ಉದ್ಯಾನ ನಗರಿ ಎಂಬ ಬೆಂಗಳೂರಿನ ಹೆಸರು ಸಂಚಾರ, ವಾಹನ ದಟ್ಟಣೆಯ ನಗರಿ (ಟ್ರಾಫಿಕ್ ಸಿಟಿ) ಎಂದು ಕರೆಸಿಕೊಳ್ಳಲು ಹೆಚ್ಚು ಸಮಯ ಬೇಕಿಲ್ಲ ಎನಿಸತ್ತದೆ.

ಹೌದು ಬೆಂಗಳೂರು ಎಂದ ಕೂಡಲೇ ನಮ್ಮ ಕಣ್ಮುಂದೆ ಬರುವುದು ಟ್ರಾಫಿಕ್. ರಸ್ತೆಗಳು ಒಂದು ಕಡೆ ಮೆಟ್ರೊ ಕಾಮಗಾರಿಯಿಂದ, ಇನ್ನೊಂದು ಕಡೆ ಗುಂಡಿ ಬಿದ್ದು ತೇಪೆ ಕೆಲಸದಿಂದ ಹಾಳಾಗಿವೆ. ಇದರ ನಡುವೇ ಮಿತಿ ಮೀರಿ ಹೆಚ್ಚುತ್ತಿರುವ ವಾಹನಗಳು. ಇದನ್ನೆಲ್ಲ ನೋಡಿದರೆ `ಅಭಿವೃದ್ಧಿ ಹೆರಿನಲ್ಲಿ ನಡೆಯುತ್ತಿರುವ ಅಂಧಕಾರ~ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲವೇನೋ.

ದೇಶದಲ್ಲಿ ಜನಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವಂತೆಯೇ ನಮ್ಮ ಸಿಲಿಕಾನ್ ಸಿಟಿಯಲ್ಲಿ ವಾಹನಗಳ ಸಂಖ್ಯೆ ರಾಕೆಟ್ನಂತೆ ಏರುತ್ತಿದೆ. ದೆಹಲಿ ಬಿಟ್ಟರೆ ಹೆಚ್ಚು ವಾಹನಗಳಿರುವ ನಗರ ನಮ್ಮ ಬೆಂಗಳೂರು. ಈಗಾಗಲೇ ನಲವತ್ತು ಲಕ್ಷ ವಾಹನಗಳು ಸಂಚಾರ ಮಾಡುತ್ತಿವೆ. ದಿನಕ್ಕೆ 1300 ವಾಹನಗಳು ಸೇರ್ಪಡೆಗೊಳ್ಳುತ್ತಿವೆ. ಹೀಗೆ ಬೆಳೆದರೆ ಮುಂದಿನ ಐದು ವರ್ಷದ ನಮ್ಮ ಟ್ರಾಫಿಕ್ ಸಿಟಿಯನ್ನು ಊಹಿಸಿಕೊಳ್ಳಿ.

ಈಗಾಗಲೇ ಒಂದು ಕಿ.ಮೀ ತಲುಪಲು 2-3 ಸಿಗ್ನಲ್ನ್ ದಾಟಬೇಕು. ಅಲ್ಲದೇ ಟ್ರಾಫಿಕ್ನಲ್ಲಿ ಸಿಲುಕಿ ನರಳುವುದು ಸಾಮಾನ್ಯ. ಇದರ ನಡುವೇ ಅವಘಡಗಳ ಸಂಖ್ಯೆಯೂ ಮಿತಿ ಮೀರಿದೆ. ಕಳೆದ ಮೂರು ತಿಂಗಳಲ್ಲಿ 1500 ಅವಘಡಗಳು ಸಂಭವಿಸಿದ್ದು 190 ಜನ ಅಪಘಾತದಿಂದ ಮೃತಪಟ್ಟಿರುವುದು ನಮ್ಮ ಬೆಂಗಳೂರಿನ ದಾಖಲೆ.

ವಾಹನಗಳ ಸಂಖ್ಯೆಯ ಹೆಚ್ಚಳಕ್ಕೆ ಪೂರಕವೆಂಬಂತೆ ನಗರದಲ್ಲಿ ಮತ್ತೆ 40 ಸಾವಿರ ಆಟೊಗಳಿಗೆ ಸರ್ಕಾರ ಪರವಾನಿಗೆ ನೀಡಿದೆ. ಇದಕ್ಕೆ ಹೈಕೋರ್ಟ್ನಲ್ಲೂ ಸಮ್ಮತಿ ಸಿಕ್ಕಿದೆ.

ನಗರದಲ್ಲಿ ಈಗಾಗಲೇ 85 ಸಾವಿರ ಆಟೋ ಸಂಚಾರ ಮಾಡುತ್ತಿದ್ದು ಈ ಮೂಲಕ ಆಟೋಗಳ ಸಂಖ್ಯೆ 1.25 ಲಕ್ಷಕ್ಕೆ ಹೆಚ್ಚಲಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಇದನ್ನು ಒಪ್ಪಬಹುದು. ಆದರೆ ಟ್ರಾಫಿಕ್ನ ಗತಿಯನ್ನು ಕಲ್ಪಿಸಿಕೊಳ್ಳಿ.

ಪ್ರಸ್ತುತ 6110 ಬಿಎಂಟಿಸಿ ಬಸ್ಗಳು ಸಂಚಾರ ಮಾಡುತ್ತಿವೆ. ಮುಂದಿನ ಒಂದೆರಡು ತಿಂಗಳಲ್ಲಿ ಇವುಗಳ ಸಂಖ್ಯೆ 7000ಕ್ಕೆ ಸಮೀಪವಾಗಲಿದೆ. ಹೌದು. ಈಗಾಗಲೇ ನೂರು ಹೊಸ ಕರೋನ್ ಬಸ್ ಸೇರಿದಂತೆ ನಗರಕ್ಕೆ 800 ನೂತನ ಬಸ್ಗಳನ್ನು ಶೀಘ್ರದಲ್ಲಿ ಖರೀದಿಸುವ ಪ್ರಕ್ರಿಯೇ ಆರಂಭವಾಗಿದೆ.

ಬೆಂಗಳೂರಿನ ವ್ಯಾಪ್ತಿ ಹೆಚ್ಚಿದೆ ಅಂದ ಮಾತ್ರಕ್ಕೆ ಈ ರೀತಿ ವಾಹನಗಳು ದಿನೇ ದಿನೇ ಹೆಚ್ಚುತ್ತಿರುವುದರಿಂದ ಪರಿಸರ ಮಾಲಿನ್ಯ, ಸಂಚಾರ ವ್ಯವಸ್ಥೆಯ ಮೇಲೆ ಬೀರುವ ಪ್ರಭಾವವನ್ನು ಚಿಂತಿಸಲೇಬೇಕು. ಸ್ಯಾಂಕಿ ರಸ್ತೆಯಲ್ಲಿ ಮರಗಳನ್ನು ಧರೆಗುರುಳಿಸಿದ ದೃಶ್ಯ ಕಣ್ಮುಂದೆ ಇದೆ. ಉಳಿದಿರುವ ಕೆಲವೇ ಕೆರೆಗಳ ಅವಸಾನದ ದಿನಗಳು ದೂರವಿಲ್ಲ.

ಬೆಂಗಳೂರಿನಲ್ಲಿ ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ಬ್ಯಾಟರಿ ಚಾಲಿತ ಹೈಬ್ರಿಡ್ ಬಸ್ಗಳನ್ನು ಬಳಕೆಗೆ ತರಲು ಉದ್ದೇಶಿಸಲಾಗಿದೆ. ಇದರಿಂದ ಮಾಲಿನ್ಯ ಕಡಿಮೆಯಾಗಿ ನಮ್ಮ ಆರೋಗ್ಯ ಸುಧಾರಿಸಬಹುದೇ ವಿನಾ ಸಂಚಾರ ದಟ್ಟಣೆ ಕಡಿಮೆ ಮಾಡುವ ಪ್ರಯತ್ನವಂತೂ ಆಗಲಾರದು.

`ಪೆಟ್ರೋಲ್, ಡೀಸೆಲ್ ದ್ರವರೂಪದ ಬಂಗಾರ; ಇಂಧನ ಉಳಿಸಿ~ ಎಂಬ ತೋರಿಕೆಯ ಬರಹಗಳನ್ನು ಬಸ್ಗಳಲ್ಲಿ ಕಾಣುತ್ತೇವೆ. ಆದರೆ ಇದನ್ನು ಪಾಲಿಸದಿರುವುದು ದುರಂತ. ಎಷ್ಟೋ ಸಲ ಟ್ರಾಫಿಕ್ಗಳಲ್ಲಿ, ಸಿಗ್ನಲ್ಗಳಲ್ಲಿ ಸಾಕಷ್ಟು ಹೊತ್ತು ಬಸ್ ಸೇರಿದಂತೆ ಇತರೇ ವಾಹನಗಳೂ ಚಾಲನೆಯಲ್ಲಿಯೇ ಇರುತ್ತವೆ. ಅಲ್ಲದೇ ನಮ್ಮ ಬೆಂಗಳೂರಿನ ಶ್ರೀಮಂತರು ತಮ್ಮ ಕಾರುಗಳಲ್ಲಿ ಒಂಟಿಯಾಗಿ ಪ್ರಯಾಣಿಸುತ್ತಾರೆ. ಇದನ್ನೆಲ್ಲಾ ಗಮನಿಸಿದರೆ ಸಂಪನ್ಮೂಲ ಉಳಿಕೆಯ ಬರಹಗಳು ತೋರಿಕೆಗೆ ಮಾತ್ರ ಎಂಬುದು ಅರಿವಾಗದಿರದು.

ಈಗಿರುವ ಬಿಎಂಟಿಸಿ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡರೆ ನಿಜಕ್ಕೂ ವಾಹನಗಳ ಸಂಖ್ಯೆಯೂ ಕಡಿಮೆಯಾಗುತ್ತದೆ, ತಕ್ಕಮಟ್ಟಿಗೆ ಸಂಚಾರವೂ ಸುಗಮವಾಗುವ ಸಾಧ್ಯತೆಯಿದೆ.

ಇಂತಹ ಬೃಹತ್ ಬೆಂಗಳೂರಿನ ಬೃಹತ್ ಸಂಚಾರ ವ್ಯವಸ್ಥೆಯ ನಿರ್ವಹಣೆ ಮಾಡುವುದು ನಮ್ಮ ಪೋಲಿಸರಿಗೆ ಸವಾಲಿನ ಕೆಲಸ. ಅವರಿಗೆ ಪ್ರಯಾಣಿಕರ ಸಹಕಾರದ ಅಗತ್ಯವಿದೆ.

ಪೊಲೀಸರು ಇಂದು ಸಂಚಾರ ನಿಯಮಗಳ ಬಗ್ಗೆ ಪ್ರಯಾಣಿಕರಿಗೆ ಬೋಧಿಸುವ ಮಾರ್ಗದರ್ಶಕರೂ ಆಗಿದ್ದಾರೆ. ಆದರೂ ಜನ ನಿಯಮ ಉಲ್ಲಂಘಿಸುತ್ತಿರುವುದು ದುರಂತ.
ಮುಂದಿನ ದಿನಗಳ ಸಿಲಿಕಾನ್ ಸಿಟಿ ಹಸಿರೇ ಇಲ್ಲದ ಬರಡು ಭೂಮಿಯಾಗಿ, ಕಾಂಕ್ರಿಟ್ ನಗರವಾಗಿ ಬದಲಾಗಲಿದೆಯೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.