ಮಂಗಳವಾರ, ಮೇ 18, 2021
24 °C

ಗಮನ ಬೇರೆಡೆ ಸೆಳೆದು ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶ್ರೀಲಂಕಾ ಮೂಲದ ದಂಪತಿಯ ಗಮನ ಬೇರೆಡೆ ಸೆಳೆದು 400 ಡಾಲರ್‌ಗಳು ಹಾಗೂ ಪಾಸ್‌ಪೋರ್ಟ್ ದೋಚಿರುವ ಘಟನೆ ಕಲಾಸಿಪಾಳ್ಯದಲ್ಲಿ ಶನಿವಾರ ನಡೆದಿದೆ.ಈ ಸಂಬಂಧ ಶ್ರೀಲಂಕಾ ಮೂಲದ ತಿಷೇರ ಎಂಬುವರು ದೂರು ಕೊಟ್ಟಿದ್ದಾರೆ. ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವ ಮಗಳನ್ನು ಭೇಟಿಯಾಗುವ ಉದ್ದೇಶದಿಂದ ಅವರು ಪತ್ನಿಯೊಂದಿಗೆ ಆ.29ರಂದು ರಾಜ್ಯಕ್ಕೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಮಗಳನ್ನು ಭೇಟಿ ಮಾಡಿದ ದಂಪತಿ ವಿಮಾನದಲ್ಲಿ ಶನಿವಾರ (ಸೆ.3) ರಾತ್ರಿ ಶ್ರೀಲಂಕಾಕ್ಕೆ ಹೋಗಬೇಕಿತ್ತು. ಈ ಹಿನ್ನೆಲೆಯಲ್ಲಿ ಅವರು ಶುಕ್ರವಾರ ರಾತ್ರಿಯೇ ಮಂಗಳೂರಿನಿಂದ ನಗರಕ್ಕೆ ಬಂದು ಕಲಾಸಿಪಾಳ್ಯ ಮುಖ್ಯರಸ್ತೆಯ ವಸತಿಗೃಹವೊಂದರಲ್ಲಿ ಉಳಿದುಕೊಂಡಿದ್ದರು. ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ವಸತಿಗೃಹದಿಂದ ಹೊರ ಬಂದ ದಂಪತಿ ಕಲಾಸಿಪಾಳ್ಯ ಮುಖ್ಯರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ದುಷ್ಕರ್ಮಿಯೊಬ್ಬ ಅವರನ್ನು ಹಿಂಬಾಲಿಸಿ ಬಂದು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.`ನಿಮ್ಮ ಶರ್ಟ್ ಕೊಳೆಯಾಗಿದೆ~ ಎಂದು ತಿಷೇರ ಅವರಿಗೆ ಹೇಳಿದ ದುಷ್ಕರ್ಮಿ, ಶರ್ಟ್ ತೊಳೆದುಕೊಳ್ಳಲು ಬಾಟಲಿಯಲ್ಲಿ ನೀರನ್ನು ಸಹ ಕೊಟ್ಟಿದ್ದಾನೆ. ತಿಷೇರ ಅವರು ಕೈನಲ್ಲಿ ಹಿಡಿದುಕೊಂಡಿದ್ದ ಪಾಸ್‌ಪೋರ್ಟ್ ಮತ್ತು ಡಾಲರ್‌ಗಳಿದ್ದ ಬ್ಯಾಗ್ ಅನ್ನು ಪಾದಚಾರಿ ಮಾರ್ಗದಲ್ಲಿಟ್ಟು ಶರ್ಟ್ ತೊಳೆದುಕೊಳ್ಳಲು ಪಕ್ಕಕ್ಕೆ ಹೋದರು.

ಅವರ ಪತ್ನಿ ನೆರವು ನೀಡಲು ಮುಂದಾದರು. ಈ ಸಂದರ್ಭದಲ್ಲಿ ಕಿಡಿಗೇಡಿ ಪಾಸ್‌ಪೋರ್ಟ್ ಮತ್ತು ಡಾಲರ್‌ಗಳಿದ್ದ ಬ್ಯಾಗ್ ತೆಗೆದುಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಲಾಸಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.