ಭಾನುವಾರ, ಜನವರಿ 26, 2020
29 °C

ಜೀವಕ್ಕೆ ಮಾರಕವಾಗುವ ಪಲ್ಲಂಗ ತೋಡ್

ಪ್ರಜಾವಾಣಿ ವಾರ್ತೆ ಗಣೇಶ ಅಮೀನಗಡ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ದೀರ್ಘ ಲೈಂಗಿಕತೆಗಾಗಿ `ಪಲ್ಲಂಗ ತೋಡ್~ ಎಂದು ಮಾರಾಟ ವಾಗುವ ಪಾನ್ ಅಥವಾ ಬೀಡಾ ಗಳನ್ನು ತಿನ್ನುವುದರಿಂದ ಜೀವಕ್ಕೆ ಮಾರಕ ಆಗುತ್ತದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.ಮೊದಲ ರಾತ್ರಿಯಂದು ಪಲ್ಲಂಗ ತೋಡ್ ಪಾನ್ ತಿಂದರೆ ಪಲ್ಲಂಗ ಮುರಿಯುವ ಹಾಗೆ ಲೈಂಗಿಕ ಕ್ರಿಯೆ ನಡೆಯುತ್ತದೆ ಎಂಬ ಮೂಢನಂಬಿಕೆ ಉತ್ತರ ಕರ್ನಾಟಕದಾದ್ಯಂತ ಇದೆ. ಕೇವಲ ಮದುವೆಯಾದವರು ಅಲ್ಲದೇ ಅಶಕ್ತರು, ದೀರ್ಘ ಲೈಂಗಿಕತೆ ಬೇಕು ಎಂಬ ಅಪೇಕ್ಷೆ ಉಳ್ಳವರು ಕೂಡಾ ಪಲ್ಲಂಗ ತೋಡ್ ಪಾನ್‌ಗಳಿಗೆ ಮೊರೆ ಹೋಗುತ್ತಾರೆ. ಇಂಥದ್ದೇ ಪಾನ್‌ಗಳನ್ನು ಭಾರಿ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ನಗರ ದಲ್ಲಿ ಬಂಧಿಸಲಾಗಿದೆ. ಈ ಸಂಬಂಧ ಗದುಗಿನಲ್ಲಿಯೂ ವ್ಯಕ್ತಿಯೊಬ್ಬನ ಬಂಧನವಾಗಿದೆ.`ರಕ್ತದೊತ್ತಡ ಇದ್ದವರು, ಮಧು ಮೇಹಿಗಳು ಹಾಗೂ ಹೃದ್ರೋಗ ತೊಂದರೆ ಉಳ್ಳವರು ಈ ಪಾನ್ ತಿನ್ನು ವುದರಿಂದ ದಿಢೀರ್ ಸಾವು ಖಚಿತ~ ಎಂದು ಮಹಾನಗರ ಪಾಲಿಕೆ ವೈದ್ಯಾ ಧಿಕಾರಿ ಡಾ.ಪಿ.ಎನ್. ಬಿರಾದಾರ ಎಚ್ಚರಿಸುತ್ತಾರೆ.`ಪಲ್ಲಂಗ ತೋಡ್ ಪಾನ್‌ನಲ್ಲಿ  ಸಿಲ್ಡೇನಾಫಿಲ್ ಸಿಟ್ರೇಟ್ (ಜ್ಝಿಛ್ಞಿಚ್ಛಜ್ಝಿ ್ಚಜಿಠ್ಟಿಠಿಛಿ) ಮಾತ್ರೆಯನ್ನು ಪುಡಿ ಮಾಡಿ ಹಾಕುತ್ತಾರೆ. ಈ ಮಾತ್ರೆಯಲ್ಲಿ ವಯಾಗ್ರ ಮಾತ್ರೆಯಲ್ಲಿಯ ಅಂಶಗಳೇ ಇರುತ್ತವೆ. ಇದರ ಒಂದು ಮಾತ್ರೆಯ ದರ ರೂ. 40-50. ಆದರೆ ಈ ಸಿಲ್ಡೇ ನಾಫಿಲ್ ಸಿಟ್ರೇಟ್ ಮಾತ್ರೆಯನ್ನು ಪುಡಿ ಮಾಡಿ ಬೀಡಾದಲ್ಲಿ ಹಾಕಿ ಕಟ್ಟಿ ಕೊಡುತ್ತಾರೆ. ಅರ್ಧ ಗಂಟೆಯ ನಂತರ ಕಾಮೋತ್ತೇಜಕ ಆಗುತ್ತದೆಯಂತೆ. ಹೀಗಾಗಿ ಪಲ್ಲಂಗ ತೋಡ್ ಬೀಡಾ ಕೊಳ್ಳಲು ರೂ. 200-300 ಪಡೆ ಯುತ್ತಾರೆ. ಇದರೊಂದಿಗೆ ಸ್ವಲ್ಪ ಮಟ್ಟಿನ ಗಾಂಜಾ ಅಥವಾ ಚರಸ್ ಬೆರೆ ಸುವುದರಿಂದಲೂ ಮತ್ತು ಬರುತ್ತದೆ. ಇದರಿಂದ ಗ್ರಾಹಕರು ಆಕರ್ಷಿತರಾಗಿ ಪದೇ ಪದೇ ಅದೇ ಬೀಡಾ ತಿನ್ನಬೇಕೆಂದು ಹಾತೊರೆಯುತ್ತಾರೆ. ಕೊಂಡ ಅಂಗಡಿಗೇ ಹೋಗಿ ಕೊಳ್ಳು ತ್ತಾರೆ. ಅಂತಿಮವಾಗಿ ಚಟವಾಗುತ್ತದೆ~ ಎಂದು ವಿವರಿಸುತ್ತಾರೆ ಮಹಾನಗರ ಪಾಲಿಕೆಯ ಗೌರವ ವೈದ್ಯಾಧಿಕಾರಿ ಡಾ.ಯು.ಬಿ. ನಿಟಾಲಿ.`ಸಿಲ್ಡೇನಾಫಿಲ್ ಸಿಟ್ರೇಟ್ ಮಾತ್ರೆಯ ಪುಡಿ ಬೆರೆಸಿದ ಪಲ್ಲಂಗ ತೋಡ್ ಪಾನ್ ತಿನ್ನುವುದರಿಂದ ಆರೋಗ್ಯವಾಗಿ ಇರು ವವರಿಗೂ ಅಡ್ಡಪರಿಣಾಮಗಳು ಆಗು ತ್ತವೆ. ನರಗಳ ದೌರ್ಬಲ್ಯ, ಪಿತ್ತ, ಬಾಯಿ ತೆರೆಯಲು ಆಗದಿರುವುದು, ಲ್ಯೂ ಪ್ಲೆಕಿಯಾ ಎಂಬ ಕ್ಯಾನ್ಸರ್ ಆಗ ಬಹುದು. ಇದಕ್ಕೂ ಮೊದಲು ಅಲ್ಸರ್ ಕಾಡಬಹುದು. `ತಾನು ಅಶಕ್ತ ಇರುವೆ, ಅಸಮರ್ಥ ಎಂಬ ಭಾವನೆ ಮನಸ್ಸಿನಲ್ಲಿ ಬರಬಾರದು. ಈ ಭಾವನೆ ತೊಡೆ ಯಬೇಕು ಜೊತೆಗೆ ಮದ್ಯ ವ್ಯಸನಿ ಗಳಾಗಬಾರದು ಮತ್ತು ಧೂಮಪಾನ ತ್ಯಜಿಸಬೇಕು~ ಎಂದು ಡಾ. ನಿಟಾಲಿ ಸಲಹೆ ನೀಡಿದರು.`ಒತ್ತಡದ ಬದುಕು, ಉದ್ವಿಗ್ನತೆ, ಖಿನ್ನತೆಯಿಂದ ಲೈಂಗಿಕ ಅಸಮರ್ಥತೆ ಉಂಟಾಗಬಹುದು. ಆದರೆ ಒತ್ತಡದ ಬದುಕಿನಿಂದ ರಿಲ್ಯಾಕ್ಸ್ ಆಗಿರುವುದು, ಖಿನ್ನತೆಯಿಂದ ಬಳಲದೆ ಇರುವುದರ ಜೊತೆಗೆ ಉತ್ತಮ ಆಹಾರ ಸೇವನೆ ಹಾಗೂ ನಿತ್ಯ ವ್ಯಾಯಾಮದಿಂದ ಆರೋಗ್ಯಕರ ಲೈಂಗಿಕತೆ ಸಾಧ್ಯ. ಮುಖ್ಯ ವಾಗಿ ವಯಸ್ಸಾದ ಹಾಗೆ ಲೈಂಗಿಕ ಸಾಮರ್ಥ್ಯ ಕುಸಿಯುತ್ತದೆ. ಈ ಸಹ ಜತೆಯನ್ನು ಅರಿಯಬೇಕು~ ಎಂದು ಡಾ.ಪಿ.ಎನ್. ಬಿರಾದಾರ ಕಿವಿಮಾತು ಹೇಳುತ್ತಾರೆ. 

 

ಪ್ರತಿಕ್ರಿಯಿಸಿ (+)