ಆಳಂದ (ಗುಲ್ಬರ್ಗ ಜಿ.): ಜೀಪು ಮತ್ತು ಕಂಟೇನರ್ ಲಾರಿ ಮುಖಾಮುಖಿಯಾಗಿ ಆರು ಜನ ಮೃತಪಟ್ಟ ಘಟನೆ ಉಮರ್ಗಾ- ಬಸವಕಲ್ಯಾಣ ರಸ್ತೆಯ ಕರಳಿ ಕ್ರಾಸ್ ಬಳಿ ಗುರುವಾರ ರಾತ್ರಿ ನಡೆದಿದೆ.

ಆಳಂದ ಪಟ್ಟಣದ ನೊಖಡ ಗಲ್ಲಿಯ ಕೆಲವು ಮುಸ್ಲಿಂ ಕುಟುಂಬದವರು ಜೀಪಿನಲ್ಲಿ ಬೀದರ್ ಜಿಲ್ಲೆಯ ಭಾಲ್ಕಿಯ ಸೈಲಾನಿ ಬಾಬಾ ದರ್ಶನಕ್ಕಾಗಿ ಹೋಗುತ್ತಿದ್ದರು. ಎದುರಿನಿಂದ ಬಂದ ಕಂಟೇನರ್ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಜೀಪಿನಲ್ಲಿ ಸುಮಾರು 15ಜನ ಪ್ರಯಾಣಿಸುತ್ತಿದ್ದು, ಚಾಲಕ ಮಹ್ಮದ ಹಾಜಿ ದಸ್ತಗೀರ ಶೇಖ (27), ಹನಿಸಾ ಮಹಿಬೂಬ ಪಟೇಲ್ (45), ಸಾಹಿರಾಬಾನು ಶೌಕತ್ ಅಲಿ ಚೌಸ್ (30) ಮತ್ತು ರಹಿಸಾಬಾನು ಶೌಕತ್ ಅಲಿ (10) ಹಾಗೂ ಇನ್ನಿಬ್ಬರು (ಗುರುತು ಪತ್ತೆಯಾಗಿಲ್ಲ) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

9 ಜನರಿಗೆ ಗಂಭೀರ ಗಾಯಗಳಾಗಿದ್ದು, ಉಮರ್ಗಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಮರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. ನೊಖಡ ಗಲ್ಲಿಯಲ್ಲಿ ಸೂತಕದ ವಾತಾವರಣ ಮನೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.