`ಸುಮಾರು ಎಂಬತ್ತು-ತೊಂಬತ್ತು ಸಿನಿಮಾಗಳಲ್ಲಿ ನಟಿಸಿದ್ದೇನೆ. ಅದರಲ್ಲಿ ನಲವತ್ತು ಸಿನಿಮಾಗಳಲ್ಲಿ ಸತ್ತಿದ್ದೇನೆ!' ಸಣ್ಣಗೆ ನಕ್ಕರು ನಟ ಕೊಟ್ರೆ ನಾಗರಾಜ್.

ನಾಗರಾಜ್ ಎಂದರೆ ಹೆಚ್ಚಿನವರಿಗೆ ತಕ್ಷಣಕ್ಕೆ ನೆನಪಾಗಲಾರದು. `ಜೋಗಿ' ಚಿತ್ರದ ಕೊಟ್ರೆ ನಂಜುಂಡ ಎಂದರೆ ಥಟ್ಟನೆ ನೆನಪಾಗುತ್ತಾರೆ. ಅಭಿನಯಿಸಿದ ಮೊದಲ ಚಿತ್ರದಲ್ಲಿ ದೊರೆತ ಪಾತ್ರದ `ಕೊಟ್ರೆ' ಎಂಬ ಹೆಸರು ನಾಗರಾಜ್ ಹೆಸರಿನೊಂದಿಗೆ ವಿಶೇಷಣವಾಗಿ ತಳುಕು ಹಾಕಿಕೊಂಡಿದೆ.

ಬಣ್ಣದ ಲೋಕದಲ್ಲಿ ನಾಗರಾಜ್ ಅವರದ್ದು ಆಲ್ರೌಂಡರ್ ಪಾತ್ರ. ಸುಮಾರು 20 ವರ್ಷಗಳಿಂದ ಕ್ಯಾಮೆರಾ ಹಿಂದಿನ ಚಟುವಟಿಕೆಗಳಲ್ಲಿಯೇ ಹೆಚ್ಚಾಗಿ ತೊಡಗಿಕೊಂಡಿದ್ದ ಅವರು ಬಣ್ಣಹಚ್ಚಿದ್ದು ಎಂಟು ವರ್ಷಗಳ ಹಿಂದೆ. ಚೊಚ್ಚಲ ಚಿತ್ರ `ಜೋಗಿ'ಯಿಂದ ಇಲ್ಲಿಯವರೆಗೆ ದೊರೆತದ್ದೆಲ್ಲವೂ ಖಳನಾಯಕನ ಪಾತ್ರಗಳೇ. `ಹೀರೋ ಅಥವಾ ವಿಲನ್ನ ಪ್ರವೇಶದ ದೃಶ್ಯವೆಂದಾಕ್ಷಣ ಚಿತ್ರರಂಗಕ್ಕೆ ನಾನು ನೆನಪಾಗುತ್ತೇನೆ. ಹೆಚ್ಚಿನ ಸಿನಿಮಾಗಳಲ್ಲಿ ನಾಯಕ ಪ್ರವೇಶ ಕೊಡುವ ಸನ್ನಿವೇಶ ಶುರುವಾಗುವುದೇ ನನ್ನನ್ನು ಸಾಯಿಸುವುದರ ಮೂಲಕ' ಎನ್ನುತ್ತಾರೆ ನಾಗರಾಜ್.

ನಾಗರಾಜ್ ಅವರ ಮೂಲ ಊರು ಕುಂದಾಪುರ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಬಿ.ಕಾಂ ಪದವೀಧರರಾದ ಇವರಿಗೆ ಬಾಲ್ಯದಿಂದಲೂ ನಾಟಕದ ಗೀಳು. ಅಭಿನಯಕ್ಕಿಂತ ತೆರೆ ಹಿಂದಿನ ಕೆಲಸಗಳಲ್ಲಿ ಆಸಕ್ತಿ. ದೂರದರ್ಶನಕ್ಕೆ ಅನೇಕ ಧಾರಾವಾಹಿಗಳನ್ನು ನಿರ್ದೇಶಿಸಿಕೊಟ್ಟರು. ಮಾತೃಭಾಷೆಯಾದ ಕೊಂಕಣಿಯಲ್ಲಿ ನಿರ್ಮಿಸಿ, ನಿರ್ದೇಶಿಸಿದ `ಚೋರ್ ಐತೊ ಚೋರ್' ಮೊದಲ ಧಾರಾವಾಹಿ. ಕೊಡವ ಮತ್ತು ತುಳು ಭಾಷೆ ಬಲ್ಲ ಸ್ನೇಹಿತರ ನೆರವಿನಿಂದ ಆ ಭಾಷೆಗಳಲ್ಲಿಯೂ ಧಾರಾವಾಹಿಗಳನ್ನು ನಿರ್ಮಿಸಿದರು. ಆಲೆಮನೆ ಸುಂದರಮೂರ್ತಿ ಅವರ ಬಳಿ ಪ್ರಸಾಧನದ ತರಬೇತಿಯೂ ಸಿಕ್ಕಿತು. `ವಿರಹ' ಅವರು ನಿರ್ಮಿಸಿ, ನಿರ್ದೇಶಿಸಿದ ಮತ್ತೊಂದು ಧಾರಾವಾಹಿ.

ಕಿರುತೆರೆಯ ಸಖ್ಯ ತೊರೆದು ಬೆಳ್ಳಿತೆರೆಯತ್ತ ಕಾಲಿಟ್ಟ ನಾಗರಾಜ್ ಅಲ್ಲಿಯೂ ಹಲವು ವರ್ಷ ನಿರ್ಮಾಣ ಮತ್ತು ನಿರ್ದೇಶನದ ವಿವಿಧ ವಿಭಾಗಗಳಲ್ಲಿ ದುಡಿದರು. ವಿವಿಧ ನಿರ್ದೇಶಕರ ಜೊತೆ ಸಹ ನಿರ್ದೇಶಕರಾಗಿ, ಕತೆ, ಚಿತ್ರಕತೆ, ಸಂಭಾಷಣೆ ಹೆಣೆಯುವ ಕಾರ್ಯದಲ್ಲಿಯೂ ತೊಡಗಿಕೊಂಡರು. ಈ ಅನುಭವವೇ ಆ್ಯಕ್ಷನ್ ಕಟ್ ಹೇಳುವ ಅವಕಾಶವನ್ನೂ ನೀಡಿತು. ಬಳ್ಳಾರಿ ಮೂಲದ ನಟರಾಜ್ ಎಂಬುವವರು ಬಂಡವಾಳ ಹೂಡಿ, ಸ್ವತಃ ನಾಯಕರಾಗಿ ನಟಿಸಿದ ಮೂರು ಚಿತ್ರಗಳನ್ನು ನಾಗರಾಜ್ ನಿರ್ದೇಶಿಸಿದ್ದರು. ಆದರೆ ಆ ಮೂರೂ ಚಿತ್ರಗಳು ಬಳ್ಳಾರಿಯಲ್ಲಿ ಮಾತ್ರ ಬಿಡುಗಡೆಯಾಗುವ ಭಾಗ್ಯ ಕಂಡವು ಎನ್ನುತ್ತಾರೆ ನಾಗರಾಜ್.

ನಾಗರಾಜ್ ವೃತ್ತಿಯಲ್ಲಿ ಗುತ್ತಿಗೆದಾರ. ಅಭಿನಯ ಪ್ರವೃತ್ತಿ. ಮಾತ್ರವಲ್ಲ, ರಾಜಕೀಯದಲ್ಲೂ ಒಂದು ಕೈ ನೋಡಿದವರು. ಎರಡು ಬಾರಿ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಕೈಸುಟ್ಟುಕೊಂಡವರು ಈಗ ರಾಜಕೀಯದಿಂದ ದೂರ. ರಾಜಕೀಯಕ್ಕಿಂತ ಸಿನಿಮಾ ರಂಗವೇ ಚೆಂದ ಎನ್ನುವ ಅಭಿಪ್ರಾಯ ಅವರದು. ಅಭಿನಯಿಸಿದ ಎಲ್ಲಾ ಪಾತ್ರಗಳೂ ನೆಗೆಟಿವ್ ಛಾಯೆಯದ್ದು.

ಖಳನಾಯಕನಾಗುವುದರಲ್ಲೂ ಖುಷಿಯಿದೆ ಎನ್ನುವ ನಾಗರಾಜ್, ಚಿತ್ರರಂಗ ಖಳನಾಯಕ ಪಾತ್ರಧಾರಿಗಳನ್ನು ಉಪೇಕ್ಷಿಸುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ. ಖಳನಾಯಕರ ಪಾತ್ರವನ್ನು ಸಮರ್ಥವಾಗಿ ಪೋಷಿಸಬಲ್ಲ ಪ್ರತಿಭಾವಂತ ಕಲಾವಿದರು ಕನ್ನಡದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ಪರಭಾಷಿಗರಿಗೆ ಮಣೆ ಹಾಕಲಾಗುತ್ತಿದೆ. ಇಲ್ಲಿನ ನಟರಿಗಿಂತ ನೆರೆರಾಜ್ಯದ ಕಲಾವಿದರು ಪ್ರತಿಭಾವಂತರು ಎಂದಲ್ಲ. ಚಿತ್ರವನ್ನು ಬೇರೆ ಭಾಷೆಗೆ ಡಬ್ ಮಾಡಲು ಅನುಕೂಲವಾಗುತ್ತದೆ ಎಂಬುದು ಇದರ ಹಿಂದಿರುವ ಉದ್ದೇಶ ಎನ್ನುವುದು ಅವರು ಕಂಡುಕೊಂಡಿರುವ ಸತ್ಯ.

ಕ್ಯಾಮೆರಾ ಕಣ್ಣಿನ ಎದುರು ನಿಲ್ಲುವ ಕೆಲಸ ಖುಷಿ ನೀಡಿದ್ದರೂ ಅವರ ಗುರಿ ನಿರ್ದೇಶನ. ಏಳೆಂಟು ಕತೆಗಳನ್ನು ಹೆಣೆದಿರುವ ನಾಗರಾಜ್, ಒಂದು ಕತೆಯನ್ನು ಸಂಪೂರ್ಣ ಸಿದ್ಧಪಡಿಸಿಕೊಂಡಿದ್ದಾರೆ. ಶಿವರಾಜ್ಕುಮಾರ್ ತಮ್ಮ ಚಿತ್ರದ ನಾಯಕರಾಗಬೇಕು ಎಂಬ ಬಯಕೆ ಅವರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.