ಬೆಂಗಳೂರು: ಮಾಗಡಿ ರಸ್ತೆಯಿಂದ ಮೈಸೂರು ರಸ್ತೆಯ ನಾಯಂಡನಹಳ್ಳಿ ಜಂಕ್ಷನ್ವರೆಗಿನ ‘ನಮ್ಮ ಮೆಟ್ರೊ’ದ ಮಾರ್ಗದಲ್ಲಿ ಜುಲೈ ತಿಂಗಳಲ್ಲಿ ರೈಲು ಸಂಚಾರ ಆರಂಭಿಸಲು ‘ಬೆಂಗಳೂರು ಮೆಟ್ರೊ ರೈಲು ನಿಗಮ’ವು ಭರದ ಸಿದ್ಧತೆ ನಡೆಸಿದೆ.

ಈ ಮಾರ್ಗದಲ್ಲಿ ಮಾರ್ಚ್ ತಿಂಗಳಿಂದ ಒಂದು ರೈಲಿನ ಪರೀಕ್ಷಾರ್ಥ ಸಂಚಾರವು ಯಶಸ್ವಿಯಾಗಿ ಸಾಗಿದೆ. ಮಂಗಳವಾರದಿಂದ ಮತ್ತೊಂದು ರೈಲು ಪರೀಕ್ಷಾರ್ಥ ಸಂಚಾರ ನಡೆಸಲಿದೆ.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ, ‘6.4 ಕಿ.ಮೀ ಉದ್ದದ ಈ ಮಾರ್ಗದಲ್ಲಿ ಕಟ್ಟಡ ಮತ್ತು ಅಗ್ನಿ ಶಾಮಕ ವ್ಯವಸ್ಥೆಗಾಗಿ ಸಂಬಂಧಪಟ್ಟ ಇಲಾಖೆಗಳಿಂದ ಸುರಕ್ಷತಾ ಪ್ರಮಾಣ ಪತ್ರಗಳನ್ನು ಈಗಾಗಲೇ ಪಡೆದುಕೊಳ್ಳಲಾಗಿದೆ’ ಎಂದರು.

‘ಈ ಮಾರ್ಗದಲ್ಲಿ ಸೋಮವಾರ ಗರಿಷ್ಠ ವೇಗದಲ್ಲಿ ರೈಲನ್ನು ಓಡಿಸಿದೆವು. ಮುಂದಿನ ಎರಡು ಮೂರು ವಾರಗಳಲ್ಲಿ ಇನ್ನೆರಡು ಮೂರು ರೈಲು ಗಾಡಿಗಳನ್ನು ಪರೀಕ್ಷಾರ್ಥ ಓಡಿಸಲಿದ್ದೇವೆ’ ಎಂದು ಅವರು ವಿವರಿಸಿದರು.

‘ಈ ತಿಂಗಳ 20ರೊಳಗೆ ಮೆಟ್ರೊ ರೈಲು ಸುರಕ್ಷತಾ ಆಯುಕ್ತರಿಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದೇವೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜುಲೈನಲ್ಲಿ ರೈಲಿನ ವಾಣಿಜ್ಯ ಸಂಚಾರ ಆರಂಭವಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಎಂ.ಜಿ.ರಸ್ತೆಯಿಂದ ಮಾಗಡಿ ರಸ್ತೆವರೆಗಿನ 4.8 ಕಿ.ಮೀ ಉದ್ದದ ಸುರಂಗ ಮಾರ್ಗದಲ್ಲಿ ವಿದ್ಯುತ್ ಪೂರೈಕೆಯ ಥರ್ಡ್ ರೈಲ್ ಅಳವಡಿಕೆ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಈ ಸುರಂಗದಲ್ಲಿ ಬ್ಯಾಟರಿಗಳ ಸಹಾಯದಿಂದ ರೈಲು ಗಾಡಿಗಳನ್ನು ಮಾಗಡಿ ರಸ್ತೆ ಕಡೆಗೆ ತರಲಾಗುತ್ತಿದೆ.

ರೈಲು ಗಾಡಿಗಳನ್ನು ಓಡಿಸುವ ಮುನ್ನ ಸುರಂಗದಲ್ಲಿ ಮಾರ್ಗದುದ್ದಕ್ಕೂ ಯಾವುದಾದರೂ ಅಡೆತಡೆಗಳಿವೆಯೇ ಎಂಬು ದನ್ನು ಪತ್ತೆ ಹಚ್ಚಿ, ಸರಿಪಡಿಸುವ ಉದ್ದೇಶದಿಂದ ರೈಲಿನ ಅಳತೆಗಿಂತ ಸ್ವಲ್ಪ ದೊಡ್ಡದಾದ ‘ಸ್ಟ್ರಕ್ಚರ್ ಗೇಜ್’ ಎಂಬ ಕಬ್ಬಿಣದ ತಳ್ಳುಗಾಡಿಯನ್ನು ಹಳಿಗಳ ಮೇಲೆ ಓಡಾಡಿಸಿ ಪರಿಶೀಲಿಸಲಾಯಿತು.

ಮುಖ್ಯಾಂಶಗಳು
* ಮಾರ್ಚ್ನಿಂದಲೇ ಒಂದು ರೈಲು ಪರೀಕ್ಷಾರ್ಥ ಸಂಚಾರ ಯಶಸ್ವಿ
* ಮಂಗಳವಾರದಿಂದ ಮತ್ತೊಂದು ರೈಲು ಪರೀಕ್ಷಾರ್ಥ ಸಂಚಾರ
* ಇದೇ 20ರೊಳಗೆ ಸುರಕ್ಷತಾ ಆಯುಕ್ತರಿಗೆ ಅನುಮತಿಗೆ ಅರ್ಜಿ ಸಲ್ಲಿಸಲು ನಿರ್ಧಾರಮುಖ್ಯಾಂಶಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.