಕಾಳು ಬಳಸಬಹುದು.

ಬಲಿತ ಕಾಯಿಗಳ ನಾರು ತೆಗೆದು ಉಪ್ಪಿನಕಾಯಿ ಮಾಡಬಹುದು. ಗಿಡದಲ್ಲೇ ಬಲಿತ ಕಾಯಿಗಳನ್ನು ಬಿಸಿಲಿನಲ್ಲಿ ಒಣಗಿಸಿ ಶೇಖರಿಸಿ ಇಟ್ಟುಕೊಂಡು ಅವಶ್ಯಕತೆ ಇದ್ದಾಗ ನೀರಿನಲ್ಲಿ ನೆನೆಸಿ ಸಿಪ್ಪೆ ಬಿಡಿಸಿ ಸಾರು ಮಾಡಬಹುದು. ಎಳೆ ಮತ್ತು ಬಲಿತ ಕಾಯಿಗಳಲ್ಲಿ ಅಧಿಕ ಪ್ರಮಾಣದ ನಾರು ಮತ್ತು ಪ್ರೋಟೀನ್ ಪೋಷಕಾಂಶಗಳಿರುತ್ತವೆ.

ಬೀಜಗಳ ಆಯ್ಕೆ: ಕಂಬೆ ಕಾಯಿಗಳು ಸುಮಾರು 30 ಸೇಂಟಿ ಮೀಟರ್ ಉದ್ದವಿರುತ್ತವೆ. ಬುಡದ ಮೊದಲ ಬೀಡಿನ ಕಾಯಿಗಳನ್ನು ಬೀಜಕ್ಕೆ ಬಿಡದೆ ಎರಡನೇ ಬೀಡು ಬಿಡುವ ನೆಲಕ್ಕೆ ತಾಕಿ ಡೊಂಕಾಗಿರದ ನೇರವಾದ ಕಾಯಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

ಗಿಡದಲ್ಲೆ ಒಣಗಿದ ಕಾಯಿಗಳನ್ನು ನೀರಿನಲ್ಲಿ ನೆನೆಯದಂತೆ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ಕಾಯಿಗಳಲ್ಲಿ ಬೀಜಗಳು ಅಲುಗಾಡಲು ಪ್ರಾರಂಭಿಸಿದಾಗ ತೇವಾಂಶವಿಲ್ಲದ ಜಾಗದಲ್ಲಿ ಶೇಖರಿಸಿಡಬೇಕು. ಒಣಗಿದ ತಳ್ಳುಗಳನ್ನು ಬಿಡಿಸಿ ಸುಕ್ಕುಗಳಿರದ ಬೀಜಗಳನ್ನು ಬಿತ್ತಲು ಬಳಸಬೇಕು.

ಕುಂಡಗಳಲ್ಲಿ ಬೆಳೆಸುವುದು: ಸ್ಥಳದ ಅಭಾವವಿದ್ದಾಗ ಮನೆಯ ಮಹಡಿಯ ಮೇಲೆ 30 ಸೆಂಟಿ ಮೀಟರ್ ಸುತ್ತಳತೆಯ ಒಂದು ಒಂದೂವರೆ ಅಡಿ ಕುಂಡಗಳ್ಲ್ಲಲಿ ಸಹ ಕಂಬೆ ಗಿಡಗಳನ್ನು ಬೆಳೆಸಲು ಸಾಧ್ಯ. ಕುಂಡಗಳ ತಳಭಾಗಕ್ಕೆ ಒಂದು ಪದರ ಇಟ್ಟಿಗೆ ಚೂರು, ಇದರ ಮೇಲೆ ಒಂದು ಪದರ ತೆಂಗಿನಕಾಯಿ ನಾರು, ಇದರ ಮೇಲೆ ಕೊಟ್ಟಿಗೆ ಗೊಬ್ಬರ ಮಿಶ್ರಿತ ಮಣ್ಣನ್ನು ತುಂಬಿ ಒಂದು ಕುಂಡಕ್ಕೆ ಒಂದು ಬೀಜವನ್ನು ಬಿತ್ತಬೇಕು. ಬಳ್ಳಿ ಬರಲು ಪ್ರಾರಂಭಿಸಿದಾಗ ಆಧಾರಕ್ಕೆ ಕೋಲು ಕಟ್ಟಬೇಕು.

ಮನೆ ಬಳಕೆಗೆ ಕಂಬೆ ಕಾಯಿ ಬೆಳೆದುಕೊಳ್ಳಲು ಒಂದೇ ಸಾರಿ 40-50 ಬೀಜ ಬಿತ್ತುವ ಬದಲು ಒಂದು ಅಥವಾ ಎರಡು ತಿಂಗಳು ಅಂತರಕೊಟ್ಟು ಹತ್ತರಿಂದ ಇಪ್ಪತ್ತು ಬೀಜಗಳನ್ನು ಬಿತ್ತುವುದು ಉತ್ತಮ. ಅದರಿಂದ ನಿರಂತರವಾಗಿ ಅಡುಗೆ ಮನೆ ಬಳಕೆಗೆ ಕಂಬೆ ಕಾಯಿಗಳು ಸಿಗುತ್ತಿರುತ್ತವೆ.

ಕಂಬೆ ಗಿಡಗಳನ್ನ ಕೈತೋಟಗಳಲ್ಲಿ, ಕುಂಡಗಳಲ್ಲಿ ಬೆಳೆಸಿ ಅಡುಗೆ ಮನೆಗೆ ಬೇಕಾಗುವ ತರಕಾರಿ ಬೆಳೆಯುವ, ಬೀಜ ಹೆಚ್ಚು ಮಾಡಿ ನೆರೆಹೊರೆಯವರಿಗೆ ಕೊಡುವ, ಬೀಜ ಸಂಸ್ಕೃತಿಯ ಪರಂಪರೆಯನ್ನು ಮುಂದಿನ ತಲೆಮಾರಿಗೆ ಕಾಪಾಡುವ ಆಸಕ್ತರು ಈ ಕೆಳಕಂಡ ವಿಳಾಸವನ್ನು ಸಂರ್ಪಕಿಸಬಹುದು.

ಇಕ್ರಾ ಸಂಘಟನೆ, ನಂ 22, ಸಂಸ್ಕೃತಿ, 5 ನೇ ಅಡ್ಡರಸ್ತೆ, ಮೈಕೆಲ್ಪಾಳ್ಯ, ಹೊಸತಿಪ್ಪಸಂದ್ರ ಅಂಚೆ, ಬೆಂಗಳೂರು-560 075. ದೂರವಾಣಿ: 080-2528 3370, 2521 3104.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.