ಶನಿವಾರ, ಆಗಸ್ಟ್ 15, 2020
23 °C

ಡಯಾಬಿಟಿಸ್ ತಡೆಗೆ ಜಿಐ ಮಾರ್ಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಯಾಬಿಟಿಸ್ ತಡೆಗೆ ಜಿಐ ಮಾರ್ಗ

ನೀವು ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿಯನ್ನು ಹೊಂದಿದ್ದು, ಕ್ಯಾಲೊರಿಗಳ ಲೆಕ್ಕದಲ್ಲಿ  ಆಹಾರಾಭ್ಯಾಸವನ್ನು ರೂಢಿಸಿದ್ದರೂ, ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಬಗ್ಗೆ ಕೇಳಿರದೇ ಇರಬಹುದು.

 

ಜಿಐ ಬಗ್ಗೆ ನೀವು ಕೇಳಿರದಿದ್ದರೆ, ಡಯಾಬಿಟೀಸನ್ನು ದೂರವಿಡುವ ಸುಲಭ ಪದ್ಧತಿಯೊಂದನ್ನು ತಪ್ಪಿಸಿಕೊಂಡಂತಾಗುತ್ತದೆ. ಜಿಐ ಆರೋಗ್ಯ ವಲಯದಲ್ಲಿ ಕ್ರಾಂತಿಕಾರಿ ಮಾರ್ಗವಾಗಿದ್ದು, ಆರೋಗ್ಯದಾಯಕವಾಗಿದೆ.ಇದು ರಕ್ತದಲ್ಲಿ ಸಕ್ಕರೆಯ ಮಟ್ಟದ ಮೇಲೆ ಆಹಾರಗಳಲ್ಲಿನ ಕಾರ್ಬೋಹೈಡ್ರೇಟ್‌ನ ಪರಿಣಾಮವನ್ನು ಹಾಗೂ ಅದರ ಪ್ರಮಾಣವನ್ನು ಅಳೆಯುತ್ತದೆ.  ಒಂದು ಸಲ ಆಹಾರ ಜೀರ್ಣಾಂಗ ವ್ಯವಸ್ಥೆಗೆ ಹೋದ ಬಳಿಕ ಕಾರ್ಬೋಹೈಡ್ರೇಟ್‌ಗಳು ಸಕ್ಕರೆಯ ಮಟ್ಟದೊಂದಿಗೆ ಸೇರುತ್ತವೆ.ರಕ್ತದೊಂದಿಗೆ ಅಂತರ್ಗತವಾಗುತ್ತವೆ. ಇದು ರಕ್ತದಲ್ಲಿ ಸಕ್ಕರೆಯ ಅಂಶವನ್ನು ಹೆಚ್ಚಿಸುತ್ತದೆ. ಜಿಐ (ಗ್ಲೈಸೆಮಿಕ್ ಇಂಡೆಕ್ಸ್ ) ಈ ಪ್ರಕ್ರಿಯೆಯನ್ನು ಅಳೆಯುತ್ತದೆ.ಆಹಾರದಲ್ಲಿರುವ ಕಾರ್ಬೋಹೈಡ್ರೇಟ್‌ಗಳು ತ್ವರಿತವಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟಕ್ಕೆ ಸೇರಿದರೆ ಅತ್ಯಧಿಕ ಜಿಐ ಎಂದು ಪರಿಗಣಿಸಲಾಗುವುದು. ಇದು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ತೀವ್ರವಾಗಿ ಏರಿಸುತ್ತದೆ. ಕಾರ್ಬೋಹೈಡ್ರೇಟ್‌ಗಳು ನಿಧಾನವಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸೇರಿದರೆ ಕಡಿಮೆ ಜಿಐ ಎಂದು ಪರಿಗಣಿತವಾಗುತ್ತದೆ. ಇದು ರಕ್ತದಲ್ಲಿ ನಿಧಾನವಾಗಿ ಸಕ್ಕರೆಯ ಪ್ರಮಾಣವನ್ನು ಹೆಚ್ಚಿಸುತ್ತವೆ.ಜಿಐನ ಅರಿವಿನಿಂದ  ನಿಸ್ಸಂದೇಹವಾಗಿ ಪ್ರಯೋಜನ ದೊರೆಯಲಿದೆ. ಮುಖ್ಯವಾಗಿ ಡಯಾಬಿಟಿಸ್‌ನಿಂದ ಬಳಲುತ್ತಿರುವವರಿಗೆ ಇದು ಸಹಕಾರಿ. ಅವರು ಜಿಐನ ಮೌಲ್ಯವನ್ನು ತಿಳಿದುಕೊಂಡು ಆಹಾರವನ್ನು ಬಳಸಬಹುದು.ಡಯಾಬಿಟಿಸ್ ಇರುವ ವ್ಯಕ್ತಿಗಳು ಅಧಿಕ ಜಿಐ ಮೌಲ್ಯವನ್ನು ಒಳಗೊಂಡಿರುವ ಆಹಾರವನ್ನು ಸೇವಿಸಿದರೆ ರಕ್ತದಲ್ಲಿ ಗ್ಲುಕೋಸ್‌ಮಟ್ಟ ವೇಗವಾಗಿ ಹೆಚ್ಚಾಗುತ್ತದೆ. ಸ್ಥೂಲಕಾಯ, ಬೊಜ್ಜು, ಹೃದಯ ಸಂಬಂಧಿಸಿ ಕಾಯಿಲೆಗಳು ಉದ್ಭವಿಸುತ್ತವೆ.ಕಡಿಮೆ ಜಿಐ ಅಂಶವನ್ನು ಹೊಂದಿರುವ ಆಹಾರ ಪದಾರ್ಥಗಳು ಡಯಾಬಿಟಿಸ್ ಎದುರಿಸುತ್ತಿರುವವರಿಗೆ ಉತ್ತಮ. ಇದರಿಂದ ರಕ್ತದಲ್ಲಿ  ಸಕ್ಕರೆಯ ಮಟ್ಟ ಸಮತೋಲನ ಸ್ಥಿತಿಯಲ್ಲಿರುತ್ತದೆ. ನಿಧಾನಗತಿಯಲ್ಲಿ ಹೆಚ್ಚುತ್ತದೆ.  ಬೊಜ್ಜು, ಸ್ಥೂಲಕಾಯ, ಡಯಾಬಿಟೀಸ್, ಹೃದಯ ಕಾಯಿಲೆಗಳನ್ನು ದೂರವಿಡಲು ಇದರಿಂದ ಸಹಾಯವಾಗುತ್ತದೆ ಎನ್ನುತ್ತಾರೆ ಡಾ. ಪ್ರಿಯಾಂಕಾ ರೋಹ್‌ಟಗಿ.ಪೋಷಕಾಂಶ...

ಡಯಾಬಿಟಿಸ್‌ನೊಂದಿಗೆ ಬದುಕುತ್ತಿರುವವರು ಮಿತ ಭೋಜನ ಮತ್ತು ಉಪಾಹಾರ ಸೇವಿಸಬೇಕು. ಕಡಿಮೆ ಜಿಐ ಮೌಲ್ಯವನ್ನು ಒಳಗೊಂಡಿರುವ ಆಹಾರವನ್ನು ಸೇವಿಸಬೇಕು. ದಿನಕ್ಕೆ ಮೂರು ದೊಡ್ಡ ಮಟ್ಟಿನ ಭೋಜನವನ್ನು ಸೇವಿಸುವುದರ ಬದಲಿಗೆ ಕಡಿಮೆ ಜಿಐ ಮೌಲ್ಯದ, ಕಾರ್ಬೋಹೈಡ್ರೇಟ್, ಪ್ರೊಟೀನ್ ಭರಿತ ಆಹಾರಗಳನ್ನು ಮಿತವಾಗಿ ಸೇವಿಸುವುದು ಹಿತಕರ ಎನ್ನುತ್ತಾರೆ ಡಾ. ಜ್ಯೋತಿ ಪ್ರಸಾದ್.ಜಿಐ ಪಾತ್ರವನ್ನು ಮರೆಯದಿರಿ....

ಕಡಿಮೆ ಜಿಐ ಆಹಾರಗಳು ನಿಧಾನವಾಗಿ ಕರಗುತ್ತವೆ. ದಿನಪೂರ್ತಿ ಚಟುವಟಿಕೆಯಿಂದಿರಲು ನೆರವಾಗುತ್ತವೆ. ಆದ್ದರಿಂದ ದಿನ ನಿತ್ಯ ಕಡಿಮೆ ಜಿಐ ಮೌಲ್ಯವನ್ನು ಹೊಂದಿರುವ ಆಹಾರ ಪದಾರ್ಥಗಳನ್ನು (ಗರಿಷ್ಠ ಸಂಕೀರ್ಣ ಕಾರ್ಬೊಹೈಡ್ರೇಟ್ಸ್, ಹೆಚ್ಚುವರಿ ಪಥ್ಯಾಹಾರ, ಪ್ರೋಟೀನ್, ಜಿಡ್ಡಿನಂಶ ಇಲ್ಲದ, ಕಡಿಮೆ ಕೊಲೆಸ್ಟ್ರಾಲ್ ಇರುವ ಆಹಾರಗಳು)  ಸೇವಿಸಿದರೆ ಡಯಾಬಿಟೀಸ್‌ನಿಂದ ದೂರವಿರಲು ಸಾಧ್ಯವಾಗುತ್ತದೆ.

 

ಇದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿರುತ್ತದೆ. ಓಟ್ ಧಾನ್ಯ, ರಾಗಿ, ಬ್ರೌನ್ ರೈಸ್, ದ್ವಿದಳ ಧಾನ್ಯ, ಕಾಳುಗಳಲ್ಲಿ ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್‌ಗಳು ಇರುತ್ತವೆ.ಪಥ್ಯಾಹಾರ ಸತ್ವಗಳಲ್ಲಿ ಎರಡು ವಿಧಗಳಿವೆ. ಕರಗುವ ಸತ್ವಗಳು ಮತ್ತು ಕರಗದ ಸತ್ವಗಳು. ಓಟ್ ಧಾನ್ಯದಂತಹ ಆಹಾರದಲ್ಲಿ  ಸಮತೋಲನದ ಪ್ರಮಾಣದಲ್ಲಿ ಇರುತ್ತವೆ. ಇಂತಹ ಆಹಾರ ಪದಾರ್ಥಗಳು ಡಯಾಬಿಟಿಸ್ ಹೊಂದಿರುವವರಿಗೆ ರಕ್ತದಲ್ಲಿ  ಗ್ಲುಕೋಸ್ ಪ್ರಮಾಣವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗುತ್ತದೆ. ಓಟ್ಸ್, ಗೋಧಿಯಂತಹ ಆಹಾರ ಪದಾರ್ಥಗಳು ಕೊಲೆಸ್ಟ್ರಾಲ್‌ಮಟ್ಟವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ. ಲಘು ಉಪಾಹಾರದಲ್ಲಿ ಅತ್ಯಧಿಕ ಕೊಲೆಸ್ಟ್ರಾಲ್ ಇರುವುದು ಉತ್ತಮವಲ್ಲ. ಇದರಲ್ಲಿ ಕೊಬ್ಬಿನಂಶ ಇಲ್ಲದಿರುವುದು ಹಿತಕಾರಿ. ಡಯಾಬಿಟಿಸ್ ಇರುವವರಿಗೆ ಸಂಯುಕ್ತ ಓಟ್ಸ್, ರಾಗಿ ಆಧಾರಿತ ಉಪಾಹಾರ  ಇದೀಗ ಲಭ್ಯ.

ಕಡಿಮೆ ಜಿಐ ಆಹಾರಗಳು

ರಾಗಿ, ಓಟ್ಸ್, ಹುರುಳಿ, ಅವರೆಕಾಳಿನ ಜಾತಿಯ ಕಾಳು, ಬಟಾಣಿ, ಹೆಪ್ಪಾದ ಮೊಸರು, ಫ್ರೂಟ್ ಬ್ರೆಡ್ಅಧಿಕ ಜಿಐ  ಆಹಾರಗಳು

ಬ್ರೆಡ್, ಆಲೂಗಡ್ಡೆ, ಜೇನುತುಪ್ಪ, ಅಕ್ಕಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.