ರಿಯೊ ಡಿ ಜನೈರೊ (ಎಎಫ್ಪಿ): ಯುರೊ ಕಪ್ನಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದು ವಿಶ್ವಾಸದ ಉತ್ತುಂಗದಲ್ಲಿ ತೇಲು ತ್ತಿರುವ ಪೋರ್ಚುಗಲ್ ಫುಟ್ಬಾಲ್ ತಂಡ ರಿಯೊ ಒಲಿಂಪಿಕ್ಸ್ನಲ್ಲಿ ಜಯದ ಮುನ್ನುಡಿ ಬರೆದಿದೆ.

ಶುಕ್ರವಾರ ನಡೆದ ‘ಡಿ’ ಗುಂಪಿನ ಪಂದ್ಯದಲ್ಲಿ ಪೋರ್ಚುಗಲ್ 2–0 ಗೋಲುಗಳಿಂದ ಬಲಿಷ್ಠ ಅರ್ಜೆಂಟೀನಾ ತಂಡವನ್ನು ಪರಾಭವಗೊಳಿಸಿತು.
ಲಯೊನೆಲ್ ಮೆಸ್ಸಿ ಮತ್ತು ಕ್ರಿಸ್ಟಿ ಯಾನೊ ರೊನಾಲ್ಡೊ ಅವರಂತಹ ದಿಗ್ಗಜ ಆಟಗಾರರ ಅನುಪಸ್ಥಿಯಲ್ಲಿ ಕಣ ಕ್ಕಿಳಿದಿದ್ದ ಉಭಯ ತಂಡಗಳು ಆರಂಭ ದಿಂದಲೇ ತುರುಸಿನ ಪೈಪೋಟಿ ಗಿಳಿದವು. ಇದರೊಂದಿಗೆ ಸಾಂಬಾ ನಾಡಿನ ಫುಟ್ಬಾಲ್ ಪ್ರಿಯರಿಗೆ ಮನರಂಜನೆಯ ರಸದೌತಣ ಉಣಬಡಿಸಿದವು.

ಆ ನಂತರದ ಅವಧಿಯಲ್ಲೂ ಎರಡೂ ತಂಡಗಳು ಮುನ್ನಡೆಯ ಗೋಲಿಗಾಗಿ ಜಿದ್ದಿಗೆ ಬಿದ್ದ ಹಾಗೆ ಸೆಣಸಿ ದವು. ಹೀಗಿದ್ದರೂ 65 ನಿಮಿಷಗಳ ಅವಧಿಯಲ್ಲಿ ಯಾವ ತಂಡಕ್ಕೂ ಖಾತೆ ತೆರೆಯಲು ಆಗಲಿಲ್ಲ. 66ನೇ ನಿಮಿಷದಲ್ಲಿ ಪೋರ್ಚುಗಲ್ ತಂಡದ ಮುಂಚೂಣಿ ಆಟಗಾರ ಗೊಂಜಾಲೊ ಪೆಸಿಯೆನ್ಸಿಯ ಮೋಡಿ ಮಾಡಿದರು.

ಮಿಡ್ಫೀಲ್ಡರ್ ಬ್ರೂನೊ ಫರ್ನಾಂ ಡೀಸ್ ತಮ್ಮತ್ತ ಒದ್ದು ಕಳುಹಿಸಿದ ಚೆಂಡನ್ನು ನಿಯಂತ್ರಣಕ್ಕೆ ಪಡೆದ ಪೆಸಿಯೆನ್ಸಿಯ ಅದನ್ನು ಬಾಟಮ್ ರೈಟ್ ಕಾರ್ನರ್ನಿಂದ ಸೊಗಸಾದ ರೀತಿಯಲ್ಲಿ ಒದ್ದು ಎದುರಾಳಿ ತಂಡದ ಗೋಲು ಪೆಟ್ಟಿಗೆಯೊಳಗೆ ಸೇರಿಸುತ್ತಿದ್ದಂತೆ ಪೋರ್ಚುಗಲ್ ಪಾಳಯದಲ್ಲಿ ಸಂಭ್ರಮ ಮೇಳೈಸಿತು.

ಇಷ್ಟಾದರೂ ಈ ಬಾರಿ ಕೊಪಾ ಅಮೆರಿಕ ಟೂರ್ನಿಯಲ್ಲಿ ರನ್ನರ್ಸ್ ಅಪ್ ಆಗಿದ್ದ ಅರ್ಜೆಂಟೀನಾ ತಂಡ ಛಲ ಬಿಡದೆ ಸಮಬಲದ ಗೋಲಿಗಾಗಿ ಹೋರಾಟ ಮುಂದುವರಿಸಿತು. ಆದರೆ ಎದುರಾಳಿ ತಂಡದ ‘ಚಕ್ರವ್ಯೂಹ’ವನ್ನು ಭೇದಿಸಿ ಚೆಂಡನ್ನು ಗುರಿ ಮುಟ್ಟಿಸಲು ಮಾತ್ರ ಈ ತಂಡಕ್ಕೆ ಸಾಧ್ಯವಾಗಲಿಲ್ಲ.

84ನೇ ನಿಮಿಷದಲ್ಲಿ ಪೋರ್ಚುಗಲ್ ತಂಡ ಮುನ್ನಡೆ ಹೆಚ್ಚಿಸಿಕೊಂಡು ಪಂದ್ಯದ ಮೇಲಿನ ಹಿಡಿತ ಬಿಗಿ ಮಾಡಿ ಕೊಂಡಿತು. ಇದಕ್ಕೆ ಕಾರಣವಾಗಿದ್ದು ಪಿಟೆ ಕಾಲ್ಚಳಕದಲ್ಲಿ ಅರಳಿದ ಗೋಲು. ಸಹ ಆಟಗಾರ ನೀಡಿದ ಪಾಸ್ನಲ್ಲಿ ಚೆಂಡನ್ನು ನಿಯಂತ್ರಣಕ್ಕೆ ಪಡೆದ ಮಿಡ್ಫೀಲ್ಡರ್ ಪಿಟೆ ಅದನ್ನು ಗುರಿ ಮುಟ್ಟಿಸುತ್ತಿದ್ದಂತೆ ಅಂಗಳದಲ್ಲಿ ಮಿಂಚಿನ ಸಂಚಲನ ಸೃಷ್ಟಿಯಾಯಿತು. ಆ ಬಳಿಕದ ಅವಧಿಯಲ್ಲಿ ಎಚ್ಚರಿಕೆಯ ಆಟ ಆಡಿದ ಪೋರ್ಚುಗಲ್ ಜಯದ ತೋರಣ ಕಟ್ಟಿತು.

ಡ್ರಾ ಮಾಡಿಕೊಂಡ ಬ್ರೆಜಿಲ್: ಈ ಬಾರಿ ಚಿನ್ನ ಗೆಲ್ಲುವ ತಂಡಗಳಲ್ಲಿ ಒಂದೆನಿಸಿರುವ ಬ್ರೆಜಿಲ್ ತಂಡ ‘ಎ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದೊಂದಿಗೆ ಗೋಲು ರಹಿತ ಡ್ರಾ ಮಾಡಿಕೊಂಡಿತು. ಹೀಗಾಗಿ ತವರಿನ ತಂಡದ ಗೆಲು ವನ್ನು ಕಣ್ತುಂಬಿಕೊಳ್ಳುವ ಆಸೆ ಹೊತ್ತು ಮೈದಾನಕ್ಕೆ ಬಂದಿದ್ದ ಆತಿಥೇಯ ಫುಟ್ಬಾಲ್ ಪ್ರಿಯರು ನಿರಾಸೆ ಗೊಳಗಾಗಬೇಕಾಯಿತು. ಅಭಿಮಾನಿಗಳ ಕಣ್ಮಣಿ ಎನಿಸಿದ್ದ ನೇಮರ್ ಈ ಪಂದ್ಯದಲ್ಲಿ ಯಾವುದೇ ಮೋಡಿ ಮಾಡಲಿಲ್ಲ. ‘ಡಿ’ ಗುಂಪಿನ ಇನ್ನೊಂದು ಪಂದ್ಯ ದಲ್ಲಿ ಹೊಂಡರಸ್ 3–2 ಗೋಲುಗಳಿಂದ ಅಲ್ಜೀರಿಯಾ ತಂಡವನ್ನು ಮಣಿಸಿತು.

ಬ್ರೆಜಿಲ್ –ಮೆಕ್ಸಿಕೊ ಪಂದ್ಯ ಡ್ರಾ: ಕುತೂಹಲ ಕೆರಳಿಸಿದ್ದ ಜರ್ಮನಿ ಮತ್ತು ಮೆಕ್ಸಿಕೊ ನಡುವಣ ಪಂದ್ಯ 2–2 ಗೋಲುಗಳಿಂದ ಡ್ರಾ ಆಯಿತು.
2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದು ಬೀಗಿದ್ದ ಮೆಕ್ಸಿಕೊ ತಂಡ ಉತ್ತರಾರ್ಧದ ಆರಂಭದಲ್ಲಿ 2–1ರ ಮುನ್ನಡೆ ಹೊಂದಿತ್ತು. ಹೀಗಾಗಿ ಈ ತಂಡದ ಜಯ ನಿಶ್ಚಿತ ಎಂದೇ ಭಾವಿಸಲಾಗಿತ್ತು.

ಆದರೆ 78ನೇ ನಿಮಿಷದಲ್ಲಿ ಮಥಿಯಸ್ ಜಿಂಟರ್ ಅವರು ಚೆಂಡನ್ನು ಹೆಡರ್ ಮೂಲಕ ಗುರಿ ಮುಟ್ಟಿಸಿ ಅಭಿಮಾನಿಗಳ ಮನ ಗೆದ್ದರು. ಹೀಗಾಗಿ ಜರ್ಮನಿ ತಂಡ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.

ಗೋಲಿನ ಮಳೆ ಸುರಿಸಿದ ಕೊರಿಯಾ: ‘ ಸಿ’ ಗುಂಪಿನ ಪಂದ್ಯದಲ್ಲಿ ಕೊರಿಯಾ ತಂಡ 8–0 ಗೋಲುಗಳಿಂದ ಫಿಜಿ ವಿರುದ್ಧ ಜಯಭೇರಿ ಮೊಳಗಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.