ಕಾರ್ಡಿಫ್ (ಪಿಟಿಐ): ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಗೆಲುವು ಪಡೆದು ವಿಶ್ವಾಸದಲ್ಲಿರುವ ನ್ಯೂಜಿಲೆಂಡ್ ತಂಡ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಶ್ರೀಲಂಕಾವನ್ನು ಎದುರಿಸಲಿದ್ದು, ಗೆಲುವಿನ ನಿರೀಕ್ಷೆಯಲ್ಲಿದೆ.

ಇತ್ತೀಚಿಗೆ ನಡೆದ ಸರಣಿಯಲ್ಲಿ ಕಿವೀಸ್ 2-1ರಲ್ಲಿ ಇಂಗ್ಲೆಂಡ್ ಎದುರು ಸರಣಿ ಜಯಿಸಿತ್ತು. ಈ ಸರಣಿಯಲ್ಲಿ ಆರಂಭಿಕ ಬ್ಯಾಟ್ಸ್ಮನ್ ಮಾರ್ಟಿನ್ ಗುಪ್ಟಿಲ್ ಎರಡು ಶತಕ ಸಿಡಿಸಿದ್ದರು. ಸೌತ್ಹ್ಯಾಂಪ್ಟನ್ನಲ್ಲಿ ನಡೆದ ಪಂದ್ಯದಲ್ಲಿ ಗುಪ್ಟಿಲ್ ಇಂಗ್ಲೆಂಡ್ ಎದುರು ಅಜೇಯ 189 ರನ್ ಗಳಿಸಿದ್ದರು. ಇದು ಏಕದಿನ ಕ್ರಿಕೆಟ್ನಲ್ಲಿ ನ್ಯೂಜಿಲೆಂಡ್ ಆಟಗಾರನ ವೈಯಕ್ತಿಕ ಗರಿಷ್ಠ ಸ್ಕೋರು ಆಗಿದೆ.

ರಾಸ್ ಟೇಲರ್ ಮೂರೂ ಪಂದ್ಯಗಳಲ್ಲಿ ಅರ್ಧಶತಕ ಗಳಿಸಿದ್ದರು. ಇದು ನ್ಯೂಜಿಲೆಂಡ್ ಬ್ಯಾಟಿಂಗ್ ಸಾಮರ್ಥ್ಯಕ್ಕೆ ಸಾಕ್ಷಿ. ಆದರೆ, ಎದುರಾಳಿ ಲಂಕಾ ಪ್ರಭಾವಿ ಸ್ಪಿನ್ ಬೌಲರ್ಗಳನ್ನು ಹೊಂದಿದೆ. ಆದ್ದರಿಂದ ಈ ಪಂದ್ಯ ಒಂದು ರೀತಿಯಲ್ಲಿ ನ್ಯೂಜಿಲೆಂಡ್ ಬ್ಯಾಟ್ಸ್ಮನ್ಗಳು ಮತ್ತು ಲಂಕಾದ ಸ್ಪಿನ್ ಬೌಲರ್ಗಳ ನಡುವಿನ ಹಣಾಹಣಿಯಾಗಿದೆ.

ಇಂಗ್ಲೆಂಡ್ನಲ್ಲಿಯೇ ಹೋದ ತಿಂಗಳು ಟೆಸ್ಟ್ ಮತ್ತು ಏಕದಿನ ಸರಣಿಯನ್ನಾಡಿರುವ ಕಿವೀಸ್ ಸ್ಥಳೀಯ ವಾತಾವರಣಕ್ಕೆ ಚೆನ್ನಾಗಿ ಹೊಂದಿಕೊಂಡಿದೆ. ಇದು ಬ್ರೆಂಡನ್ ಬಳಗಕ್ಕೆ ಅನುಕೂಲವಾಗಲಿದೆ.

ಏಂಜಲೊ ಮ್ಯಾಥ್ಯುಸ್ ಸಾರಥ್ಯದ ಲಂಕಾ ತಂಡ ಏಕದಿನ ಮಾದರಿಯಲ್ಲಿ ಬಲಿಷ್ಠ ಎನಿಸಿಕೊಂಡಿದೆ. ಈ ತಂಡ ಹಿಂದಿನ 11 ಪಂದ್ಯಗಳಲ್ಲಿ 10ರಲ್ಲಿ ಗೆಲುವು ಸಾಧಿಸಿದೆ. ಅದರಲ್ಲಿ ಅರು ಜಯ ನ್ಯೂಜಿಲೆಂಡ್ ವಿರುದ್ಧ ಗಳಿಸಿದ್ದು ಎನ್ನುವ ಅಂಕಿ ಅಂಶವೇ ಲಂಕಾ ತಂಡದ ವಿಶ್ವಾಸಕ್ಕೆ ಬಲ ತುಂಬಿದೆ.

ಇಂಗ್ಲೆಂಡ್ ತಂಡಕ್ಕೆ ಲಂಕಾ ಪ್ರಬಲ ಪೈಪೋಟಿ ಒಡ್ಡುವ ಸಾಮರ್ಥ್ಯ ಹೊಂದಿದೆ. ಸಚಿತ್ರಾ ಸೇನಾನಾಯಕೆ, ರಂಗನಾ ಹೆರತ್, ತಿಲಕರತ್ನೆ ದಿಲ್ಶಾನ್ ಅವರನ್ನೊಳಗೊಂಡ ಲಂಕಾದ ಸ್ಪಿನ್ ವಿಭಾಗದ ಸವಾಲನ್ನು ಎದುರಿಸುವುದು ಸುಲಭವಲ್ಲ. ಐಪಿಎಲ್ನಲ್ಲಿ ಆಡಿರುವ ಮಾಹೇಲ ಜಯವರ್ಧನೆ ಮತ್ತು ಕುಮಾರ ಸಂಗಕ್ಕಾರ ಲಂಕಾ ತಂಡದ ಬ್ಯಾಟಿಂಗ್ ಶಕ್ತಿ. ಆದರೆ, ನಾಯಕ ಎಂಜಲೊ ಮ್ಯಾಥ್ಯುಸ್ ಐಪಿಎಲ್ನಲ್ಲಿ ಕಳಪೆ ಪ್ರದರ್ಶನ ತೋರಿದ್ದರು.
ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ (ಭಾರತೀಯ ಕಾಲಮಾನ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.