ಭಾನುವಾರ, ಜೂನ್ 13, 2021
22 °C

ಜನ, ಜಾನುವಾರು ನೀರಿಗೆ ತತ್ವಾರ

ಎಚ್.ವಿ. ನಟರಾಜ್/ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನ, ಜಾನುವಾರು ನೀರಿಗೆ ತತ್ವಾರ

ಚನ್ನಗಿರಿ:  ತಾಲ್ಲೂಕಿನಲ್ಲಿರುವ ಬಹುತೇಕ ಕೆರೆಕಟ್ಟೆಗಳು, ಹಳ್ಳಕೊಳ್ಳಗಳು ಸಂಪೂರ್ಣವಾಗಿ ಬತ್ತಿದ್ದು, ಮುಂದಿನ ಒಂದೆರಡು ತಿಂಗಳಲ್ಲಿ ಜನ, ಜಾನುವಾರುಗಳಿಗೆ ತೀವ್ರ ನೀರಿನ ಬರ ಉಂಟಾಗಲಿದೆ.ಈಗಾಗಲೇ ಈ ಬಾರಿ ತೀವ್ರ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ತಾಲ್ಲೂಕಿನ ಉಬ್ರಾಣಿ ಹೋಬಳಿ ಹೊರತುಪಡಿಸಿ ಕಸಬಾ, ಸಂತೇಬೆನ್ನೂರು ಹಾಗೂ ಬಸವಾಪಟ್ಟಣ ಹೋಬಳಿಗಳಲ್ಲಿರುವ ಕೆರೆಗಳು ಸಂಪೂರ್ಣವಾಗಿ ನೀರಿಲ್ಲದೇ ಬತ್ತಿ ನಿಂತಿವೆ. ಗೊಪ್ಪೇನಹಳ್ಳಿ, ಚಿಕ್ಕಬೆನ್ನೂರು, ಗೊಲ್ಲರಹಳ್ಳಿ, ಕೊಂಡದಹಳ್ಳಿ, ಚನ್ನಾಪುರ, ದೇವರಹಳ್ಳಿ, ಕಾಕನೂರು, ಅರಳಿಕಟ್ಟೆ, ಹಿರೇಉಡ, ದೋಣಿಹಳ್ಳಿ, ಬಿಲ್ಲಹಳ್ಳಿ, ಅಜ್ಜಿಹಳ್ಳಿ, ಸುಣ್ಣಿಗೆರೆ, ಹರೋನಹಳ್ಳಿ, ದೊಡ್ಡಬ್ಬಿಗೆರೆ, ಬುಸ್ಸೇನಹಳ್ಳಿ, ಮುದ್ದೇನಹಳ್ಳಿ, ಅಕಳಕಟ್ಟೆ, ಹೊನ್ನೇಮರದಹಳ್ಳಿ, ನೀತಿಗೆರೆ, ಹಿರೇಗಂಗೂರು, ಚಿಕ್ಕಗಂಗೂರು, ಕೊರಟಿಕೆರೆ, ಯರಗಟ್ಟಿಹಳ್ಳಿ, ಹೊದಿಗೆರೆ, ಮಾದಾಪುರ, ಶೆಟ್ಟಿಹಳ್ಳಿ, ಹೊನ್ನನಾಯಕನಹಳ್ಳಿ, ಕಸ್ತೂರ ಬಾ ಗ್ರಾಮ, ಬೆಳ್ಳಿಗನೂಡು, ಪೆನ್ನಸಮುದ್ರ, ವಡ್ನಾಳ್, ಕಂಚಿಗನಹಾಳ್, ಅಗರಬನ್ನಿಹಟ್ಟಿ, ವಿ. ರಾಮೇನಹಳ್ಳಿ, ಚಿಕ್ಕದೇವರಹಳ್ಳಿ ಮುಂತಾದ ಗ್ರಾಮಗಳಲ್ಲಿನ ಕೆರೆಕಟ್ಟೆಗಳು ಸಂಪೂರ್ಣವಾಗಿ ಒಣಗಿ ನಿಂತು ಬರದಿಂದ ಬಳಲುತ್ತಿವೆ.ಈ ಪ್ರದೇಶಗಳಲ್ಲಿ ಜಾನುವಾರುಗಳಿಗೆ ಮೇವಿನ ಜತೆಗೆ ಕುಡಿಯಲು ನೀರು ಕೂಡಾ ಸಿಕ್ಕುತ್ತಿಲ್ಲ. ಯಾವುದೇ ಜಮೀನಿಗೆ ಹೋದರೂ ಒಣ ಹುಲ್ಲನ್ನು ನೋಡಬಹುದಾಗಿದೆ.  ಸಂಗ್ರಹಿಸಿರುವ ಮೇವು ಹುಲ್ಲು ಒಂದೆರಡು ತಿಂಗಳಿಗೆ ಸಾಕಾಗಬಹುದು. ಇನ್ನೆರಡು ತಿಂಗಳಲ್ಲಿ ಮಳೆ ಬಾರದೇ ಇದ್ದರೆ ತೀವ್ರ ನೀರಿನ ಬರದ ಜತೆಗೆ ಮೇವಿನ ಬರವೂ ಉಂಟಾಗಲಿದೆ. ಅಷ್ಟೇ ಅಲ್ಲದೇ ಈ ಭಾಗಗಳಲ್ಲಿ ಕೊಳವೆಬಾವಿಗಳಲ್ಲಿ ಗಣನೀಯ ಪ್ರಮಾಣದಲ್ಲಿ ಅಂತರ್ಜಲಮಟ್ಟ ಕುಸಿದಿದೆ.ಇಷ್ಟೆಲ್ಲಾ ಸಮಸ್ಯೆ ಇದ್ದರೂ ಬರ ಪರಿಹಾರ ನಿಧಿಯಡಿಯಲ್ಲಿ ಜನರಿಗೆ ಉದ್ಯೋಗ ನೀಡುವ ಯಾವುದೇ ಕಾಮಗಾರಿಗಳನ್ನು ತಾಲ್ಲೂಕಿನ ಯಾವ ಭಾಗದಲ್ಲೂ ಕೈಗೊಂಡಿಲ್ಲ. ಇನ್ನೂ ಉದ್ಯೋಗ ಖಾತ್ರಿ ಯೋಜನೆಯಡಿ ಕೂಡಾ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳುವಲ್ಲಿ ತಾಲ್ಲೂಕು ಆಡಳಿತ ವಿಫಲವಾಗಿದೆ. ಜನರು ಉದ್ಯೋಗ ಇಲ್ಲದೇ ಪರದಾಡುವಂತಾಗಿದೆ. ಬರ ಪರಿಹಾರ ಯೋಜನೆ ಅಡಿಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಜನರಿಗೆ ಉದ್ಯೋಗ ನೀಡಲು ತಾಲ್ಲೂಕು ಆಡಳಿತ ಮುಂದಾಗಬೇಕೆನ್ನುತ್ತಾರೆ ಚನ್ನಗಿರಿಯ ಕರಿಯಪ್ಪ, ದೇವೇಂದ್ರಪ್ಪ, ಬಸವರಾಜ್.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.