ತಂತ್ರಜ್ಞಾನ ಆವಿಷ್ಕಾರ ಸಮ್ಮೇಳನ
ತಂತ್ರಜ್ಞಾನ ದಿನಕ್ಕೊಂದು ರೂಪ ತಾಳುತ್ತದೆ. ಅನ್ವೇಷಣೆಗಳಿಗೆ ತಂತ್ರಜ್ಞಾನ ಜಗತ್ತಿನಲ್ಲಿ ಅವಕಾಶಗಳು ಹಲವು. ಆದರೆ ಅಂತಹ ಆವಿಷ್ಕಾರಗಳು ಕ್ರಮೇಣ ಕಣ್ಮರೆಯಾಗುತ್ತವೆ. ಈ ಅನ್ವೇಷಣೆಗಳ ಬಗ್ಗೆ ಚರ್ಚಿಸಲು ಮತ್ತು ಭವಿಷ್ಯದ ತಂತ್ರಜ್ಞಾನದ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳಲು ನಗರದಲ್ಲಿ ಸಮ್ಮೇಳನವೊಂದು ನಡೆಯಲಿದೆ.
`ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್~ ಎಂಬ ಈ ತಂತ್ರಜ್ಞಾನ ಸಮ್ಮೇಳನ ಭಾರತೀಯ ವಿಜ್ಞಾನ ಸಂಸ್ಥೆಯ ಜೆಎನ್ ಟಾಟಾ ಸಭಾಂಗಣದಲ್ಲಿ ಇಂದು (ಜುಲೈ 13) ಹಾಗೂ ನಾಳೆ (14) ನಡೆಯಲಿದೆ.
ಇಸ್ರೇಲ್, ಅಮೆರಿಕ, ಕೆನಡಾ, ಬ್ರಿಟನ್, ಐರೋಪ್ಯ ರಾಷ್ಟ್ರಗಳ ನೂರಾರು ತಂತ್ರಜ್ಞಾನ ತಜ್ಞರು ಭಾರತೀಯ ತಂತ್ರಜ್ಞರೊಂದಿಗೆ ಚಿಂತನ ಮಂಥನ ನಡೆಸುವರು. ಆವಿಷ್ಕಾರದ ಮೂಲ, ತಂತ್ರಜ್ಞಾನದ ಭವಿಷ್ಯದ ಕುರಿತು ಹಲವು ಚರ್ಚೆ, ವಿಚಾರಗೋಷ್ಠಿ ನಡೆಸಲು ಇಲ್ಲಿಗೆ ಆಗಮಿಸಲಿದ್ದಾರೆ.
ಇಸ್ರೋ, ಇನ್ಫೋಸಿಸ್, ವಿಪ್ರೋ, ಎಚ್ಎಎಲ್, ಐಐಟಿ, ಭಾರತೀಯ ವಿಜ್ಞಾನ ಸಂಸ್ಥೆ, ಡೈಮರ್ ಕ್ರಿಸ್ಲರ್ನಂತಹ ಪ್ರತಿಷ್ಠಿತ ಸಂಸ್ಥೆಗಳ ತಂತ್ರಜ್ಞಾನ ಮುಖ್ಯಸ್ಥರು ಮಾತ್ರವಲ್ಲದೆ, ಜಗತ್ತಿನ ನೂರಾರು ಕಂಪೆನಿಗಳ ಮುಖ್ಯಸ್ಥರು ತಂತ್ರಜ್ಞಾನದ ಹಲವು ಆಯಾಮಗಳ ಕುರಿತು ತಮ್ಮ ವಿಚಾರಮಂಡನೆ ಮಾಡಲಿದ್ದಾರೆ.
ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ತಾಂತ್ರಿಕ ಬೆಳವಣಿಗೆಯೂ ಅಷ್ಟೇ ಮುಖ್ಯ. ಬೇರೆ ದೇಶಗಳ ತಂತ್ರಜ್ಞಾನದ ಮೇಲೆ ಅವಲಂಬಿತವಾಗುವ ಬದಲು ನಮ್ಮ ದೇಶದಲ್ಲೇ ಅವಶ್ಯಕ ತಾಂತ್ರಿಕತೆಯನ್ನು ಕಂಡುಕೊಂಡರೆ ನಮ್ಮ ದೇಶಕ್ಕೇ ಒಳಿತು ಎಂಬ ವಿಷಯ ಸಾರುವುದೇ ಈ ಸಮ್ಮೇಳನದ ಮುಖ್ಯ ಉದ್ದೇಶ.
ಇಂದಿನಿಂದ ಆರಂಭಗೊಳ್ಳಲಿರುವ ಸಮ್ಮೇಳನ ದೇಶದ ತಾಂತ್ರಿಕ ಅಭಿವೃದ್ಧಿಯ ಮೇಲೆ ಬೆಳಕು ಚೆಲ್ಲುತ್ತದೆ. ಹಿಂದಿನ ಆವಿಷ್ಕಾರಗಳ ಮನನ, ಪ್ರಸ್ತುತ ತಾಂತ್ರಿಕ ಸ್ಥಿತಿಗತಿ ಮತ್ತು ಭವಿಷ್ಯದ ತಂತ್ರಜ್ಞಾನದ ಕುರಿತು ಯೋಜನೆ ರೂಪಿಸಲು ಈ ಸಮ್ಮೇಳನ ವಿಪುಲ ಅವಕಾಶ ಒದಗಿಸಲಿದೆ. ಈ ಸಮ್ಮೇಳನವನ್ನು ಟೀಮ್ ಟೆಕ್ ಗ್ರೂಪ್ ಆಯೋಜಿಸಿದೆ.
ಹಲವು ಹಿರಿಯ ಸಂಶೋಧಕರು, ಸಣ್ಣ ಕೈಗಾರಿಕೆಗಳು, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳ ಸದಸ್ಯರು, ಹೂಡಿಕೆ ಸಂಸ್ಥೆಗಳು ಇದರಲ್ಲಿ ಭಾಗವಹಿಸಲಿವೆ.
ಈ ಸಮಾವೇಶದಲ್ಲಿ ಹೊಸ ತಂತ್ರಜ್ಞಾನ, ಹೊಸ ಆಲೋಚನೆಗಳು, ನ್ಯಾಷನಲ್ ಲ್ಯಾಬೊರೇಟರೀಸ್, ಸಂಶೋಧನಾ ಕೇಂದ್ರಗಳ ಯೋಜನೆಗಳು, ಸ್ವಅನುಭವಗಳ ವಿನಿಮಯವೂ ನಡೆಯಲಿವೆ.
ಉದ್ಯೋಗ ಸೃಷ್ಟಿ, ಭಾರತೀಯ ತಂತ್ರಜ್ಞಾನದ ವಿಸ್ತರಣೆ, ವಿಶ್ವದ ಮಾರುಕಟ್ಟೆಯಲ್ಲಿನ ಸವಾಲುಗಳ ಬಗ್ಗೆಯೂ ಚರ್ಚೆ ನಡೆಯಲಿದೆ.ಮೇಡ್ ಇನ್ ಇಂಡಿಯಾ ಉತ್ಪನ್ನಗಳು ಹೆಚ್ಚು ಹೊರಬರುವಂತೆ ಮಾಡುವುದು ಈ ಯೋಜನೆಯ ಉದ್ದೇಶ. ಈ ಸಮ್ಮೇಳನದ ಅಂಗವಾಗಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
`ರಿ ಕನ್ಸಿಡರ್ ಅಂಡ್ ರಿಡಿಸೈನ್ ಯುವರ್ ಓನ್ ಟೆಕ್ನಿಕಲ್ ಸೊಲ್ಯೂಷನ್~, ಪ್ರೊಟೊಟೈಪ್, ಇನ್ವೆನ್ಶನ್, ಕಮರ್ಷಿಯಲ್ ಪ್ರಾಜೆಕ್ಟ್ ವಯಾ ಐಡಿಯಲೈಜೇಶನ್ ಆಫ್ ರಷ್ಯನ್ ಟ್ರ್ಿ ಮೆಥಡಾಲಜಿ, ಇನ್ಕ್ಯುಬೇಟರ್ಸ್ ಟು ವಿಸೀಸ್, ಟೆಕ್ನಾಲಜಿ ಫಾರ್ ಸೊಸೈಟಲ್ ಅಪ್ಲಿಕೇಶನ್ ಹೀಗೆ ಹಲವು ವಿಷಯಗಳಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಕರೆಂಟ್ ಅಂಡ್ ಫ್ಯೂಚರ್ ಟ್ರೆಂಡ್ಸ್ ಇನ್ ಏರೋ ಎಂಜಿನ್ ಟೆಕ್ನಾಲಜಿ, ಸ್ಪೇಸ್ಕ್ರಾಫ್ಟ್ ಪ್ರೊಪಲ್ಶನ್ ಸಿಸ್ಟಮ್ ರೀಸೆಂಟ್ ಟ್ರೆಂಡ್ಸ್, ಥ್ರಸ್ಟ್ ವೆಕ್ಟರಿಂಗ್ ನೋಜಲ್ ಟೆಕ್ನಾಲಜೀಸ್-ಫೈಟರ್ ಎಂಜಿನ್ಸ್, ಗಿಯರ್ಡ್ಫ್ಯಾನ್ ಟೆಕ್ನಾಲಜಿ-ಟ್ರಾನ್ಸ್ಪೋರ್ಟ್ ಎಂಜಿನ್ಸ್, ಅಡ್ವಾನ್ಸ್ಡ್ ಸ್ಪಾನ್ಸರ್ಡ್ ಟೆಕ್ನಾಲಜಿ ಡೆವಲಪ್ಮೆಂಟ್ ಪ್ರೋಗ್ರಾಮ್ಸ: ಅಕಾಡೆಮಿಯಾ ಅಂಡ್ ಆರ್ ಅಂಡ್ ಡಿ ಇನ್ಸ್ಟಿಟ್ಯೂಷನ್ ಈ ವಿಷಯದ ಬಗ್ಗೆ ಉಪನ್ಯಾಸಗಳು ನಡೆಯಲಿವೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.