ಹುಬ್ಬಳ್ಳಿ: `ಸಿಎಂ ಸರ್, ಶಿಕ್ಷಣ ಹಕ್ಕು ಕಾಯ್ದೆ ಜಾರಿಯಾದ ನಂತರವೂ ಖಾಸಗಿ ಶಾಲೆಗಳಲ್ಲಿ ಡೊನೇಶನ್ ಕೇಳಿದರೆ ಏನು ಮಾಡಬೇಕು~...

ಹೀಗೊಂದು ಅನಿರೀಕ್ಷಿತ ಪ್ರಶ್ನೆ ನಗರದಲ್ಲಿ ಬುಧವಾರ ಬಾಲವಿಕಾಸ ಅಕಾಡೆಮಿ ಆಯೋಜಿಸಿದ್ದ `ಮಕ್ಕಳೊಂದಿಗೆ ಮುಖ್ಯಮಂತ್ರಿ~ ಕಾರ್ಯಕ್ರಮದಲ್ಲಿ ತೂರಿ ಬಂದಿತು.

ಸಮಾರಂಭದ ಅಂಗವಾಗಿ ನಡೆದ ಸಂವಾದದಲ್ಲಿ ಧಾರವಾಡದ ಕೆಎನ್ಕೆ ಪ್ರೌಢಶಾಲೆಯ ವಿದ್ಯಾರ್ಥಿನಿ ಭಾಗ್ಯಶ್ರೀ ದೇಸಾಯಿ ಮೇಲಿನಂತೆ ಕೇಳಿದಾಗ ಸಿಎಂ ಜಗದೀಶ ಶೆಟ್ಟರ್ ಕ್ಷಣಕಾಲ ತಬ್ಬಿಬ್ಬಾದರೂ ನಗುತ್ತಲೇ ಉತ್ತರಿಸಿದರು.

ಡೊನೇಶನ್ ನಿಯಂತ್ರಣಕ್ಕಾಗಿಯೇ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದಿದೆ. ಸರ್ಕಾರದ ನಿರ್ದೇಶನದನ್ವಯ ಕಾಯ್ದೆಯಡಿ ಶಾಲೆಗೆ ದಾಖಲಿಸಿಕೊಳ್ಳದಿದ್ದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಗೆ ದೂರು ನೀಡುವಂತೆ ಅಥವಾ ತಮಗೆ ನೇರವಾಗಿ ದೂರು ಕೊಡುವಂತೆ ಮಕ್ಕಳ ಪಾಲಕರಿಗೆ ಹೇಳಿದಾಗ ಸಮಾರಂಭದಲ್ಲಿ ನೆರೆದಿದ್ದ ಮಕ್ಕಳಿಂದ ಚಪ್ಪಾಳೆಯ ಪ್ರತಿಕ್ರಿಯೆ.

`ನಿಮ್ಮ ವಯಸ್ಸಿನಲ್ಲಿ ಇದ್ದಾಗ ನಾನು ನಿಮ್ಮಷ್ಟು ಶ್ಯಾಣೇ ಇರಲಿಲ್ಲ. ನೀವು ಬಹಳ ಶ್ಯಾಣೇ ಇದ್ದೀರಿ~ ಎಂದು ಮಕ್ಕಳನ್ನು ಶೆಟ್ಟರ್ ಹುರಿದುಂಬಿಸಿದರು.

`ನಾಗಶೆಟ್ಟಿಕೊಪ್ಪದ ಸರ್ಕಾರಿ ಶಾಲೆ ನಂ 9ರಲ್ಲಿ ಕೇವಲ 8ನೇ ತರಗತಿಯವರೆಗೆ ಮಾತ್ರ ಓದಲು ಅವಕಾಶವಿದೆ. 9 ಹಾಗೂ 10ನೇ ತರಗತಿ ಆರಂಭಿಸುವಂತೆ~ ಶಾಲೆಯ ವಿದ್ಯಾರ್ಥಿನಿ ರೆಹಾನಾ ಮಕಾನದಾರ ಮಾಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ ಕೂಡಲೇ ಹೊಸ ತರಗತಿಗಳ ಆರಂಭಿಸಲು ಪ್ರಸ್ತಾವ ಸಲ್ಲಿಸಲು ಸ್ಥಳದಲ್ಲಿದ ಡಿಡಿಪಿಐ ಡಾ.ಬಿ.ಕೆ.ಎಸ್.ವರ್ಧನ ಅವರಿಗೆ ಸೂಚನೆ ನೀಡಿದರು.

`ಶಾಲಾ ಗ್ರಂಥಾಲಯಗಳಲ್ಲಿ ಪುಸ್ತಕಗಳೇ ಇಲ್ಲ. ನೀವು ಎಲ್ಲಾ ಶಾಲೆಗಳಿಗೆ ಹೊಸ ಪುಸ್ತಕ ಕೊಡಿಸಿ~ ಎಂದು ವಿದ್ಯಾರ್ಥಿನಿ ಶ್ವೇತಾ ಕೇಳಿದ ಪ್ರಶ್ನೆಗೆ `ನೀವು ಮಕ್ಕಳು ಮೊದಲು ಓದುವ ಹವ್ಯಾಸ ರೂಢಿಸಿಕೊಳ್ಳಿರಿ. ಖಂಡಿತವಾಗಿಯೂ ಪುಸ್ತಕ ಕೊಡಿಸುವೆ~ ಎಂದು ಶೆಟ್ಟರ್ ಮಕ್ಕಳಿಗೆ ಕಿವಿಮಾತು ಹೇಳಿದರು.

`ನೀವು ಬಾಲ್ಯದಲ್ಲಿ ನಮ್ಮಂತೆಯೇ ತುಂಟತನ ಮಾಡುತ್ತಿದ್ದಿರಾ~? ಎಂದು ಪ್ರಾಚಿ ಸಂಶೀಕರ ಕೇಳಿದಾಗ `ಹೌದು ಸಿಕ್ಕಾಪಟ್ಟೆ ತುಂಟನಾಗಿದ್ದೆ~ ಎಂದು ಶೆಟ್ಟರ್ ಉತ್ತರಿಸಿದರು. `ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಜೀತಕ್ಕೆ ಇದ್ದಾರೆ. ಅವರನ್ನು ಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡಿ ಅಂಕಲ್~ ಎಂದು ಸಯ್ಯದ್ ಸೊರಟೂರ್ ಕೇಳಿದಾಗ ಸಿಎಂ ಒಪ್ಪಿಗೆ ಸೂಚಿಸಿದರು.

ಸಂವಾದ ಆರಂಭಕ್ಕೆ ಮೊದಲು ಮಾತನಾಡಿದ ಜಗದೀಶ ಶೆಟ್ಟರ್ ಪತ್ನಿ ಶಿಲ್ಪಾ, ವಿದೇಶಗಳ ಶಾಲೆಗಳಲ್ಲಿ ಮಕ್ಕಳಿಗೆ ಅಲ್ಲಿಯೇ ಪುಸ್ತಕಗಳನ್ನು ಇಡುವ ವ್ಯವಸ್ಥೆಯನ್ನು ಕಲ್ಪಿಸಿರುತ್ತಾರೆ. ಅದೇ ರೀತಿ ಇಲ್ಲಿಯೂ ಆ ವ್ಯವಸ್ಥೆ ಜಾರಿಗೆ ತಂದು ಮಕ್ಕಳ ಬೆನ್ನಿನ ಮೇಲಿನ ಭಾರ ಇಳಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರು.

ಸಂವಾದದ ನಂತರ ಮಕ್ಕಳಿಗೆ ಸಿಹಿ ತಿಂಡಿಯ ಪೊಟ್ಟಣ ವಿತರಿಸಲಾಯಿತು. ಸಮಾರಂಭದಲ್ಲಿ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ ಟಿಂಗಿನಕಾಯಿ, ಮಹೇಂದ್ರ ಕಂಠಿ ಮತ್ತಿತರರು ಪಾಲ್ಗೊಂಡಿದ್ದರು.

ಸದನದಲ್ಲಿ `ನಿಲುವಳಿ ಸೂಚನೆ~ಗೆ ಅವಕಾಶ
`ಮಕ್ಕಳ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ವಿಧಾನಸಭೆ ಅಧಿವೇಶನದಲ್ಲಿ ಪ್ರಶ್ನೆಗಳನ್ನೇ ಕೇಳುವುದು ಬಿಟ್ಟಿದ್ದಾರೆ~ ಎಂದು ಸಂವಾದದ ವೇಳೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿಷಾದ ವ್ಯಕ್ತಪಡಿಸಿದರು.

`ಸದನದಲ್ಲಿ ಚರ್ಚೆಯಾದಾಗ ಮಾತ್ರ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಗಂಭೀರತೆ ಇಡೀ ರಾಜ್ಯಕ್ಕೆ ಅರ್ಥವಾಗುತ್ತದೆ. ಅದಕ್ಕೆ ಸೂಕ್ತ ಪರಿಹಾರ ದೊರೆಯುತ್ತದೆ. ಸ್ಪೀಕರ್ ಅವರೊಂದಿಗೆ ಮಾತನಾಡಿ ಇನ್ನು ಮುಂದೆ ಅಧಿವೇಶನದ ಸಂದರ್ಭದಲ್ಲಿ ಮಕ್ಕಳ ಸಮಸ್ಯೆಗಳ ಕುರಿತು ಚರ್ಚೆ ನಡೆಸಲು `ನಿಲುವಳಿ ಸೂಚನೆ~ ಮೂಲಕ ಸಮಯಾವಕಾಶ ಮೀಸಲಿಡಲು ಪ್ರಯತ್ನಿಸುವುದು~ ಎಂದು ಶೆಟ್ಟರ್ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.