ಶನಿವಾರ, ಫೆಬ್ರವರಿ 27, 2021
31 °C
ಸುವರ್ಣಾವತಿ ನದಿ ದಡದ ಜಮೀನು ಮಾಲೀಕರಿಗೆ ತಲೆನೋವು

ಖಾಸಗಿ ಜಮೀನಿಗೆ ‘ಮರಳು’ಗಳ್ಳರ ಕಾಟ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಾಸಗಿ ಜಮೀನಿಗೆ ‘ಮರಳು’ಗಳ್ಳರ ಕಾಟ!

ಯಳಂದೂರು: ತಾಲ್ಲೂಕಿನ ಸುವರ್ಣಾವತಿ ನದಿ ದಡದಲ್ಲಿರುವ ಜಮೀನುಗಳಲ್ಲಿ ಕೆಲವು ತಿಂಗಳುಗಳಿಂದ ಮರಳುಗಳ್ಳರ ಕಾಟ ಶುರುವಾಗಿದ್ದು, ಜಮೀನು ಮಾಲೀಕರಿಗೆ ಇವರನ್ನು ಕಾಯುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.ಪಟ್ಟಣ ಸೇರಿದಂತೆ ಸುವರ್ಣಾವತಿ ನದಿ ಹಾದುಹೋಗಿರುವ ಅಂಬಳೆ, ಯರಿಯೂರು, ಮದ್ದೂರು, ಆಲ್ಕೆರೆ ಅಗ್ರಹಾರ, ಅಗರ–ಮಾಂಬಳ್ಳಿ ಗ್ರಾಮಗ ಳಲ್ಲಿನ ನದಿ ಪಾತ್ರದಲ್ಲಿರುವ ಜಮೀನುಗ ಳಲ್ಲಿ ಮರಳುಗಳ್ಳರ ಹಾವಳಿ ಹೆಚ್ಚಾಗಿದೆ ಎಂಬುದು ನದಿದಡದ ಅಕ್ಕಪಕ್ಕದಲ್ಲಿ ರುವ ಜಮೀನಿನ ಮಾಲೀಕರ ದೂರು.ಮರಳಿಗೆ ಬೇಡಿಕೆ ಹೆಚ್ಚಾಗಿರುವ ಕಾರಣ ರಾತ್ರೋರಾತ್ರಿ ಮರಳುಗಳ್ಳರು ಬ್ಯಾಟರಿ ಹಿಡಿದುಕೊಂಡು ದೊಡ್ಡದೊಡ್ಡ ಹಳ್ಳಗಳನ್ನು ತೋಡಿ ಮರಳನ್ನು ಪ್ಲಾಸ್ಟಿಕ್‌ ಚೀಲಗಳಲ್ಲಿ ತುಂಬಿಸಿ ಇಲ್ಲಿಂದ ಸಾಗಿಸು ತ್ತಾರೆ. ಪಟ್ಟಣದ ಸುವರ್ಣಾವತಿ ನದಿಯ ಸೇತುವೆ ಪಕ್ಕದಲ್ಲಿನ ಜಮೀನುಗಳಲ್ಲಿ ಈ ಅಕ್ರಮಗಳು ನಡೆಯುತ್ತಿವೆ. ನದಿ ಪಕ್ಕದಲ್ಲಿ ವಾಸದ ಮನೆಗಳೂ ಇವೆ. ಒಂದು  ವೇಳೆ ಅವರು ಜನರನ್ನು ಕಂಡರೆ ಪರಾರಿಯಾಗುತ್ತಾರೆ. ಈ ಬಗ್ಗೆ ತಹಶೀಲ್ದಾರ್ ಅವರಿಗೆ ದೂರು ಸಲ್ಲಿಸಿದ್ದರೂ ಕ್ರಮಕೈಗೊಂಡಿಲ್ಲ ಎಂಬುದು ಇಲ್ಲಿನ ಸಂತೋಷ್‌, ಮಂಜು ಸೇರಿದಂತೆ ಹಲವರ ದೂರಾಗಿದೆ.ಜಮೀನಿನಲ್ಲಿ ಮರಳುಗಾರಿಕೆ ಮಾಡುವುದರಿಂದ ಅಲ್ಲಲ್ಲಿ ಭೂಕುಸಿತ ವಾಗುತ್ತದೆ. ವ್ಯವಸಾಯಕ್ಕೆ ತೊಂದರೆ ಯಾಗುತ್ತದೆ. ಅಲ್ಲದೆ ನದಿದಡದಲ್ಲೂ ಗಣಿಗಾರಿಕೆ ಅವ್ಯಾಹತವಾಗಿ ನಡೆದಿರು ವುದರಿಂದ ಅಲ್ಲಲ್ಲಿ ದೊಡ್ಡದೊಡ್ಡ ಹಳ್ಳಗಳಾಗಿ ಜಮೀನುಗಳಿಗೆ ತೆರಳುವ ರಸ್ತೆ ಮುಚ್ಚಿಹೋಗಿದೆ. ಸಾಮಾನ್ಯವಾಗಿ ನದಿಯ ದಡದಲ್ಲಿ ತೆಂಗಿನ ತೋಟಗಳೇ ಅಧಿಕವಾಗಿದೆ. ಭೂಕುಸಿತದಿಂದ ಹತ್ತಾರು ವರ್ಷ ಹಳೆಯ ತೆಂಗಿನ ಮರಗಳು ಧರೆಗುರುಳುವ ಅಪಾಯ ವಿದೆ. ಮಳೆ ಬಂದರೆ ಸಡಿಲಗೊಂಡಿರುವ ಮಣ್ಣುದಿಣ್ಣೆಗಳು ಉರುಳುವುದ ರಿಂದಲೂ ಅನೇಕ ತೊಂದರೆಗಳಾಗು ತ್ತವೆ. ಹಾಗಾಗಿ ಇಲ್ಲಿ ವ್ಯವಸಾಯ ಮಾಡಲು  ರೈತರಿಗೆ ತೊಂದರೆಯಾಗಿದೆ ಎಂಬುದು ರೈತರ ದೂರಾಗಿದೆ.ಕ್ರಮಕ್ಕೆ ಸೂಚನೆ: ‘ಅಕ್ರಮವಾಗಿ ಜಮೀ ನುಗಳಲ್ಲಿ ಮರಳುಗಾರಿಕೆ ನಡೆಯುತ್ತಿ ರುವ ಬಗ್ಗೆ ದೂರುಗಳು ಕೇಳಿಬಂದಿವೆ. ಈಗಾಗಲೇ ಸಂಬಂಧಪಟ್ಟ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ದೂರಿನ ಅನ್ವಯ ಮರಳುಗಳ್ಳರ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಮುಂದೆ ಹೀಗೆ ಆಗದಂತೆ ಕ್ರಮ ವಹಿಸಲಾಗುವುದು’ ಎಂದು ಉಪತಹಶೀಲ್ದಾರ್‌ ವೈ.ಎಂ. ನಂಜಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.