ಬೆಂಗಳೂರು: ವಹಿವಾಟು ವಿಸ್ತರಿಸಲು ವಿದೇಶಗಳಲ್ಲಿನ ಗಣಿಗಾರಿಕೆ ಉದ್ದಿಮೆ ಸಂಸ್ಥೆಗಳನ್ನು ವಿಲೀನ ಮಾಡಿಕೊಳ್ಳಲು ಮತ್ತು ಸ್ವಾಧೀನಪಡಿಸಿಕೊಳ್ಳಲು ಕುದುರೆಮುಖ ಕಬ್ಬಿಣ ಅದಿರು (ಕೆ ಐಒಸಿಎಲ್) ಸಂಸ್ಥೆ ಮುಂದಾಗಿದೆ.

`ಕೆಐಒಸಿಎಲ್~ನ ವ್ಯವಸ್ಥಾಪಕ ನಿರ್ದೇಶಕ ಕೆ. ರಂಗನಾಥ್ ಅವರು ಸೋಮವಾರ ಇಲ್ಲಿ ಈ ವಿಷಯ ತಿಳಿಸಿದರು.ಪಶ್ಚಿಮ ಆಫ್ರಿಕಾದಲ್ಲಿ ಕಬ್ಬಿಣ ಅದಿರು ನಿಕ್ಷೇಪ ಶೋಧ, ಅಭಿವೃದ್ಧಿ ಮತ್ತು ಗಣಿಗಾರಿಕೆ ಚಟುವಟಿಕೆಗೆ ನೆರವಾಗಲು ಲಂಡನ್ ಮೂಲದ ಬಂಡವಾಳ ಹೂಡಿಕೆ ಸಂಸ್ಥೆ ಮೆಸರ್ಸ್ ಕರ್ವ್ ಕ್ಯಾಪಿಟಲ್ ವೆಂಚರ್ಸ ಲಿಮಿಟೆಡ್ (ಕರ್ವ್ ಕ್ಯಾಪ್) ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.

`ಕರ್ವ್ ಕ್ಯಾಪ್~ ಸಂಸ್ಥೆಯು ಆಫ್ರಿಕಾ ಮತ್ತು ವಿಶ್ವದ ಇತರ ಭಾಗಗಳಲ್ಲಿ ಗಣಿಗಾರಿಕೆ ಮತ್ತು ಇತರ ನೈಸರ್ಗಿಕ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸಿ ನಿರ್ವಹಿಸುವ ವಹಿವಾಟು ನಡೆಸುತ್ತಿದೆ. ಸಂಸ್ಥೆಯ ಯೋಜನೆಗಳಲ್ಲಿ `ಕೆಐಒಸಿಎಲ್~ ಪಾಲುದಾರಿಕೆಗೆ ಅವಕಾಶ ಮಾಡಿಕೊಡಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.