ಶನಿವಾರ, ಏಪ್ರಿಲ್ 17, 2021
23 °C

ಜರ್ಮನ್ ಗ್ರ್ಯಾನ್ ಪ್ರಿ: ಅಲೊನ್ಸೊ ಚಾಂಪಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಕೆನ್‌ಹಿಮ್, ಜರ್ಮನಿ (ಎಎಫ್‌ಪಿ): ಫೆರಾರಿ ತಂಡದ ಫೆರ್ನಾಂಡೊ ಅಲೊನ್ಸೊ ಭಾನುವಾರ ನಡೆದ ಜರ್ಮನ್ ಗ್ರ್ಯಾನ್ ಪ್ರಿ ಫಾರ್ಮುಲಾ ಒನ್ ರೇಸ್‌ನಲ್ಲಿ ಅಗ್ರಸ್ಥಾನ ಪಡೆದರು.

 

`ಪೋಲ್ ಪೊಸಿಷನ್~ನಿಂದ ಸ್ಪರ್ಧೆ ಆರಂಭಿಸಿದ್ದ ಅಲೊನ್ಸೊ ಅದ್ಭುತ ಚಾಲನಾ ಕೌಶಲ ಮೆರೆದರು. ರೆಡ್‌ಬುಲ್ ತಂಡದ ಸೆಬಾಸ್ಟಿಯನ್ ವೆಟೆಲ್ ಎರಡನೇ ಸ್ಥಾನ ಪಡೆದರೆ, ಮೆಕ್‌ಲಾರೆನ್ ತಂಡದ ಜೆನ್ಸನ್ ಬಟನ್ ಮೂರನೇ ಸ್ಥಾನ ಪಡೆದರು.



ಫೋರ್ಸ್ ಇಂಡಿಯಾ ತಂಡದ ಚಾಲಕ ನಿಕೊ ಹಕೆನ್‌ಬರ್ಗ್ 9ನೇ ಸ್ಥಾನ ಪಡೆದು ಎರಡು ಪಾಯಿಂಟ್ ಗಿಟ್ಟಿಸಿಕೊಂಡರು. ಇನ್ನೊಬ್ಬ ಚಾಲಕ ಪೌಲ್ ಡಿ ರೆಸ್ಟಾ 11ನೇ ಸ್ಥಾನ ಪಡೆದು ಪಾಯಿಂಟ್ ಗಿಟ್ಟಿಸಲು ವಿಫಲರಾದರು. ಹಕೆನ್‌ಬರ್ಗ್ 4ನೆಯವರಾಗಿ ಸ್ಪರ್ಧೆ ಆರಂಭಿಸಿದ್ದರು. ಆದರೆ ಅವರಿಗೆ ಉತ್ತಮ ಪ್ರದರ್ಶನ ನೀಡಲು ಆಗಲಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.