ಶುಕ್ರವಾರ, ಜನವರಿ 17, 2020
22 °C

ಗುಡಿಬಂಡೆ: 23ರಿಂದ ಸಾಹಿತ್ಯ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಡಿಬಂಡೆ: ಗಡಿನಾಡು ಪ್ರದೇಶ ಗುಡಿಬಂಡೆಯಲ್ಲಿ ಇದೇ ಮೊದಲ ಬಾರಿಗೆ  ಜ.23ರಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ತಾಲ್ಲೂಕು ಆಡಳಿತ ವತಿಯಿಂದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.

ಹಿರಿಯ ವಿದ್ವಾಂಸ ಕಸ್ತೂರಿ ಜಗನ್ನಾಥ್ ಅವರನ್ನು ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಗುರುವಾರ ಸಾಹಿತ್ಯ ಪರಿಷತ್ ವತಿ ಯಿಂದ ಅಧಿಕೃತ ಆಹ್ವಾನ ನೀಡ ಲಾಯಿತು.

 ರಂಗಚೇತನ ಜಿ.ಬಿ.ಶೆಟ್ಟಪ್ಪ,ಗಮಕ ಕೋವಿದ ಗುಡಿಬಂಡೆ ರಾಮಾಚಾರ್ ಮಹಾದ್ವಾರ ನಿರ್ಮಿಸಲಾಗಿದೆ.ವಿವಿಧ ಕಲಾ ಪ್ರಕಾರಗಳು, ಸ್ತಬ್ಧ ಚಿತ್ರಗಳು, ವೇಷ ಭೂಷಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಡೊಳ್ಳು ಕುಣಿತ, ವೀರಗಾಸೆ , ಲಂಬಾಣಿ ನೃತ್ಯ ತಂಡ, ಚೆಕ್ಕೆ ಭಜನೆ, ಕೋಲಾಟ, ತಮಟೆ, ನಾದಸ್ವರ, ಬೊಂಬೆಯಾಟ ಸಮ್ಮೇಳನದಲ್ಲಿ ನಡೆಯಲಿದೆ.  ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ಊಟದ ಸಂದರ್ಭದಲ್ಲಿ ಮಸಾಲೆ ಮಜ್ಜಿಗೆ ಪ್ಯಾಕೆಟ್ ವಿತರಿಸಲಾಗುತ್ತದೆ.

ಪ್ರತಿಕ್ರಿಯಿಸಿ (+)