ತುಮಕೂರು: ರಾಜ್ಯದ ಎಲ್ಲೆಡೆ ಟೊಮೆಟೊ ಬೆಲೆ ಗಗನಕ್ಕೆ ಏರಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ನಿರಂತರವಾಗಿ ಬೆಲೆ ಏರುತ್ತಿದೆ. ಬೆಳೆದ ರೈತರಿಗೆ ಸರಾಸರಿ ಕೆ.ಜಿ.ಗೆ ರೂ. 30ರಿಂದ 35 ದೊರೆಯುತ್ತಿದೆ. ಆದರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಅತ್ಯಂತ ಕಳಪೆ ದರ್ಜೆ ಹಣ್ಣನ್ನು ಸಹ ರೂ. 50ರಿಂದ 60ಕ್ಕೆ ಮಾರಾಟ ಮಾಡಲಾಗುತ್ತಿದೆ.

ಟೊಮೆಟೊ ಬೆಳೆಗಾರರು ನಿರಂತರವಾಗಿ ಬೆಲೆ ಜತೆಗೆ ಜೂಜಾಟ ಆಡಬೇಕು. ಟೊಮೆಟೊ ಬೆಲೆ ಯಾವಾಗ ಏನಾಗುತ್ತದೆ ಎಂಬುದು ತಿಳಿದಿರುವುದಿಲ್ಲ. ಕಳೆದ ಜನವರಿ- ಫೆಬ್ರುವರಿಯಲ್ಲಿ ಸಗಟು ಬೆಲೆ ಕ್ವಿಂಟಲ್ಗೆ ರೂ. 200ರಿಂದ 300 ಇತ್ತು.

ಮಾರ್ಚ್ನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಂಡು ಒಂದು ಸಾವಿರದ ಹಂತ ತಲುಪಿತ್ತು. ಏಪ್ರಿಲ್ ಸಮಯಕ್ಕೆ ಸರಾಸರಿ ರೂ. 2000 ಸಾವಿರದ ಗಡಿ ದಾಟಿತ್ತು. ಮೇನಲ್ಲಿ ನಿರೀಕ್ಷೆಗೂ ಮೀರಿ ಬೆಲೆ ಏರಿಕೆ ಕಂಡಿದೆ. ಕಳೆದ ಕೆಲವು ವರ್ಷಗಳಿಂದ ಈ ಪ್ರಮಾಣದ ಬೆಲೆ ಏರಿಕೆ ಆಗಿರಲಿಲ್ಲ.

ಕಳೆದ ಮೂರ್ನಾಲ್ಕು ತಿಂಗಳಿಂದ ಮಳೆ ಕೈಕೊಟ್ಟಿದ್ದು, ಟೊಮೆಟೊ ಬೆಲೆ ಏರಿಕೆಗೆ ಕಾರಣ. ನಿರೀಕ್ಷೆಯಂತೆ ಏಪ್ರಿಲ್ನಲ್ಲಿ ಮಳೆ ಬಾರದೆ ಟೊಮೆಟೊ ಸಸಿ ನಾಟಿ ಮಾಡುವರ ಸಂಖ್ಯೆ ಕುಸಿದಿತ್ತು. ಅಲ್ಲದೆ ಬತ್ತಿ ಹೋಗುತ್ತಿರುವ ಕೊಳವೆ ಬಾವಿಗಳ ಸಂಖ್ಯೆ ಸಹ ಹೆಚ್ಚಾಗುತ್ತಿರುವುದರಿಂದ ಬೆಳೆಯುವರ ಸಂಖ್ಯೆಯಲ್ಲಿ ಕುಸಿತ ಕಂಡು, ಬೆಲೆಯಲ್ಲಿ ನಿರಂತರವಾಗಿ ಹೆಚ್ಚಳವಾಗುತ್ತಿದೆ. ಸದ್ಯಕ್ಕೆ ಟೊಮೆಟೊ ಬೆಲೆ ಇಳಿಯುವ ಲಕ್ಷಣ ಕಾಣುತ್ತಿಲ್ಲ.

ಟೊಮೆಟೊ ಬೆಲೆಯಲ್ಲಿ ಅಗಾಧ ಪ್ರಮಾಣದ ಏರಿಕೆ ಆಗಿದ್ದರೂ, ಅದರ ಸಂಪೂರ್ಣ ಲಾಭ ರೈತರಿಗೆ ದೊರೆಯುತ್ತಿಲ್ಲ. ನೀರಿನ ಸಮಸ್ಯೆಯಿಂದ ಇಳುವರಿ ಕುಂಠಿತಗೊಂಡಿದೆ. ಅಲ್ಲದೆ ಈಗ ಗಾಳಿ- ಮಳೆ ಆರಂಭವಾಗಿರುವುದರಿಂದ ಟೊಮೆಟೊ ಹಣ್ಣು ಗಿಡದಲ್ಲಿಯೇ ಕೊಳೆಯುವ ಅಥವಾ ಉದುರಿ ಹೋಗುವ ಸಾಧ್ಯತೆ ಹೆಚ್ಚು. ಗಾಳಿಗೆ ಟೊಮೆಟೊ ಸಸಿಯೇ ನೆಲಕ್ಕುರುಳಿ ಹೋಗುತ್ತದೆ.

ಅಲ್ಲದೆ ರೈತರು ಮಾರುಕಟ್ಟೆಗೆ ತರುವ ಅತ್ಯುತ್ತಮ ದರ್ಜೆಯ ಟೊಮೆಟೊ ಹೊರ ರಾಜ್ಯಗಳಿಗೆ ಹೋಗುತ್ತಿದೆ. ತಮಿಳುನಾಡು, ಆಂಧ್ರಪ್ರದೇಶದ ನಗರಗಳಿಗೆ ಅತಿ ಹೆಚ್ಚು ಪ್ರಮಾಣದ ಟೊಮೆಟೊವನ್ನು ಮಧ್ಯವರ್ತಿಗಳು ಕಳುಹಿಸುತ್ತಿದ್ದಾರೆ. ಈಗ ಸ್ಥಳೀಯ ಮಾರುಕಟ್ಟೆಯಲ್ಲಿ ದೊರೆಯುತ್ತಿರುವುದು ಕೊಯ್ಲು ಮುಗಿಯುವ ಹಂತದ 2ನೇ ಅಥವಾ 3ನೇ ದರ್ಜೆಯ ಟೊಮೆಟೊ ಮಾತ್ರ. ಇದೇ ಹಣ್ಣಿಗೆ ಗ್ರಾಹಕರು ಕೆ.ಜಿ.ಗೆ ರೂ. 50ಕ್ಕೂ ಹೆಚ್ಚು ಕೊಡಬೇಕು.

ಬೆಲೆಯ ಜೂಜಾಟ
ಟೊಮೆಟೊ ಬೆಳೆಗಾರರಿಗೆ ಸಾಮಾನ್ಯವಾಗಿ ವರ್ಷದಲ್ಲಿ ಒಂದೆರಡು ತಿಂಗಳು ಮಾತ್ರ ಉತ್ತಮ ಬೆಲೆ ದೊರೆಯುತ್ತದೆ. ಅದೂ ನಿರಂತರವಾಗಿ ದೊರೆಯುವುದಿಲ್ಲ. ಇದ್ದಕ್ಕಿದ್ದಂತೆ ಬೆಲೆ ಕುಸಿದು ಬೆಳೆಯಲು ಮಾಡಿದ ಖರ್ಚು ಸಹ ಸಿಗುವುದಿಲ್ಲ. ರೈತರು ನಿರಾಶರಾಗಿ ರಸ್ತೆಗೆ ಟೊಮೆಟೊ ಸುರಿಯುವ ನಿದರ್ಶನ ಪ್ರತಿ ವರ್ಷ ನಡೆಯುತ್ತದೆ. ಇಂತಹ ಸಂದರ್ಭ ಕ್ವಿಂಟಲ್ಗೆ ರೂ. 100- 200ರ ಬೆಲೆ ಇರುತ್ತದೆ. ಮಾರುಕಟ್ಟೆಗೆ ತರುವ ವಾಹನದ ಬಾಡಿಗೆ ಸಹ ಬರುವುದಿಲ್ಲ. ಆದರೂ ಈ ಸಂದರ್ಭದಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ರೂ. 5ರಿಂದ 10ಕ್ಕೆ ಮಾರಾಟವಾಗುತ್ತದೆ. ಇಲ್ಲಿ ಮಧ್ಯವರ್ತಿಗಳು ಬೆಲೆಯ ಕುಸಿತದ ಲಾಭ ಪಡೆಯುತ್ತಾರೆ.

ಆವಕ ಕುಸಿತ
ಎಪಿಎಂಸಿ ತರಕಾರಿ ಮಾರುಕಟ್ಟೆಗೆ ಟೊಮೆಟೊ ಬರುತ್ತಿಲ್ಲ. ಪ್ರತಿ ನಿತ್ಯ ಕ್ವಿಂಟಲ್ ಲೆಕ್ಕದಲ್ಲಿ ಹಣ್ಣು ಮಾರಾಟವಾಗುತ್ತಿತ್ತು. ಆದರೆ ತುಮಕೂರು ಮಾರುಕಟ್ಟೆಗೆ ಮೇನಲ್ಲಿ ಕೇವಲ ನಾಲ್ಕು ದಿನ 15ರಿಂದ 20 ಕೆ.ಜಿ ಹಣ್ಣು ಮಾತ್ರ ಬಂದಿದೆ. ಅಂದರೆ ಇಲ್ಲಿ ಟೊಮೆಟೊ ಬೆಳಯುವುದಿಲ್ಲ ಎಂದಲ್ಲ. ಮಧ್ಯವರ್ತಿಗಳು ರೈತರ ತೋಟಗಳಿಗೆ ನೇರವಾಗಿ ಹೋಗಿ ವ್ಯಾಪಾರ ಮಾಡುತ್ತಾರೆ. ಅಲ್ಲಿಯೇ ಉತ್ತಮ ಬೆಲೆ ಕೊಡುವುದಾಗಿ ಟೊಮೆಟೊ ಕೊಳ್ಳುತ್ತಿದ್ದಾರೆ. ಇಂತಹ ಉತ್ತಮ ಹಣ್ಣನ್ನು ಹೊರ ರಾಜ್ಯಗಳಿಗೆ ಕಳುಹಿಸುತ್ತಾರೆ. ಅಲ್ಲದೆ ಸ್ಥಳೀಯ ಬಳಕೆಗಾಗಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಸಹ ಇಲ್ಲಿಗೆ ಟೊಮೆಟೊ ಹಣ್ಣು ಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.