ಶುಕ್ರವಾರ, ಏಪ್ರಿಲ್ 16, 2021
31 °C

ಚಿತ್ರೀಕರಣ ವೇಳೆ ಹೃತಿಕ್‌ಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರೀಕರಣ ವೇಳೆ ಹೃತಿಕ್‌ಗೆ ಗಾಯ

ಮುಂಬೈ, (ಪಿಟಿಐ): ‘ಅಗ್ನಿಪಥ್’ ಚಿತ್ರೀಕರಣದ ಸಂದರ್ಭದಲ್ಲಿ ಬಾಲಿವುಡ್ ನಟ ಹೃತಿಕ್ ರೋಷನ್ ಗಾಯಗೊಂಡಿದ್ದಾರೆ.

ಇಲ್ಲಿನ ವರ್ಸೋವಾದಲ್ಲಿ ತೆಂಗಿನಕಾಯಿಯನ್ನು ನೆಲದ ಮೇಲಿಟ್ಟು ಒಡೆಯುವ ದೃಶ್ಯದ ಚಿತ್ರೀಕರಣ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಘಟನೆಯಲ್ಲಿ ಅವರ ಬೆರಳುಗಳಿಗೆ ಗಾಯವಾಗಿದೆ. ಹೃತಿಕ್ ಕೈಯಿಂದ ರಕ್ತಸ್ರಾವವಾದ ಕಾರಣ ದೃಶ್ಯದ ಚಿತ್ರೀಕರಣವನ್ನು ರದ್ದು ಮಾಡಲಾಯಿತು. ಮೂಲಗಳ ಪ್ರಕಾರ ಹೃತಿಕ್ ಕೈಗೆ ಆಳವಾದ ಗಾಯವಾಗಿದೆ. ರಕ್ತಸ್ರಾವ ಸಹ ಹೆಚ್ಚಾಗಿದ್ದು ಪ್ರಥಮ ಚಿಕಿತ್ಸೆ ನೀಡಲಾಯಿತು.

ಆದರೆ, ಯಾವುದಾದರೂ ನಟನಿಗೆ ಸೆಟ್‌ನಲ್ಲಿ ಗಾಯವಾದರೆ ಮತ್ತು ರಕ್ತ ಸುರಿಸಿದರೆ ಆ ಚಿತ್ರ ಅದ್ಭುತ ಯಶಸ್ಸು ಗಳಿಸುತ್ತದೆ ಎಂದು ನಿರ್ಮಾಪಕ ಕರಣ್ ಜೋಹರ್ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.