ಪುಣೆ: ಹಿರಿಯ ಆಲ್ರೌಂಡರ್ ಜಲಜ್ ಸಕ್ಸೇನಾ ಅವರು 2025–26ನೇ ರಣಜಿ ಋತುವಿಗೆ ಪೂರ್ವಭಾವಿಯಾಗಿ ಶನಿವಾರ ಮಹಾರಾಷ್ಟ್ರ ತಂಡಕ್ಕೆ ಸೇರ್ಪಡೆಯಾದರು. ಅವರು 9 ವರ್ಷಗಳ ಕಾಲ ಕೇರಳ ತಂಡದಲ್ಲಿದ್ದರು.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಇದನ್ನು ಖಚಿತಪಡಿಸಿದೆ. ಬ್ಯಾಟರ್ ಮತ್ತು ಉಪಯುಕ್ತ ಸ್ಪಿನ್ನರ್ ಆಗಿರುವ 38 ವರ್ಷ ವಯಸ್ಸಿನ ಸಕ್ಸೇನಾ ಅವರು 2005–06ರಲ್ಲಿ ಮಧ್ಯಪ್ರದೇಶ ತಂಡಕ್ಕೆ ಆಡುವ ಮೂಲಕ ರಣಜಿಗೆ ಪದಾರ್ಪಣೆ ಮಾಡಿದ್ದರು. 2016–17ರಲ್ಲಿ ಕೇರಳ ತಂಡ ಸೇರ್ಪಡೆಗೊಂಡಿದ್ದರು. 14 ಶತಕ, 34 ಅರ್ಧ ಶತಕ ಸೇರಿದಂತೆ 7,060 ರನ್ ಗಳಿಸಿರುವ ಜಲಜ್ ಸಕ್ಸೇನಾ 484 ವಿಕೆಟ್ ಪಡೆದು ದೇಶಿ ಕ್ರಿಕೆಟ್ನಲ್ಲಿ ಹೆಸರು ಮಾಡಿದ್ದಾರೆ.

ಅವರು ಮಹಾರಾಷ್ಟ್ರ ತಂಡಕ್ಕೆ ಸೇರ್ಪಡೆಗೊಂಡ ಎರಡನೇ ಪ್ರಮುಖ ಆಟಗಾರ. ಈ ಮೊದಲು ಭಾರತ ತಂಡದ ಮಾಜಿ ಬ್ಯಾಟರ್ ಪೃಥ್ವಿ ಶಾ ಅವರು ಮುಂಬೈನಿಂದ ಮಹಾರಾಷ್ಟ್ರ ತಂಡಕ್ಕೆ ಬಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.