ವಿಜಾಪುರ: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶುಕ್ರವಾರ ಹೋಳಿಯ ಸಂಭ್ರಮ; ರಂಗಿನಾಟದ ಮೋಡಿ. ಬೆಳಗಾಗುತ್ತಿದ್ದಂತೆ ಚಿಣ್ಣರು ಕೈಯಲ್ಲಿ ಬಣ್ಣದ ಬಾಟಲ್ಗಳನ್ನು ಹಿಡಿದು ಮನೆ ಎದುರಿನ ಹಜಾರದಲ್ಲಿ ನಿಂತು ಬೀದಿಯಲ್ಲಿ ಹೋಗಿ ಬರುವವರಿಗೆ ಬಣ್ಣ ಎರಚುವ ಮೂಲಕ ರಂಗಿನಾಟಕ್ಕೆ ಚಾಲನೆ ನೀಡಿದರು.

ಯುವಕರು ಗುಂಪು ಗುಂಪಾಗಿ, ಹಲಗೆ ನುಡಿಸುತ್ತ, ಬಾಯಿ ಬಡಿದುಕೊಳ್ಳುತ್ತ ಎಲ್ಲೆಡೆ ಸಂಚರಿಸಿ ತಮ್ಮ ಮಿತ್ರರಿಗೆ, ನೆರೆ-ಹೊರೆಯವರಿಗೆ ಬಣ್ಣ ಹಚ್ಚಿ ಸಂಭ್ರಮಿಸಿದರು. ಬಣ್ಣ ಹಚ್ಚುವಲ್ಲಿ ಯಶಸ್ವಿಯಾದರೆ ಎಲ್ಲರೂ ಸೇರಿ ಜೋರಾಗಿ ಬಾಯಿ ಬಡಿದುಕೊಂಡು ಸಂಭ್ರಮಿಸುತ್ತಿದ್ದರು. ಮನೆ ಮನೆಗೆ ತೆರಳಿ ವಂತಿಗೆ ನೀಡುವಂತೆ ಪೀಡಿಸುತ್ತಿದ್ದರು. ಹಣ ಕೊಡದವರ ಮನೆಯ ಎದರು `ರೊಕ್ಕಾ ಕೊಡವಲ್ರ ಏ ಯವ್ವಾ...~ ಎನ್ನುತ್ತ ಬಾಯಿ ಬಡಿದುಕೊಳ್ಳುತ್ತಿದ್ದರು.

ರಂಗಿನಾಟದ ಹಿನ್ನೆಲೆಯಲ್ಲಿ ಶುಕ್ರವಾರ ವಿಜಾಪುರದಲ್ಲಿ ಅಘೋಷಿತ ಬಂದ್ ವಾತಾವರಣ ಕಂಡು ಬಂತು. ಬಹುತೇಕ ಅಂಗಡಿ- ಮುಂಗಟ್ಟುಗಳು ಮುಚ್ಚಿದ್ದವು. ಜನಸಂಚಾರ ಕಡಿಮೆ ಇತ್ತು. ಕೆಲ ಶಾಲಾ-ಕಾಲೇಜು ಕಾರ್ಯನಿರ್ವಹಿಸಿದರೂ ಬೆರಳೆಣಿಕೆಯ ವಿದ್ಯಾರ್ಥಿಗಳು ಹಾಜರಾಗಿದ್ದರು. ಮಹಿಳೆಯರು, ಯುವತಿಯರು ಸಹ ತಮ್ಮ ಗೆಳೆತಿಯರೊಂದಿಗೆ ಬಣ್ಣ ಆಡಿ ಸಂಭ್ರಮಿಸಿದರು.

ಸಂಜೆ ಸೋಗಿನಾಟದ ಮೋಡಿ. ಯುವಕರು ಸೀರೆ ತೊಟ್ಟು ಮಹಿಳೆಯ ವೇಷಧಾರಿಗಳಾದ್ದರು. ಹಲಗೆಯ ಹಿಮ್ಮೇಳದಲ್ಲಿ ನರ್ತಿಸುತ್ತಿದ್ದರು. ಅಣುಕು ಶವಯಾತ್ರೆ ನಡೆಸುತ್ತಿದ್ದರು. ವಿವಿಧ ಬಗೆಯ ಸೋಗು ಹಾಕಿ ಎಲ್ಲರನ್ನೂ ರಂಜಿಸಿದರು.

`ಜಿಲ್ಲೆಯಲ್ಲಿ ಹೋಳಿ ಹಬ್ಬವನ್ನು ಶಾಂತರೀತಿಯಿಂದ ಆಚರಿಸಲಾಯಿತು. ಎಲ್ಲಿಯೂ ಅಹಿತಕರ ಘಟನೆ ನಡೆದಿಲ್ಲ~ ಎಂದು ಪ್ರಭಾರ ಎಸ್ಪಿ ಎಫ್.ಎ. ಟ್ರಾಸ್ಗರ್ ತಿಳಿಸಿದರು. ವಿಜಾಪುರ ನಗರದಲ್ಲಿ ಇದೇ 12ರಂದು ಸೋಮವಾರ ರಂಗಪಂಚಮಿ ಆಚರಿಸಲಾಗುತ್ತಿದ್ದು, ಅಂದೂ ಸಹ ಬಣ್ಣದಾಟ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.