ನವದೆಹಲಿ (ಪಿಟಿಐ): ಸೈನಾ ನೆಹ್ವಾಲ್ ಟೋಕಿಯೊದಲ್ಲಿ ನಡೆಯುತ್ತಿರುವ ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಗುರುವಾರ ನಡೆದ ಪಂದ್ಯದಲ್ಲಿ ಭಾರತದ ಆಟಗಾರ್ತಿ 21-17, 21-16 ರಲ್ಲಿ ಸಿಂಗಪುರದ ಮಿಂಗ್ತಿಯಾನ್ ಫು ವಿರುದ್ಧ ಜಯ ಸಾಧಿಸಿದರು. ಇಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿರುವ ಸೈನಾ ಕೇವಲ 33 ನಿಮಿಷಗಳಲ್ಲಿ ಗೆಲುವು ತಮ್ಮದಾಗಿಸಿಕೊಂಡರು. ಶುಕ್ರವಾರ ನಡೆಯುವ ಎಂಟರಘಟ್ಟದ ಪಂದ್ಯದಲ್ಲಿ ಅವರು ಸಿಂಗಪುರದ ಜುವಾನ್ ಗು ವಿರುದ್ಧ ಪೈಪೋಟಿ ನಡೆಸುವರು.

ಆದರೆ ಭಾರತದ ಇತರ ಸ್ಪರ್ಧಿಗಳು ಗುರುವಾರ ನಿರಾಸೆ ಅನುಭವಿಸಿದರು. ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಪಿ. ಕಶ್ಯಪ್ 15-21, 21-6, 18-21 ರಲ್ಲಿ ಆರನೇ ಶ್ರೇಯಾಂಕದ ಜಿನ್ ಚೆನ್ ಕೈಯಲ್ಲಿ ಪರಾಭವಗೊಂಡರು. ಒಂದು ಗಂಟೆ ಆರು ನಿಮಿಷಗಳ ಕಾಲ ನಡೆದ ಸೆಣಸಾಟದ ಬಳಿಕ ಕಶ್ಯಪ್ ಎದುರಾಳಿಗೆ ಶರಣಾದರು.

ಅಜಯ್ ಜಯರಾಮ್ 20-22, 16-21 ರಲ್ಲಿ ಇಂಡೊನೇಷ್ಯದ ಸಿಮೊನ್ ಸಂಟೊಸೊ ಕೈಯಲ್ಲಿ ಸೋಲು ಅನುಭವಿಸಿದರು. ಜಯರಾಮ್ ಬುಧವಾರ ವಿಶ್ವದ ಏಳನೇ ರ್ಯಾಂಕ್ನ ಆಟಗಾರ ತಿಯಾನ್ ಮಿನ್ ನುಯೆನ್ ವಿರುದ್ಧ ಅಚ್ಚರಿಯ ಗೆಲುವು ಪಡೆದಿದ್ದರು.

ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ 9-21, 21-18, 22-24 ರಲ್ಲಿ ಜುಂಗ್ ಯುನ್ ಹಾ ಮತ್ತು ಮಿನ್ ಜುಂಗ್ ಕಿಮ್ ಎದುರು ಸೋಲು ಅನುಭವಿಸಿದರು. ನಿರ್ಣಾಯಕ ಸೆಟ್ನಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆಸಿದರೂ ಭಾರತದ ಜೋಡಿಗೆ ಗೆಲುವು ಲಭಿಸಲಿಲ್ಲ.

ಮಿಶ್ರ ಡಬಲ್ಸ್ ವಿಭಾಗದಲ್ಲಿ ಜ್ವಾಲಾ ಮತ್ತು ವಿ. ದಿಜು ಜೋಡಿ 15-21, 10-21 ರಲ್ಲಿ ಹ್ಯುಂಗ್ ಲಿಂಗ್ ಚೆನ್ ಹಾಗೂ ವೆನ್ ಸಿಂಗ್ ಚೆಂಗ್ ಎದುರು ನಿರಾಸೆ ಅನುಭವಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.