ಗೌರಿಬಿದನೂರು: ಪಟ್ಟಣದ ಹೊರವಲಯದ ಕಲ್ಲೂಡಿ ಗ್ರಾಮದಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಕುಟುಂಬಗಳಿದ್ದು, ಬಹುತೇಕ ಕುಟುಂಬಗಳು ಹಪ್ಪಳ ತಯಾರಿಸಿ, ಮಾರಾಟ ಮಾಡುವುದನ್ನು ಕಾಯಕವಾಗಿಸಿಕೊಂಡಿವೆ. ನಿತ್ಯ ಹಪ್ಪಳ, ಸಂಡಿಗೆ, ಪೇಣಿ ತಯಾರಿಸುವ ಮೂಲಕ ಜೀವನ ಸಾಗಿಸುತ್ತಿದ್ದಾರೆ.

ಆದರೆ ಹಪ್ಪಳ ತಯಾರಿಕೆಯಲ್ಲಿ ಮಕ್ಕಳು ಸಹ ತೊಡಗಿಕೊಂಡಿರುವುದು ಬಹುತೇಕ ಮಂದಿಗೆ ಆತಂಕ ಉಂಟು ಮಾಡಿದೆ. ಬಾಲ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಪ್ರತಿ ನಿತ್ಯ ಬೆಳಿಗ್ಗೆ 5ರಿಂದ 11ಗಂಟೆವರೆಗೆ ಹಪ್ಪಳ ತಯಾರಿಸುವ ಮಕ್ಕಳು ನಂತರ ಶಾಲೆಗೆ ಹೋಗುತ್ತಾರೆ. ಅಗತ್ಯವಿದ್ದಲ್ಲಿ ಶಾಲೆಗೆ ಹೋಗದ ಕೆಲ ಮಕ್ಕಳು ವಾಹನದಲ್ಲಿ ಬೆಂಗಳೂರು, ಹಿಂದೂಪುರ ಮುಂತಾದ ಕಡೆ ತೆರಳಿ ಹಪ್ಪಳ ಮಾರುತ್ತಾರೆ. ಶಾಲೆಯಿಂದ ದೂರ ಉಳಿದಿರುವ ಮಕ್ಕಳು ಹಪ್ಪಳ ತಯಾರು ಮಾಡುವುದನ್ನೇ ಕಾಯಕವಾಗಿಸಿಕೊಂಡಿದ್ದು, ದುಡಿಮೆ ಹಣದಿಂದಲೇ ಕುಟುಂಬ ಸಾಕಿ ಸಲಹುತ್ತಿದ್ದಾರೆ. ಬಹುತೇಕ ಮಕ್ಕಳು ಬಡ ಕುಟುಂಬಕ್ಕೆ ಸೇರಿದ್ದು, ಹಪ್ಪಳ ತಯಾರಿಕೆಯನ್ನೇ ಅವಲಂಬಿಸಿದ್ದಾರೆ.

`ಕೆಲಸ ಕಾರ್ಯಗಳಿಗೆ ಮಕ್ಕಳನ್ನು ಬಳಸಿಕೊಳ್ಳುವುದು ಕಾನೂನು ಪ್ರಕಾರ ಅಪರಾಧ. ಆದರೆ ಈ ಗ್ರಾಮದಲ್ಲಿ ಹಪ್ಪಳ ತಯಾರಿಸುವ ಕುಟುಂಬದವರು ಮಕ್ಕಳಿಂದಲೇ ಹಪ್ಪಳ ತಯಾರಿಸುತ್ತಾರೆ. ಈ ಕಾರ್ಯ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಬಹುತೇಕ ಮಕ್ಕಳು ಪರಿಶಿಷ್ಟ ಜಾತಿ-ಪಂಗಡಕ್ಕೆ ಸೇರಿದವರಾಗಿದ್ದು, ಬೆಳಿಗ್ಗೆ 7ರಿಂದ 10ಗಂಟೆವರಗೆ 500ರಿಂದ ಸಾವಿರ ಹಪ್ಪಳ ತಯಾರಿಸುತ್ತಾರೆ. 500 ಹಪ್ಪಳ ತಯಾರಿಸಿದರೆ ಮಗುವಿಗೆ 30ರಿಂದ 40 ರೂಪಾಯಿ ನೀಡಲಾಗುತ್ತದೆ. ಕೆಲಸಕ್ಕೆ ಬರುವ ಮಕ್ಕಳು ಬೇರೆಲ್ಲೂ ಹೋಗಬಾರದೆಂದು ಅವರಿಗೆ ಮುಂಗಡವಾಗಿಯೇ 500ರಿಂದ ಸಾವಿರ ರೂಪಾಯಿ ನೀಡುತ್ತಾರೆ~ ಎಂದು ಗ್ರಾಮದ ಮುಖಂಡ ನಾರಾಯಣಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

`ಹಪ್ಪಳ ತಯಾರಿಕೆ ಉದ್ಯಮದಲ್ಲಿ ಕೆಲ ಶಿಕ್ಷಕರು ಕೂಡ ಸೇರಿಕೊಂಡಿದ್ದಾರೆ. ಗೌರವ ಕೊಟ್ಟು ಬರುವ ಮಕ್ಕಳನ್ನು ಹಪ್ಪಳ ತಯಾರಿಸುವ ಕೆಲಸಕ್ಕೆ ಹಚ್ಚುತ್ತಾರೆ. ನೇರವಾಗಿ ಹಣ ಪಡೆದುಕೊಳ್ಳುವ ಕೆಲ ಮಕ್ಕಳು ದುಶ್ಚಟಗಳಿಗೂ ಮೊರೆ ಹೋಗುತ್ತಿದ್ದಾರೆ. ಹೆಚ್ಚಿನ ದುಡಿಮೆ ಆಸೆಯಿಂದ ಶಾಲೆಗೆ ಹೋಗುವುದನ್ನೇ ತಪ್ಪಿಸುತ್ತಿದ್ದಾರೆ~ ಎಂದು ಅವರು ಆತಂಕ ವ್ಯಕ್ತಪಡಿಸಿದರು.

`ರಾಜ್ಯ ಸರ್ಕಾರ ಸಾರ್ವಜನಿಕ ಶಿಕ್ಷಣ ಇಲಾಖೆ ಮೂಲಕ ವಿವಿಧ ಯೋಜನೆ ಜಾರಿಗೆ ತರುತ್ತಿದೆ. `ಪ್ರತಿಯೊಬ್ಬ ಮಗುವಿಗೆ ಉಚಿತ ಶಿಕ್ಷಣ~, `ಶಾಲೆಗಾಗಿ ನಾವು-ನೀವು~ ಸೇರಿದಂತೆ ವಿವಿಧ ಯೋಜನೆ ಜಾರಿಗೆ ತರಲು ಶಿಕ್ಷಣ ಇಲಾಖೆ ಶ್ರಮಿಸುತ್ತಿದೆಯಾದರೂ ಇಲ್ಲಿನ ಮಕ್ಕಳಿಗೆ ಶಿಕ್ಷಣದ ಸೌಲಭ್ಯ ದೊರೆಯುತ್ತಿಲ್ಲ.

ಈ ಕುರಿತು ಶಿಕ್ಷಕರು ಸೇರಿದಂತೆ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕು. ಮಕ್ಕಳಿಗೆ ಉಚಿತ, ಕಡ್ಡಾಯ ಶಿಕ್ಷಣ ದೊರೆಯುವಂತೆ ಮಾಡಬೇಕು.

ಬಾಲ ಕಾರ್ಮಿಕ ಪದ್ಧತಿ ಹೋಗಲಾಡಿಸುವತ್ತ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು~ ಎಂದು ಗ್ರಾಮದ ನಿವಾಸಿ ರೇಣುಕಮ್ಮ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.