ಹುಬ್ಬಳ್ಳಿ: ಕೇಂದ್ರ ಸರ್ಕಾರವು ಚಿನ್ನಾಭರಣಗಳ ಮೇಲಿನ ತೆರಿಗೆ ಏರಿಸಿರುವ ಕ್ರಮ ವಿರೋಧಿಸಿ ಅವಳಿನಗರದಲ್ಲಿ ಸರಾಫ ಸಂಘದ ಸದಸ್ಯರು ನಡೆಸುತ್ತಿರುವ ವ್ಯಾಪಾರ ಬಂದ್ ಚಳವಳಿಯಿಂದ ಪ್ರತಿನಿತ್ಯ ಸರಾಸರಿ 2 ಕೋಟಿ ರೂಪಾಯಿ ನಷ್ಟ ಉಂಟಾಗುತ್ತಿದೆ.

ಹುಬ್ಬಳ್ಳಿ-ಧಾರವಾಡಗಳಲ್ಲಿ ಕಳೆದ 20 ದಿನಗಳಿಂದ ಜುವೆಲ್ಲರಿ ಅಂಗಡಿಗಳು ಬಾಗಿಲು ಮುಚ್ಚಿದ್ದು, ಇದರಿಂದ ಅಂದಾಜು ರೂ 40 ಕೋಟಿಯಷ್ಟು ಹಾನಿಯಾಗಿದೆ. ಉತ್ತರ ಕರ್ನಾಟಕ ಭಾಗದ ಚಿನ್ನದ ವ್ಯಾಪಾರಿಗಳು ಮೂರು ವಾರಗಳಿಂದಲೂ ಅಂಗಡಿ ಬಂದ್ ಮಾಡಿ, ಕೇಂದ್ರದ ಧೋರಣೆ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.

`ಚಿನ್ನದ ಮೇಲಿನ ಆಮದು ಸುಂಕವನ್ನು ಶೇ 2ರಿಂದ 4ಕ್ಕೆ ಏರಿಸಲಾಗಿದೆ. ಈ ಆಮದು ಸುಂಕದ ಜೊತೆ ಶೇ 1ರಷ್ಟು ವ್ಯಾಟ್ ಸೇರಿ 10 ಗ್ರಾಂ ಚಿನ್ನಕ್ಕೆ ಸುಮಾರು ರೂ 1300ರಷ್ಟು ಹೆಚ್ಚಳವಾಗಿದೆ. ಅಂದರೆ ಕೆ.ಜಿ ಬಂಗಾರದ ಮೇಲೆ ರೂ 1.30 ಲಕ್ಷ ತೆರಿಗೆ ನೀಡಬೇಕಾಗುತ್ತದೆ. ಚಿನ್ನಾಭರಣ ಉದ್ಯಮ ಮೊದಲೇ ಸಂಕಷ್ಟದಲ್ಲಿದ್ದು, ಕೇಂದ್ರ ಗಾಯದ ಮೇಲೆ ಬರೆ ಎಳೆದಿದೆ~ ಎಂದು ಹುಬ್ಬಳ್ಳಿ ಸರಾಫರ ಸಂಘದ ಅಧ್ಯಕ್ಷ ಗೋವಿಂದ ನಿರಂಜನ ಹೇಳುತ್ತಾರೆ.

ಕಳೆದ ತಿಂಗಳ 17ರಿಂದ ಚಿನಿವಾರರು ವ್ಯಾಪಾರ ಬಂದ್ ಚಳವಳಿ ನಡೆಸುತ್ತಿದ್ದು, ಯುಗಾದಿ ಸಂದರ್ಭದಲ್ಲಿ ಮಾತ್ರ ಮೂರು ದಿನ ಅಂಗಡಿ ತೆರೆದಿದ್ದರು. ಕೇಂದ್ರ ಬಜೆಟ್ ಮಂಡನೆಯಾದ ಬಳಿಕ 20 ದಿನಗಳಿಂದ ಚಿನಿವಾರ ಪೇಟೆ ಸಂಪೂರ್ಣ ಸ್ತಬ್ಧವಾಗಿದೆ. ಸಂಘದ ಕರೆಗೆ ಓಗೊಟ್ಟು ನಗರದ ಜೊಯಾಲುಕ್ಕಾಸ್, ಮಲಬಾರ್, ತನಿಷ್ಕ್, ಕಲ್ಯಾಣ್ ಸೇರಿದಂತೆ ಎಲ್ಲ ಬ್ರ್ಯಾಂಡೆಡ್ ಮಳಿಗೆಗಳೂ ವಹಿವಾಟು ಬಂದ್ ಮಾಡಿವೆ. ಅಕ್ಕಸಾಲಿಗರಿಗೆ ಯಾವುದೇ ಕೆಲಸವೇ ಇಲ್ಲವಾದರೆ, ಗ್ರಾಹಕರು ಆಭರಣಗಳು ಸಿಗದೆ ಪರದಾಟ ನಡೆಸಿದ್ದಾರೆ.

`ಕೇಂದ್ರ ಸರ್ಕಾರ ಪ್ರಸ್ತಾವಿತ ತೆರಿಗೆ ನೀತಿ ಕಳ್ಳ ವ್ಯವಹಾರಕ್ಕೆ ಪ್ರೇರಣೆ ನೀಡುತ್ತದೆ. 2 ಲಕ್ಷಕ್ಕೂ ಮೀರಿದ ಚಿನ್ನ ಖರೀದಿ ಮೇಲೆ ವಿಶೇಷ ತೆರಿಗೆ ಸಂಗ್ರಹಿಸಲು ಸೂಚಿಸಲಾಗಿದ್ದು ಗ್ರಾಹಕರ ಮೇಲೆ ಹೆಚ್ಚುವರಿ ಹೊರೆ ಬೀಳಲಿದೆ~ ಎಂದು ನಿರಂಜನ ಆಕ್ರೋಶದಿಂದ ಹೇಳುತ್ತಾರೆ.

ಮದುವೆ ಮಾಸದಲ್ಲೇ ಜುವೆಲ್ಲರಿ ಅಂಗಡಿಗಳು ಮುಚ್ಚಿರುವುದು ಆಭರಣಗಳ ಖರೀದಿಗೆ ಬ್ರೇಕ್ ಬೀಳುವಂತೆ ಮಾಡಿದೆ. ವಿವಾಹಕ್ಕೆ ಬೇಕಾದ ತಾಳಿಗಳು ಸಹ ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ. ತಾಳಿಗಳ ಅಲಭ್ಯತೆಯಿಂದ ಕೆಲವು ಮದುವೆಗಳನ್ನು ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ.

ಅವಳಿನಗರದ ಜುವೆಲ್ಲರಿಗಳು ಬಂದ್ ಆಗಿದ್ದರಿಂದ ಸುತ್ತಲಿನ ಹಳ್ಳಿಗಳ ಅಕ್ಕಸಾಲಿಗರಿಗೆ ಶುಕ್ರದೆಸೆ ಒದಗಿದ್ದು, ವಧುವಿಗೆ ಬೇಕಾದ ಆಭರಣಗಳನ್ನು ಸಿದ್ಧಪಡಿಸಿ ಕೊಡುವಲ್ಲಿ ಅವರು ಪುರುಸೊತ್ತು ಇಲ್ಲದಷ್ಟು ಬ್ಯುಸಿಯಾಗಿದ್ದಾರೆ. ಬ್ರ್ಯಾಂಡೆಡ್ ಮಳಿಗೆಗಳನ್ನೇ ಅವಲಂಬಿಸುತ್ತಿದ್ದ ಗ್ರಾಹಕರು ತಮ್ಮತ್ತ ವಾಲಿರುವುದು ಅವರಿಗೆ ಭರಿಸಲಾಗದಷ್ಟು ಖುಷಿ ತಂದಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಭಾಗದಲ್ಲಿ ಚಿನ್ನಾಭರಣ ಅಂಗಡಿಗಳು ಬಂದ್ ಆಗಿಲ್ಲ. ಕೆಲವರು ಮದುವೆಗೆ ಬೇಕಾದ ಆಭರಣಗಳ ಖರೀದಿಗಾಗಿಯೇ ರಾಜಧಾನಿಗೆ ಹೋಗಿ ಬರುತ್ತಿದ್ದಾರೆ.

`ವರ್ಷದ ಯಾವುದೇ ದಿನ ಹೋದರೂ ಜುವೆಲ್ಲರಿ ಮಳಿಗೆಗಳು ತುಂಬಿ ತುಳುಕುತ್ತಿದ್ದವು. ಈಗಂತೂ ಮದುವೆ ಮಾಸ. ಜನರಿಗೆ ತೊಂದರೆ ಆಗುತ್ತಿದೆ ಎಂಬುದು ನಮಗೂ ಗೊತ್ತಿದೆ. ಆದರೆ, ಚಿನ್ನಾಭರಣ ಉದ್ಯಮ ಬದುಕುಳಿಯಲು ಹೋರಾಟವಲ್ಲದೆ ಬೇರೆ ಮಾರ್ಗವೇ ಇಲ್ಲ~ ಎಂದು ಚಿನ್ನದ ವ್ಯಾಪಾರಿ ರಾಮು ಪವಾರ್ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.