ಶನಿವಾರ, ಫೆಬ್ರವರಿ 27, 2021
28 °C

ಛತ್ತೀಸ್‌ಗಡ: ನಾಲ್ವರು ನಕ್ಸಲರ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಛತ್ತೀಸ್‌ಗಡ: ನಾಲ್ವರು ನಕ್ಸಲರ ಹತ್ಯೆ

ರಾಯಪುರ (ಪಿಟಿಐ): ನಕ್ಸಲ್‌ ಪೀಡಿತ ಛತ್ತೀಸ್‌ಗಡದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಜತೆಗಿನ ಗುಂಡಿನ ಕಾಳಗದಲ್ಲಿ ನಾಲ್ವರು ನಕ್ಸಲರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಕ್ಸಲರ ಚಲನವಲನದ ಕುರಿತು ದೊರೆತ ಸುಳಿವಿನ ಮೇರೆಗೆ ಅವರನ್ನು ಹಿಡಿಯಲು ಭದ್ರತಾ ಪಡೆಗಳನ್ನು ಕಳುಹಿಸಲಾಗಿತ್ತು. ಭದ್ರತಾ ಪಡೆಗಳು ಕಮ್ಕಾನರ ಹಾಗೂ ಪೊದ್ದೆಜೊಜೆರ್ ಗ್ರಾಮಗಳ ನಡುವೆ ತಲುಪುತಿದ್ದಂತೆಯೇ ನಕ್ಸಲರು ಗುಂಡಿನ ಮಳೆಗರೆದರು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ನಕ್ಸಲ ವಿರೋಧ ಕಾರ್ಯಾಚರಣೆ ವಿಭಾಗ) ಆರ್.ಕೆ.ವಿಜ್‌ ಅವರು ತಿಳಿಸಿದ್ದಾರೆ.

ತೀವ್ರಗಾಮಿಗಳ ದಾಳಿಗೆ ಪ್ರತ್ಯುತ್ತರವಾಗಿ ಭದ್ರತಾ ಸಿಬ್ಬಂದಿ ಗುಂಡಿನ ದಾಳಿ ನಡೆಸಿತು. ಒಂದು ಗಂಟೆಯ ಕಾರ್ಯಾಚರಣೆಯ ಬಳಿಕ ನಕ್ಸಲರು ಪರಾರಿಯಾದರು. ಕಾರ್ಯಾಚರಣೆಯ ಬಳಿಕ ಪೊಲೀಸರು ಶೋಧಿಸಿದಾಗ ನಕ್ಸಲರ ನಾಲ್ಕು ಮೃತದೇಹಗಳು, ಶಸ್ತ್ರಾಸ್ತ್ರಗಳು, ಮದ್ದುಗುಂಡು ದೊರೆತವು ಎಂದೂ ಅವರು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.