ಮಂಗಳವಾರ, ಮೇ 11, 2021
26 °C

ಚರಂಡಿಯಾಗುವ ರಸ್ತೆ: ಜನತೆಯ ಗೋಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಂಭಾವಿ: ಪಟ್ಟಣದಲ್ಲಿ ಸ್ವಲ್ಪ ಮಳೆ ಬಂದರೆ ಸಾಕು, ಇಲ್ಲಿನ ಮುಖ್ಯ ರಸ್ತೆ ಮಳೆ ನೀರಿನಿಂದ ಚರಂಡಿಯಾಗಿ ಪರಿವ ರ್ತನೆ ಆಗುತ್ತದೆ. ಇದರಿಂದ ಪ್ರತಿವರ್ಷ ರಸ್ತೆ ಸಂಪೂರ್ಣ ಹಾಳಾಗುತ್ತಿದ್ದು, ಕೇಳು ವವರೇ ಇಲ್ಲದಂತಾಗಿದೆ.ಮಳೆ ಬಂತೆಂದರೆ ಇಲ್ಲಿ ನೀರಿನ ಪ್ರವಾ ಹವೇ ಬಂದು ಕೆರೆಯಂತೆ ಮಾರ್ಪಾ ಟಾಗುತ್ತದೆ. ಇದರಿಂದ ಜನತೆಗೆ ತೀವ್ರ ತೊಂದರೆಯಾಗಿದ್ದು, ಓಡಾಡಲು ಸ್ಥಳವಿಲ್ಲದೇ ಜನತೆ ಅಸಹಾಯ ಕರಾಗಿದ್ದಾರೆ. ನಿಂತ ಚರಂಡಿ ನೀರು ವಾರಗಟ್ಟಲೆ ಅಲ್ಲಿಯೇ ಶೇಖರಣೆ ಆಗುತ್ತಿದ್ದು, ಇದರಿಂದ ದುರ್ವಾಸನೆ ಬೀರುತ್ತಿದೆ.ಸುತ್ತಲಿನ ವ್ಯಾಪಾರಿಗಳು, ಪಾದಚಾರಿಗಳು ಮೂಗು ಮುಚ್ಚಿ ಕೊಂಡು ಓಡಾಡುವಂತಾಗಿದೆ. ಪ್ರತಿ ಬಾರಿ ಮಳೆ ಬಂದಾಗಲೆಲ್ಲ ಇಲ್ಲಿ ಇದೇ ಸ್ಥಿತಿ ಮುಂದುವರಿಯುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.ಪಟ್ಟಣದ ಮುಖ್ಯ ಮಾರುಕಟ್ಟೆ ಪ್ರದೇಶ ಇದಾಗಿದ್ದು, ಇಲ್ಲಿಯೇ ಅನೇಕ ಅಂಗಡಿ ಮುಂಗಟ್ಟುಗಳು, ದೇವಸ್ಥಾನ ಗಳು, ಕಚೇರಿಗಳಿವೆ.

 

ನಿತ್ಯ ಸಂಚರಿಸುವ ಜನತೆಗೆ ತೊಂದರೆಯಾಗಿದೆ. ಇಲ್ಲಿ ನಿಲ್ಲುವ ಚರಂಟಿ ನೀರಿನಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಜನರಲ್ಲಿ ಭಯ ಮೂಡಿಸಿದೆ. ಶೀಘ್ರ ಚರಂಡಿ ಸ್ವಚ್ಛಗೊಳಿಸಿ, ಈ ತೊಂದರೆ ನಿವಾರಿಸುವಂತೆ ನಾಗರಡ್ಡಿ ಧರಿ ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.