ಗುರುವಾರ , ಜನವರಿ 23, 2020
28 °C

ಚೀನಾ: ಕೋಳಿಫಾರಂ ಕಸಾಯಿಖಾನೆಯಲ್ಲಿ ಬೆಂಕಿ, 112 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್ (ಪಿಟಿಐ/ಐಎಎನ್‌ಎಸ್): ಚೀನಾದ ಬೃಹತ್ ಕೋಳಿ ಪೌಲ್ಟ್ರಿಫಾರಂನ ಕಸಾಯಿಖಾನೆ ಘಟಕದಲ್ಲಿ ಸೋಮವಾರ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ 112 ಮಂದಿ ಸಾವನ್ನಪ್ಪಿದ್ದು, 54 ಮಂದಿ ಗಾಯಗೊಂಡಿದ್ದಾರೆ.

ಇಲ್ಲಿನ ಜಿಲಿನ್ ಬೆಯಾನ್‌ಫೆಂಗ್ ಕೋಳಿ ಪೌಲ್ಟ್ರಿಫಾರಂನ ಕಸಾಯಿಖಾನೆ ಘಟಕದಲ್ಲಿ ಸೋಮವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು. ಈ  ಘಟಕದಲ್ಲಿ ಸುಮಾರು 1200 ಮಂದಿ ಕಾರ್ಮಿಕರಿದ್ದು, ಅವಘಡ ಸಂಭವಿಸಿದಾಗ 300 ಮಂದಿ ಘಟಕದಲ್ಲಿದ್ದರು ಎನ್ನಲಾಗಿದೆ.ವಾರ್ಷಿಕವಾಗಿ 67 ಸಾವಿರ ಟನ್ ಕೋಳಿ ಮಾಂಸ ಹಾಗೂ ಅದರ ಉಪ ಉತ್ಪನ್ನಗಳನ್ನು ಉತ್ಪಾದಿಸುವ ಈ ಬೃಹತ್ ಕಟ್ಟಡದ ಒಳಾಂಗಣ ವಿನ್ಯಾಸ ತೀರಾ ಸಂಕೀರ್ಣವಾಗಿದ್ದು ಹೊರಕ್ಕೆ ಹೋಗುವ ದ್ವಾರವು ತುಂಬಾ ಚಿಕ್ಕದಾಗಿದ್ದೇ ದುರಂತದಲ್ಲಿ ಹೆಚ್ಚು ಮಂದಿಯ ಸಾವಿಗೆ ಕಾರಣವಾಗಿದೆ ಎಂದು ಅಗ್ನಿಶಾಮಕ ಪಡೆ ಮೂಲಗಳು ತಿಳಿಸಿವೆ.ಸುಮಾರು 100 ಮಂದಿ ದುರಂತ ಸಂಭವಿಸಿದ ಕೂಡಲೇ ಹೊರಬಂದು ತಮ್ಮ ಪ್ರಾಣಗಳನ್ನು ರಕ್ಷಿಸಿಕೊಂಡರು. ಆದರೆ 200 ಮಂದಿ ಕಟ್ಟಡದಲ್ಲಿ ಸಿಲುಕಿಕೊಂಡಿದ್ದಾರೆ. ಇವರಲ್ಲಿ 93 ಮಂದಿಯ ಮೃತದೇಹಗಳು ದೊರೆತಿವೆ. ಇನ್ನುಳಿದವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ.

ಪ್ರತಿಕ್ರಿಯಿಸಿ (+)