ಮಂಗಳವಾರ, ಮೇ 24, 2022
27 °C

ಜಸ್ಸ್ ಡಾನ್ಸ್ ಫೆಸ್ಟಿವಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫ್ರೆಜರ್ ಟೌನ್‌ನ ಜಸ್ಟ್ ಡ್ಯಾನ್ಸ್ ಸಂಸ್ಥೆಯ 8ನೇ ವರ್ಷದ ಚಳಿಗಾಲದ `ಡ್ಯಾನ್ಸ್ ಫೆಸ್ಟಿವಲ್~ ನವೆಂಬರ್ 7ರಿಂದ ಡಿಸೆಂಬರ್ 4ರ ವರೆಗೆ ನಡೆಯಲಿದೆ.ಇದರಲ್ಲಿ ನೃತ್ಯ ಕಾರ್ಯಾಗಾರ, ವಿವಿಧ ನೃತ್ಯ ಪ್ರಕಾರಗಳ ಪರಿಚಯದ ಜತೆಗೆ ಸಾಕಷ್ಟು ಮನರಂಜನೆ ಸಹ ದೊರೆಯಲಿದೆ. ದೇಶಿ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ನೃತ್ಯ ಪಟುಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಜತೆಗೆ ಪ್ರತಿ ವಾರ ನೃತ್ಯ ಪ್ರದರ್ಶನ ಸಹ ಇರುತ್ತದೆ.ಮೊದಲ ವಾರದಲ್ಲಿ ನಡೆಯಲಿರುವ ಜೀವ್ ಅಂಡ್ ಚಾ ಚಾ ಕಾರ್ಯಾಗಾರ ಎಪ್ಪತ್ತು-ಎಂಭತ್ತರ ದಶಕದಲ್ಲಿ ಸಂಚಲನ ಉಂಟುಮಾಡಿದ್ದ ಜ್ಯಾಸ್ ನರ್ತನದ ಮರು ಸೃಷ್ಟಿ ಮಾಡಲಿದೆ. ಜ್ಯಾಸ್‌ನ ಲವಲವಿಕೆ, ಬಿರುಸು, ಚುರುಕುತನ ಇವೆಲ್ಲವೂ ನೃತ್ಯ ಪ್ರಿಯರನ್ನು ಹುಚ್ಚೆಬ್ಬಿಸುತ್ತವೆ. ಜ್ಯಾಸ್ ನೃತ್ಯದ ಪಟ್ಟುಗಳನ್ನು ಇಲ್ಲಿ ತಿಳಿಸಿಕೊಡಲಾಗುವುದು.  ಎರಡನೇ ವಾರದಲ್ಲಿ ನಡೆಯಲಿರುವ ಸಾಲ್ಸಾ ಮತ್ತು ಬಚಾತಾ ನೃತ್ಯ ಕಾರ್ಯಾಗಾರದಲ್ಲಿ ಇವುಗಳ ನೃತ್ಯ ತಂತ್ರಗಳನ್ನು ಹೇಳಿಕೊಡಲಾಗುವುದು.ಮೂರನೇ ವಾರದಲ್ಲಿ ಲಂಡನ್‌ನ ಖ್ಯಾತ ಸಮಕಾಲೀನ ನೃತ್ಯ ಪಟು ಲಿಜ್ ಲಿಯಾ ಅವರು ಸಮಕಾಲೀನ ನೃತ್ಯದ ಬಗ್ಗೆ ತಿಳಿಸಿಕೊಡಲಿದ್ದಾರೆ. ಭಾರತದ ಸಾಂಪ್ರದಾಯಿಕ ನೃತ್ಯವನ್ನು ವಿದೇಶಿ ಸಮಕಾಲೀನ ನೃತ್ಯಕ್ಕೆ ಒಗ್ಗಿಸಿಕೊಂಡು ನೃತ್ಯ ಮಾಡುವುದು ಇವರ ವಿಶೇಷ.

 

ನಾಲ್ಕನೇ ವಾರ ಲಿಂಡೇ ಹಾಪ್ ಕುರಿತ ಕಾರ್ಯಾಗಾರ ಏರ್ಪಡಿಸಲಾಗಿದೆ.

ಈ ಉತ್ಸವದಲ್ಲಿ ಖ್ಯಾತ ನೃತ್ಯಪಟುಗಳಾದ ಪೃಥ್ವಿ ಅಂಡ್ ರೀ, ಜೀವಿತಾ ಮತ್ತು ಮನೋಜ್ ಪಾಲ್ಗೊಳ್ಳಲಿದ್ದಾರೆ. ಮಾಹಿತಿಗೆ: 99006 47067, 98451 22220.  info@justdance.inಮಾಂಟೆಸ್ಸರಿ ತರಬೇತಿ

ವಿದ್ಯಾಂಜಲಿ ಮಾಂಟೆಸ್ಸಾರಿ ತರಬೇತಿ ಸಂಸ್ಥೆ (ವಿಎಂಟಿಐ) ಆಸಕ್ತರಿಗಾಗಿ ನ. 2ರಿಂದ ಮಾಂಟೆಸ್ಸರಿ ತರಬೇತಿ ಕೋರ್ಸ್ ಪ್ರಾರಂಭಿಸಲಿದೆ.ಐದೂವರೆಯಿಂದ ಆರೂವರೆ ವರ್ಷದ ಒಳಗಿನ ಮಕ್ಕಳನ್ನು ಯಾವ ರೀತಿ ನೋಡಿಕೊಳ್ಳಬೇಕು ಎಂಬುದನ್ನು ಇಲ್ಲಿ ಶಿಕ್ಷಕರಿಗೆ ಕಲಿಸಲಾಗುವುದು. ಇದರ ಜತೆಗೆ ಇಂಗ್ಲಿಷ್ ವ್ಯಾಕರಣ, ಕನ್ನಡ ಭಾಷೆ, ಭೂಗೋಳಶಾಸ್ತ್ರ, ಇತಿಹಾಸ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರದ ಬಗ್ಗೆ ತಿಳಿಸಿಕೊಡಲಾಗುವುದು. ನಾಳಿನ ಭವಿಷ್ಯವನ್ನು ಬರೆಯುವ ಇಂದಿನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಅತ್ಯವಶ್ಯಕ. ಹೀಗಾಗಿ ಶಿಕ್ಷಕರಿಗೆ ಉತ್ತಮ ತರಬೇತಿ ನೀಡಿ ಅವರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿಸುವ ಉದ್ದೇಶದಿಂದ ಮಾಂಟೆಸ್ಸಾರಿ ತರಬೇತಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಅಡಕಗೊಳಿಸಲಾಗಿದೆ. ಶಿಕ್ಷಕರ ಬೋಧನಾ ಮಟ್ಟವನ್ನು ಹೆಚ್ಚಿಸುವಲ್ಲಿ ಗುಣಮಟ್ಟದ ತರಬೇತಿ ನೀಡುತ್ತಿರುವುದು ಈ ಸಂಸ್ಥೆಯ ಮತ್ತೊಂದು ವೈಶಿಷ್ಟ್ಯ.

ವಿಎಂಟಿಐ ಇಂಡಿಯನ್ ಇನ್‌ಸ್ಟಿಟ್ಯೂಟ್ ಫಾರ್ ಮಾಂಟೆಸ್ಸರಿ ಸ್ಟಡೀಸ್ ಸಂಸ್ಥೆಯಿಂದ ಅಂಗೀಕೃತಗೊಂಡಿದೆ.

ಸ್ಥಳ: ವಿದ್ಯಾಂಜಲಿ ಮಾಂಟೆಸ್ಸರಿ ಟ್ರೇನಿಂಗ್ ಇನ್‌ಸ್ಟಿಟ್ಯೂಟ್, ಚೋಳನಾಯಕನಹಳ್ಳಿ, ಆರ್.ಟಿ.ನಗರ. ಮಾಹಿತಿಗೆ: 94484 74891, 2354 4891.ಉಚಿತ ದಂತ ಶಿಬಿರ


ಪಿ ಡಿ ಹಿಂದೂಜಾ ಆಸ್ಪತ್ರೆ ಸುವರ್ಣ ಮಹೋತ್ಸವದ ಅಂಗವಾಗಿ ಸಿಂಧಿ ಯುವ ಒಕ್ಕೂಟದ ಸಹಯೋಗದಲ್ಲಿ ಗುರುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1ರ ವರೆಗೆ ಉಚಿತ ದಂತ ತಪಾಸಣೆ ಶಿಬಿರ ಆಯೋಜಿಸಲಾಗಿದೆ.

ಸ್ಥಳ: ಹಿಂದೂಜಾ ಸಿಂಧಿ ಆಸ್ಪತ್ರೆ, ಸಂಪಂಗಿ ರಾಮನಗರ. ಮಾಹಿತಿ ಹಾಗೂ ನೋಂದಣಿಗೆ: 4903 0303, 2223 7117.ಶ್ರವಣ ಸಾಧನ ಉಡುಗೊರೆ ಅವಕಾಶ

ದೀಪಾವಳಿಗೆ ಉಡುಗೊರೆ ನೀಡುವುದು ಹಿಂದಿನಿಂದಲೂ ಬಂದ ಸಂಪ್ರದಾಯ. ಶ್ರವಣ ದೋಷ ಹೊಂದಿರುವವರಿಗೆ, ಕಿವಿ ಕೇಳಿಸದವರಿಗೆ ಅತ್ಯುತ್ತಮ ಶ್ರವಣ ಸಾಧನಗಳ ಉಡುಗೊರೆ ನೀಡಿದರೆ ಹೇಗೆ?ನಿಜ, ಅವರ ಜೀವನದಲ್ಲಿ ನೆನಪಿನಲ್ಲಿ ಉಳಿಯುವ ಉಡುಗೊರೆ ಇದಾಗುತ್ತದೆ. ಇಂಥ ಅವಕಾಶವನ್ನು ರಾಜನ್ ವಾಕ್ ಶ್ರವಣ ಕೇಂದ್ರ ನೀಡುತ್ತಿದೆ. ಈ ನಿಟ್ಟಿನಲ್ಲಿ ಅ. 31ರ ವರೆಗೂ `ಶಬ್ದದ ಉಡುಗೊರೆ~ ಎಂಬ ವಿಶಿಷ್ಟ ಆಂದೋಲನ ನಡೆಸುತ್ತಿದೆ.`ಆರ್ಥಿಕವಾಗಿ ದುರ್ಬಲರಿಗೆ ಅತ್ಯುತ್ತಮ ಗುಣಮಟ್ಟದ ಶ್ರವಣ ಸಾಧನಗಳ ಅಗತ್ಯ ತುಂಬಾ ಇದೆ. ಉತ್ತಮ ಗುಣಮಟ್ಟದ ಸಾಧನ ಧರಿಸುವುದು ಸಾಕಷ್ಟು ಅನುಕೂಲ ಉಂಟುಮಾಡುತ್ತದೆ. ಉಳ್ಳವರು 16 ಸಾವಿರದಿಂದ 31 ಸಾವಿರ ರೂ ವರೆಗೆ ನೀಡಿ ಶ್ರವಣ ಸಾಧನ ಪ್ರಾಯೋಜಕತ್ವದ ವಹಿಸಬಹುದು.ಅಲ್ಲದೆ ಯಾರಾದರೂ ತಮ್ಮ ಹಳೆಯ ಶ್ರವಣ ಸಾಧನಗಳನ್ನು ಕೊಡಲು ಇಚ್ಛಿಸಿದರೆ, ಅದನ್ನೇ ನೇರವಾಗಿ ಬಡವರಿಗೆ ವರ್ಗಾಯಿಸಲಾಗುತ್ತದೆ. ಇದು ಸಮಾಜದ ಬಡ ವರ್ಗಕ್ಕೆ ಸಹಾಯಮಾಡುವ ಉದ್ದೇಶ ಹೊಂದಿದೆ~ ಎನ್ನುತ್ತಾರೆ ಕೇಂದ್ರದ ನಿರ್ದೇಶಕ ಜಿ.ಕೃಷ್ಣಕುಮಾರ್.

ಮಾಹಿತಿಗೆ : 4151 0404ಜಾಜ್ ರೋಮಾಂಚನ

ಅಮೆರಿಕದಲ್ಲಿ ಹುಟ್ಟಿ ವಿಶ್ವದೆಲ್ಲೆಡೆ ಜನಪ್ರಿಯತೆ ಗಳಿಸಿದ ಜಾಜ್ ಸಂಗೀತಪ್ರಿಯರ ಮೈನವಿರೇಳಿಸುವ ಶಕ್ತಿ ಹೊಂದಿದೆ. ಕುಣಿತಕ್ಕೆ ಹೇಳಿಮಾಡಿಸಿದಂತಿದ್ದು ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತದೆ.ಅಮೆರಿಕಾದ ಖ್ಯಾತ ಜಾಜ್ ಸಂಗೀತಗಾರರಾದ ಪಾಲ್ ಬ್ಯೂಡ್ರೈ ಮತ್ತು ಪಾಥ್‌ವೇಸ್ ಅವರು ಇದೇ ಶನಿವಾರ ಸಂಜೆ 7ರಿಂದ ಈ ಸಂಗೀತದ ರೋಚಕತೆಯನ್ನು ಬೆಂಗಳೂರಿಗರಿಗೂ ಹಂಚಲಿದ್ದಾರೆ. ಚೆನ್ನೈಯ ಅಮೆರಿಕ ಕಾನ್ಸುಲರ್ ಜನರಲ್ ಕಚೇರಿ ಈ ಕಾರ್ಯಕ್ರಮ ಆಯೋಜಿಸಿದೆ.ಉಚಿತ ಪಾಸ್‌ಗಳು ಬೆಂಗಳೂರು ಸ್ಕೂಲ್ ಆಫ್ ಮ್ಯೂಸಿಕ್, ಬಿಫ್ಲಾಟ್ ಹಾಗೂ ಭಾರತೀಯ ವಿದ್ಯಾ ಭವನದಲ್ಲಿ ಇರುವ ಕೌಂಟರ್ ಕಲ್ಚರ್ ಅಂಡ್ ಅಮೆರಿಕನ್ ಕಾರ್ನರ್‌ನಲ್ಲಿ ಲಭ. ಜತೆಗೆ chennaipasprograms@state.gov  ನಲ್ಲಿ ಪಾಸ್ ಕಾಯ್ದಿರಿಸಿ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಪಡೆದುಕೊಳ್ಳಬಹುದು.  ಸ್ಥಳ: ಗುಡ್‌ಶೆಫರ್ಡ್ ಆಡಿಟೋರಿಯಂ, ರೆಸಿಡೆನ್ಸಿ ರಸ್ತೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.