ನಮ್ಮ ನಿಮ್ಮ ಮನೆಗಳಲ್ಲಿ ಮುಂಜಾನೆ ಹಬೆಯಾಡುತ್ತ ಸವಿ ರುಚಿ ಕೊಡುವ ‘ಕಾಫಿ’ ರಾಷ್ಟ್ರದ ರಾಜಧಾನಿ ನವದೆಹಲಿಯ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಈ ವರ್ಷ ಪ್ರಸ್ತುತಗೊಳ್ಳಲಿದೆ.

ಅರಬ್ ರಾಷ್ಟ್ರಗಳಲ್ಲಿ ಬೆಳೆಯುತ್ತಿದ್ದ ಕಾಫಿ ಭಾರತದಲ್ಲಿ ಮೊದಲಿಗೆ ಬೆಳೆದದ್ದು ಕನ್ನಡ ನೆಲದಲ್ಲಿ. ಜಾಗತಿಕ ಕಾಫಿ ವಹಿವಾಟು ನಡೆಸುವ ಕಾಫಿ ಬೋರ್ಡ್ ಕೇಂದ್ರ ಕಚೇರಿ ಇರುವುದು ನಮ್ಮ ನಗರದಲ್ಲಿಯೇ. ಭಾರತದಲ್ಲಿ ಅತಿ ಹೆಚ್ಚು ಕಾಫಿ ಉತ್ಪಾದಿಸುವ ರಾಜ್ಯವೂ ಕರ್ನಾಟಕವೇ. ಇವೆಲ್ಲವುಗಳ ಹಿನ್ನೆಲೆಯಲ್ಲೇ ಗಣರಾಜ್ಯೋತ್ಸವ ಸ್ತಬ್ಧ ಚಿತ್ರ ಪೆರೇಡ್ನಲ್ಲಿ ಈ ಬಾರಿ ಕಾಫಿ ಸ್ತಬ್ಧ ಚಿತ್ರಕ್ಕೆ ಸ್ಥಾನ.

ಆಧುನಿಕ ಜೀವನ ಕ್ರಮದ ಅವಿಭಾಜ್ಯ ಅಂಗವಾಗಿ ಹೋಗಿರುವ ‘ಕಾಫಿ’ ಕರ್ನಾಟಕದ ಬೆಟ್ಟಗಳಲ್ಲಿ ಬೆಳೆದು ಬಟ್ಟಲು ತಲುಪುತ್ತಿರುವ ಎಲ್ಲಾ ಹಂತಗಳನ್ನು ಸೊಗಸಾಗಿ ನಿರೂಪಿಸಿರುವ ಕೃತಿ ‘ಬೆಟ್ಟದಿಂದ ಬಟ್ಟಲಿಗೆ’ ಕೃತಿಯ ಕರ್ತೃ ಹೆಸರಾಂತ ಬರಹಗಾರ ಡಾ. ಎಚ್. ಎಲ್. ನಾಗೇಗೌಡರ ಜನ್ಮ ಶತಮಾನ ವರ್ಷವೂ ಆಗಿರುವ ಈ ವರ್ಷವೇ ‘ರಾಜಪಥ’ದಲ್ಲಿ ‘ಕಾಫಿ’ ಮೆರವಣಿಗೆ ಹೊರಟಿರುವ ಔಚಿತ್ಯವೂ ಹೌದು.

ಕರ್ನಾಟಕದ ವಸ್ತು ವೈವಿಧ್ಯಗಳನ್ನು ರಾಷ್ಟ್ರೀಯ ಹಬ್ಬ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಪರವಾಗಿ ಅನಾವರಣಗೊಳಿಸುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಳೆದ ಮೂರೂವರೆ ದಶಕಗಳಿಂದ ಎಡಬಿಡದೆ ಪ್ರಸ್ತುತಿಗೊಳಿಸುತ್ತಿದ್ದು ರಾಷ್ಟ್ರಮಟ್ಟದಲ್ಲಿ ಅನೇಕ ಪ್ರಶಸ್ತಿ ಗೌರವಗಳಿಗೆ ಪಾತ್ರವಾಗಿದೆ.

ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಹೆಚ್ಚಾಗಿ ಬೆಳೆಯುವ ಕಾಫಿ ರೈತರಿಗೆ ಕೊಂಚ ಆರ್ಥಿಕ ಚೈತನ್ಯ ತಂದುಕೊಟ್ಟಿದೆ. ರಾಷ್ಟ್ರದ ಕಾಫಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ನಮ್ಮ ರಾಜ್ಯದ ಕಾಫಿ ಬೆಳೆ ವೈವಿಧ್ಯವನ್ನು ‘ಗಣರಾಜ್ಯೋತ್ಸವ’ದಲ್ಲಿ ಪ್ರಸ್ತುತಪಡಿಸುವ ಯೋಚನೆಯನ್ನು ಆರೇಳು ವರ್ಷಗಳಿಂದ ಮಾಡುತ್ತಿದ್ದು, ವಾರ್ತಾ ಇಲಾಖೆ ನಿರ್ದೇಶಕ ಎನ್. ಆರ್. ವಿಶುಕುಮಾರ್ ಕಳೆದ ನಾಲ್ಕು ವರ್ಷಗಳಿಂದ ಇದರ ಬೆನ್ನುಬಿದ್ದಿದ್ದರು. ಹೀಗಾಗಿ ಕಾಫಿ ವಿಷಯ ನಿರಂತರವಾಗಿ ಗಣರಾಜ್ಯೋತ್ಸವ ಸ್ತಬ್ಧಚಿತ್ರ ಪಟ್ಟಿಯಲ್ಲಿ ಇರುತ್ತಲೇ ಇತ್ತು. ಘಮಘಮ ಸುವಾಸನೆಯಿಂದ ಮೂಗಿನೊಂದಿಗೆ ನಾಲಿಗೆಗೂ ರುಚಿಕೊಡುವ ಕಾಫಿ ಬೆಳೆಯುವ ವಿಧಾನವೂ ವೈವಿಧ್ಯಮಯ.

ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಮನ್ನಣೆ ಪಡೆದುಕೊಂಡಿರುವ ‘ಕಾಫಿ’ ಕುರಿತು ಪ್ರಸಿದ್ಧ ಕಲಾವಿದ ಶಶಿಧರ ಅಡಪ ಸಿದ್ಧಪಡಿಸಿದ ‘ಶೀಮಾಡಲ್’ (ಕಿರುಮಾದರಿ) ಕೂಡ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ಆಯ್ಕೆ ಸಮಿತಿಗೆ ಮೆಚ್ಚುಗೆಯಾಯಿತು.
ಗಣರಾಜ್ಯೋತ್ಸವ ಪರೇಡ್ನಲ್ಲಿ ಈ ವರ್ಷ ಅನೇಕ ಬದಲಾವಣೆಗಳ ನಿರೀಕ್ಷೆ ಇದ್ದಿದ್ದರಿಂದ ತಯಾರಿಗೆ ಸಿಕ್ಕಿದ್ದು ಬಹಳ ಕಡಿಮೆ ಸಮಯ. ಆದ್ದರಿಂದ ಸ್ತಬ್ಧಚಿತ್ರದ ಪ್ರಮುಖ ಕೆಲಸಗಳೆಲ್ಲ ಬೆಂಗಳೂರಿನಲ್ಲಿಯೇ ನಡೆದಿದ್ದು. ಇದಕ್ಕಾಗಿ ಇಪ್ಪತ್ತೈದು ಮಂದಿ ನುರಿತ ಕುಶಲ ಕರ್ಮಿಗಳು ಶ್ರಮಿಸಿದರು. ‘ಪ್ರತಿರೂಪಿ’ ಸಂಸ್ಥೆ ನೇತೃತ್ವದಲ್ಲಿ ನಡೆದ ಮೊದಲ ಹಂತದ ಕಾರ್ಯ ಮುಗಿದಿದ್ದು , ಇದೀಗ ಅಂತಿಮ ಕಾರ್ಯಾಚರಣೆ ದೆಹಲಿಯಲ್ಲಿ ನಡೆಯುತ್ತಿದೆ.

ವಿಶಿಷ್ಟ ಸಂಸ್ಕೃತಿಯನ್ನ ತನ್ನಲ್ಲಿಟ್ಟುಕೊಂಡ ಕೊಡಗು, ಕಾಫಿ ಬೆಳೆಯಲ್ಲೂ ನೀಡುತ್ತಿರುವ ಕೊಡುಗೆ ವಿಶಿಷ್ಟವಾದದ್ದು. ದೇಶದ ಕಾಫಿ ಉತ್ಪಾದನೆಯಲ್ಲಿಯೂ ಪುಟ್ಟ ಕೊಡಗು ಮುಂದು. ಹೀಗಾಗಿ ಕೊಡಗು ಕಾಫಿ ಸಂಸ್ಕೃತಿಯ ವೈವಿಧ್ಯವನ್ನು ಸ್ಥಬ್ಧಚಿತ್ರ ಒಳಗೊಳ್ಳಲಿದೆ ಎನ್ನುತ್ತಾರೆ ನಿರ್ದೇಶಕ ಎನ್. ಆರ್. ವಿಶುಕುಮಾರ್.

ಕಾಫಿ ಕಥೆಯನ್ನು ದೇಶವಾಸಿಗಳಿಗೆ ಹೇಳುವ ಈ ಅವಕಾಶವನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳಲು ಕಾಫಿ ಗಿಡದಿಂದ ಬೀಜವಾಗುವವರೆಗಿನ ಪ್ರತಿ ಹಂತವನ್ನು ಆಕರ್ಷಕವಾಗಿ ರೂಪಿಸಲಾಗಿದ್ದು, ಅಂದು ಹಬೆಯಾಡುವ ಕಾಫಿ ಸ್ಟೀಲ್ ಪಾತ್ರೆಗಳ ಜೊತೆಗೆ ಸ್ತಬ್ಧಚಿತ್ರ ರಾಜಪಥದಲ್ಲಿ ಸಂಚರಿಸಲು ಸಜ್ಜಾಗಿದೆ.

ಸಾಂಪ್ರದಾಯಿಕ ಕಾಫಿ ಬೆಳೆಯುವುದರ ಸಂಗತಿಗಳೊಂದಿಗೆ ಆಧುನಿಕ ತಂತ್ರಜ್ಞಾನದ ಬಳಕೆಯಿಂದ ‘ಕಾಫಿ’ ಜನತೆಗೆ ತಲುಪುತ್ತಿರುವ ಬಗೆಯನ್ನು ಸ್ತಬ್ಧಚಿತ್ರದ ಎರಡೂ ಬದಿಗಳಲ್ಲಿ ಪ್ರತಿಬಿಂಬಿಸುವ ಪ್ರಾತ್ಯಕ್ಷಿಕೆಗಳು ಈ ಬಾರಿಯ ವಿಶೇಷ. ಕೊಡವರ ವೇಷಭೂಷಣಗಳೂ ಆಕರ್ಷಕ. ಕಾಫಿ ಕೀಳುವ ಕಾರ್ಮಿಕರ ಪ್ರತಿಕೃತಿ ಸ್ತಬ್ಧಚಿತ್ರದಲ್ಲಿ ಮಿಳಿತವಾಗಿದ್ದರೆ, ಸಾಂಪ್ರದಾಯಿಕ ಬಣ್ಣ ಬಣ್ಣದ ದಿರುಸುಗಳೊಂದಿಗೆ ಕೊಡವ ದಂಪತಿಗಳು ‘ಕಾಫಿ’ ಸ್ಥಬ್ಧಚಿತ್ರದೊಂದಿಗೆ ಹೆಜ್ಜೆ ಹಾಕಲಿದ್ದಾರೆ. ಇದಕ್ಕಾಗಿ ಕೊಡವ ಸಾಹಿತ್ಯ ಅಕಾಡೆಮಿಯ ಕಾರ್ಯಪ್ಪ ಹಾಗೂ ದೆಹಲಿಯ ಕೊಡವ ಸಮಾಜದ ಪದಾಧಿಕಾರಿಗಳು ಕಲಾವಿದರ ಆಯ್ಕೆ ಹಾಗೂ ತಾಲೀಮಿನಲ್ಲಿ ಸಕ್ರಿಯರಾಗಿದ್ದಾರೆ.

ಪ್ರಸಿದ್ಧ ಸ್ವರ ಸಂಯೋಜಕ ಪ್ರವೀಣ್ ಡಿ. ರಾವ್ ಕಾಫಿ ಕಥೆ ಸ್ಥಬ್ಧಚಿತ್ರಕ್ಕೆ ಸುಶ್ರಾವ್ಯ ಸಂಗೀತ ನೇಯ್ದುಕೊಟ್ಟಿದ್ದು, ಹಬೆಯಾಡುವ ಕಾಫಿಗೆ ಇದು ಸಾಥ್ ಕೊಡುತ್ತದೆ ಎನ್ನುವ ಅಭಿಪ್ರಾಯ ಕಲಾವಿದ ಶಶಿಧರ ಅಡಪ ಅವರದು. ಗಣರಾಜ್ಯೋತ್ಸವ ಪರೇಡ್ ಅವಧಿಯನ್ನು ತಗ್ಗಿಸಲಾಗಿದೆ. ದೇಶದ ವಿವಿಧೆಡೆಗಳಿಂದ ಸುಂದರವಾಗಿ ಸಿದ್ಧಗೊಳ್ಳುವ ಸ್ತಬ್ಧಚಿತ್ರಗಳನ್ನು ಜನತೆ ನೋಡಿ ಆನಂದಿಸುವ ಅವಕಾಶವನ್ನು ಪ್ರಪ್ರಥಮ ಬಾರಿಗೆ ಈ ವರ್ಷ ‘ಭಾರತ ಪರ್ವ’ ಹೆಸರಿನಲ್ಲಿ ಏರ್ಪಡಿಸಿದ್ದು, ಅದು ನಡೆಯಲಿರುವುದು ಐತಿಹಾಸಿಕ ಕೆಂಪುಕೋಟೆಯ ಆವರಣದಲ್ಲಿ.

ಗಣರಾಜ್ಯೋತ್ಸವ ಪಥ ಸಂಚಲನದ ಬಳಿಕ ಕೆಂಪುಕೋಟೆ ಆವರಣದಲ್ಲಿ ಪ್ರದರ್ಶನಗೊಳ್ಳಲಿರುವ ಸ್ತಬ್ಧಚಿತ್ರದೊಂದಿಗೆ ಕರ್ನಾಟಕ ಆಹಾರ, ಕರ್ನಾಟಕ ಜಾನಪದ ಮೇಳ ಕೂಡ ವ್ಯವಸ್ಥೆಯಾಗಿದೆ. ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ. ವಿ. ದಯಾನಂದ, ಜಂಟಿ ನಿರ್ದೇಶಕ ಬಲವಂತ ರಾವ್ ಪಾಟೀಲ್ ಅವರನ್ನೊಳಗೊಂಡ ಸಮಿತಿ ಕೆಂಪುಕೋಟೆಯಲ್ಲಿ ನಾಲ್ಕು ದಿನ ಜರುಗುವ ‘ಭಾರತ ಪರ್ವ’ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲು ಕರಾವಳಿಯ ಯಕ್ಷಗಾನ, ಡೊಳ್ಳು, ವೀರಗಾಸೆ ಹಾಗೂ ಪೂಜಾಕುಣಿತ ತಂಡಗಳನ್ನು ಆಯ್ಕೆ ಮಾಡಿದೆ. ನೂರಕ್ಕೂ ಹೆಚ್ಚು ಕಲಾವಿದರು ಕಾಫಿ ಕಥೆ ಸ್ತಬ್ಧಚಿತ್ರದ ಪ್ರದರ್ಶನದೊಟ್ಟಿಗೆ ಕಲಾಪ್ರದರ್ಶನ ನೀಡಲಿದ್ದಾರೆ.

ಪ್ರವಾಸೋದ್ಯಮ ಇಲಾಖೆಯು ‘ಭಾರತ ಪರ್ವ’ದಲ್ಲಿ ಕರ್ನಾಟಕ ತಿಂಡಿ ತಿನಿಸುಗಳ ಮೇಳದಲ್ಲಿ ಜನಪ್ರಿಯ ಖಾದ್ಯಗಳನ್ನು ಪ್ರದರ್ಶಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.