ತುಮಕೂರು: ಸಂಬಳ, ಸಾರಿಗೆ ಭತ್ಯೆ, ಲಾಂಛನ ಬದಲಾವಣೆ, ಬೆಂಗಳೂರಿಗೆ ಘಟಿಕೋತ್ಸವ ಸ್ಥಳಾಂತರ ಸೇರಿದಂತೆ ಸದಾ ಒಂದಿಲ್ಲೊಂದು ವಿವಾದಗಳ ಸುತ್ತಲೇ ತಿರುಗುತ್ತಿರುವ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಸ್.ಸಿ.ಶರ್ಮಾ ಹದಿನೇಳು ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡುವ ಮೂಲಕ ವಿನೂತನ `ದಾಖಲೆ~ ನಿರ್ಮಿಸಿದ್ದಾರೆ.

ತುಮಕೂರು ಜಿಲ್ಲೆಗಷ್ಟೇ ಸೀಮಿತವಾಗಿರುವ ವಿ.ವಿ.ಯು ಗೌರವ ಡಾಕ್ಟರೇಟ್ ನೀಡಿಕೆಯಲ್ಲಿ ಮಾತ್ರ ರಾಜ್ಯದ ದೊಡ್ಡ ವಿಶ್ವವಿದ್ಯಾಲಯಗಳನ್ನು ಮೀರಿಸಿದೆ. ರಾಜ್ಯದ ಇತಿಹಾಸದಲ್ಲಿ ಯಾವುದೇ ವಿಶ್ವವಿದ್ಯಾನಿಲಯ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಗೌರವ ಡಾಕ್ಟರೇಟ್ ನೀಡಿದ ಉದಾಹರಣೆ ಇಲ್ಲ.

ಶುಕ್ರವಾದರವರೆಗೂ ಯಾರಿಗೆ ಗೌರವ ಡಾಕ್ಟರೇಟ್ ನೀಡಬೇಕು ಎಂಬುದೂ ನಿರ್ಧಾರವಾಗಿರಲಿಲ್ಲ. ಶುಕ್ರವಾರ ನಡೆದ ವಿ.ವಿ. ಸಿಂಡಿಕೇಟ್ ಸಭೆಯಲ್ಲಿ ಗೌರವ ಡಾಕ್ಟರೇಟ್ ನೀಡುವ ಸಂಬಂಧ ಚರ್ಚೆಯಾಗಿದೆ. ಅಂತಿಮವಾಗಿ ರಾಜ್ಯಪಾಲರಿಂದ ಅನುಮತಿ ಪಡೆಯಲಾಗಿದೆ.

ಕುಲಪತಿ ಶರ್ಮಾ ಅವಧಿ ಈ ಶೈಕ್ಷಣಿಕ ವರ್ಷ ಕೊನೆಗೊಳ್ಳಲಿದೆ. ಡಾಕ್ಟರೇಟ್ ಪಡೆದ ಗಣ್ಯರ ಪಟ್ಟಿಯ ಪರಿಚಯದಲ್ಲೂ ಸರಿಯಾದ ಮಾಹಿತಿ ನೀಡುವಲ್ಲೂ ವಿ.ವಿ. ಮುಗ್ಗರಿಸಿರುವುದು ಪಟ್ಟಿಯನ್ನು ತರಾತುರಿಯಲ್ಲಿ ಮಾಡಿರುವುದಕ್ಕೆ ಸಾಕ್ಷಿಯಾಗಿದೆ.

ಘಟಿಕೋತ್ಸವದಲ್ಲಿ ಭಾಗಿಯಾಗುವ ಗಣ್ಯರೊಬ್ಬರಿಗೆ ಝಡ್ ಪ್ಲಸ್ ಭದ್ರತೆ ನೀಡಬೇಕಿರುವುದರಿಂದ ಘಟಿಕೋತ್ಸವವನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ ಎಂಬ ಕುಲಪತಿ ಹೇಳಿಕೆ ಕೂಡ ಜಿಲ್ಲೆಯ ಪೊಲೀಸ್ ಇಲಾಖೆಗೆ ಇರುಸು ಮುರಿಸು ಉಂಟು ಮಾಡಿದೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಪ್ರತಿ ದಿನ ಇಬ್ಬರು, ಮೂವರು ಗಣ್ಯರಿಗೆ ಝಡ್ ಪ್ಲಸ್ ಭದ್ರತೆ ನೀಡಲಾಗುತ್ತಿದೆ. ಕುಲಪತಿ ಹೇಳಿಕೆ ನೋಡಿ ಅಚ್ಚರಿಯಾಯಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಆರ್.ಸುರೇಶ್ `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ್ದಾರೆ.

ಘಟಿಕೋತ್ಸವ ಬೆಂಗಳೂರಿಗೆ ಸ್ಥಳಾಂತರ ಮಾಡಿರುವುದಕ್ಕೆ ಭದ್ರತೆ ನೆಪವೊಡ್ಡಿರುವ ಕುಲಪತಿ ಕ್ರಮಕ್ಕೆ ಜಿಲ್ಲೆಯ ವಿವಿಧ ಸಂಘಟನೆಗಳು ಕಿಡಿಕಾರಿವೆ. ವಿ.ವಿ. ಪದವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಬಹಿರಂಗಗೊಂಡು ಪರೀಕ್ಷೆಗಳನ್ನು ಮುಂದೂಡಲಾಗಿದೆ. ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರು ಕುಲಪತಿಗಳ ಇಚ್ಛಾನುಸಾರ ನಡೆದುಕೊಳ್ಳುತ್ತಿರುವುದು ಇಂಥ ಘಟನೆಗಳಿಗೆ ಕಾರಣವಾಗುತ್ತಿದೆ ಎಂದು ಡಿವೈಎಫ್ಐ ಜಿಲ್ಲಾ ಘಟಕದ ಕಾರ್ಯದರ್ಶಿ ಎಸ್.ರಾಘವೇಂದ್ರ ಆರೋಪಿಸಿದ್ದಾರೆ.

ಗೌರವ ಡಾಕ್ಟರೇಟ್ ಪಡೆದ ಗಣ್ಯರು: ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಪ್ರೊ.ರುಡಾಲ್ಫ್ ಎ.ಮಾರ್ಕಸ್, ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಪ್ರೊ.ಎರಿಕ್ ಎಸ್.ಮಸ್ಕಿನ್, ಸಂಗೀತ ವಿದುಷಿ ರಾಧಾ ವಿಶ್ವನಾಥನ್, ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ, ಶಿಕ್ಷಣ ತಜ್ಞ ಬಿ.ಎನ್.ವಿ.ಸುಬ್ರಮಣ್ಯ, ಯೋಗ ತಜ್ಞೆ ಡಾ.ಆರ್.ನಾಗರತ್ನಾ, ಸಂಗೀತ ವಿದುಷಿ ಆರ್.ವೇದವಲ್ಲಿ, ಎಸ್ಬಿಎಂ ಮಾಜಿ ವ್ಯವಸ್ಥಾಪಕ ನಿರ್ದೇಶಕ ದಿಲೀಪ್ ಮಾವಿನಕುರ್ವೆ, ಸಮಾಜ ಸೇವಕರಾದ ರಾಗಿಣಿ ನಾರಾಯಣ್, ಪ್ರೊ.ಪಿ.ಎಸ್.ಅಂಬಿಕಾದೇವಿ, ಸಂಶೋಧಕ ಡಾ.ಷಡಕ್ಷರಸ್ವಾಮಿ, ಬೆಂಗಳೂರು ವಿ.ವಿ. ಮಾಜಿ ಕುಲಪತಿ ಪ್ರೊ.ಎನ್.ಆರ್.ಶೆಟ್ಟಿ, ಹೈಕೋರ್ಟ್ ನ್ಯಾಯಾಧೀಶ ಜವಾದ್ ರಹೀಮ್, ಪಾವಗಡ ರಾಮಕೃಷ್ಣ ಆಶ್ರಮದ ಮುಖ್ಯಸ್ಥ ಜಪಾನಂದಜಿ, ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮದರ್ಶಿ ಜಿ.ಭೀಮೇಶ್ವರ ಜೋಷಿ, ಅರ್ಥಶಾಸ್ತ್ರಜ್ಞ ಡಾ.ಕೆ.ಪುಟ್ಟಸ್ವಾಮಯ್ಯ, ಉದ್ಯಮಿ ಎಸ್.ಎಂ.ವೆಂಕಟಪತಿ ಸೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.