ಮಂಗಳವಾರ, ಮೇ 18, 2021
30 °C

ಕ್ಯಾಂಪಸ್ ಕಲರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇಲೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದ  ಅಂತಿಮ ವರ್ಷದ ವಿದ್ಯಾರ್ಥಿಗಳು ಯಾಣಕ್ಕೆ ಟೆಕ್ನಿಕಲ್ ಟೂರ್ (!) ಹೋಗಿದ್ದ ಸಂದರ್ಭದಲ್ಲಿ ತೆಗೆಸಿಕೊಂಡ ಚಿತ್ರ. ಯುವಜನಕ್ಕೆ ಚಿತ್ರವನ್ನು ಕಳುಹಿಸಿದವರು ಚಿಕ್ಕಮಗಳೂರು ಕರ್ತಿಕೆರೆಯ ರಶ್ಮಿ ಬಿ.ಆರ್. ಚಿತ್ರದಲ್ಲಿ ಬಲ ಬದಿಯಲ್ಲಿದ್ದಾರೆ. ನಿಜವಾಗಿಯೂ ಅವರಿಗೆ ಸುಸ್ತಾಗಿದೆ. ನಿಂತ ಶೈಲಿ ಅದನ್ನೇ ಹೇಳುತ್ತದೆ. ಹಿಂದೆ ಇರುವವರಿಗೆ ಚಿತ್ರದಲ್ಲಿ ತಮ್ಮ ಮುಖ ಕಾಣುವುದಿಲ್ಲ ಅಂತ ಮೊದಲೇ ತಿಳಿದಿತ್ತೋ ಏನೋ ಕೈ ಎತ್ತಿ ತಮ್ಮ ಇರುವಿಕೆಯನ್ನು ಸೂಚಿಸಿದ್ದಾರೆ. ಈ ಪ್ರವಾಸಕ್ಕೆ ಒಟ್ಟು 23 ಜನ ಹೋಗಿದ್ದರು. ಚಿತ್ರದಲ್ಲಿ ಕೆಲವರೇ ಇದ್ದಾರೆ. ಉಳಿದವರು ನಡೆಯಲು ಸಾಧ್ಯವಾಗದೇ ಹಿಂದೆ ಉಳಿದಿದ್ದರು ಎಂದು ರಶ್ಮಿ ಬರೆದಿದ್ದಾರೆ. ಈ ಚಿತ್ರವನ್ನು ಕಂಡು ನಾವು ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅವರಿಗೆ ಅನಿಸದೆ ಇರದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.